
ಎಲೆಕ್ಟ್ರಾನಿಕ್ ಎಂಜಿನಿಯರ್ ಅಸೋಸಿಯೇಷನ್ ಗೆ ಅಣ್ಣಾವ್ರ ಕೊಡುಗೆ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 106
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಎಲೆಕ್ಟ್ರಾನಿಕ್ ಎಂಜಿನಿಯರ್ ಅಸೋಸಿಯೇಷನ್ ಅವರು ನಮಗೊಂದು ಮ್ಯೂಸಿಕಲ್ ನೈಟ್ಸ್ ಮಾಡಿಕೊಡಿ. ನಮ್ಮ ಆಡಿಟೋರಿಯಂ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶ ಕೊಡುವುದಿಲ್ಲ. ಆದರೆ, ರಾಜ್ಕುಮಾರ್ ಅವರ ಮ್ಯೂಸಿಕಲ್ ನೈಟ್ಸ್ ಎಂದು ಹೇಳಿದ್ದಕ್ಕೆ ಟೆನಿಸ್ ಸ್ಟೇಡಿಯಂ ಅವರು ಪರ್ಮಿಷನ್ ಕೊಟ್ಟರು.
ಟೆನಿಸ್ ಆಡಿಟೋರಿಯಂ ಪೂರ್ತಿ ಆಗಿತ್ತು. ಜನ ಕಿಕ್ಕಿರಿದು ಕೂತಿದ್ದರು. ಕಾರು ನಿಲ್ಲಿಸಲು ಕಬ್ಬನ್ ಪಾರ್ಕ್ನಲ್ಲಿ ಜಾಗ ಇರಲಿಲ್ಲ. ಆ ಕಾಲದಲ್ಲಿ ಒಂದು ಕೋಟಿ ಸಂಗ್ರಹವಾಗಿತ್ತು. ರೇಸ್ಕೋರ್ಸ್ ರಸ್ತೆ ಪ್ರವೇಶಿಸುತ್ತಲೇ ಇರುವ ಕಾಂಗ್ರೆಸ್ ಆಫೀಸ್ ಪಕ್ಕದಲ್ಲಿಯೇ ಅವರು ದೊಡ್ಡ ಭವನ ಕಟ್ಟಿಸಿದ್ದಾರೆ. ಅದಕ್ಕೆ ರಾಜ್ಕುಮಾರ್ ಆಡಿಟೋರಿಯಂ ಎಂದೇ ಹೆಸರಿಟ್ಟಿದ್ದಾರೆ. ಮ್ಯೂಸಿಕಲ್ ನೈಟ್ಸ್ ನಿಂದ ಬಂದ ಹಣ ಸಾರ್ಥಕವಾಗಬೇಕು ಎಂಬುದೇ ರಾಜ್ಕುಮಾರ್ ಅವರ ಉದ್ದೇಶವಾಗಿತ್ತು. ನಾನೆಷ್ಟೇ ಕಷ್ಟಪಟ್ಟರೂ ಪರ್ವಾಗಿಲ್ಲ. ನಾಲ್ಕು ಜನಕ್ಕೆ ಸಹಾಯವಾಗುವುದಾದರೆ ನನ್ನ ಕಷ್ಟ ನಾನು ಮರೆಯುತ್ತೇನೆ ಎನ್ನುತ್ತಿದ್ದರು.
ಮುಂದುವರೆಯುವುದು…