ಎಲ್ರುನ್ನೂ ಮೋಟಿವೇಟ್ ಮಾಡ್ತಿದ್ದ ಶಂಕರ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 54

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)ಸುಂದರಶ್ರೀ: ಎರಡು ಮೂರು ಇನ್ಸಿಡೆಂಟ್ ನಿಮಗೆ ಹೇಳ್ತೀನಿ, ನಂದಿ ಬೆಟ್ಟದಲ್ಲಿ ಶೂಟಿಂಗ್ ನಡಿತಾ ಇತ್ತು. ಅಸಿಸ್ಟಂಟ್ ಡೈರೆಕ್ಟರ್ ಗಳು ಪ್ರೊಡಕ್ಷನ್ ಮ್ಯಾನೇಜರ್ ಜಗ್ಗ, ಎಲ್ರೂ ಅಲ್ಲೇ ಇದ್ರು. ಶಂಕರ್ ಏನೋ ಹೇಳ್ಬೇಕಿತ್ತು. ನಮ್ಮ ಟೀಮ್ ಹೇಗಿತ್ತು ಅಂದ್ರೆ, ಒಬ್ಬರ ಮನಸ್ಸನ್ನ ಅರಿತು ಕೆಲ್ಸ ಮಾಡ್ತಿದ್ವಿ. ಫ್ಯಾಮಿಲಿ ತರ ಇದ್ವಿ ನಾವೆಲ್ಲ. ಮನೆಯಲ್ಲಿ ಇನ್ನೊಬ್ಬರ ಮನಸ್ಸನ್ನ ಅರ್ಥ ಮಾಡ್ಕೊಂಡು ಕೆಲ್ಸ ಮಾಡುವ ಹಾಗೆ, ಸೆಟ್ ಅಲ್ಲೂ ಮಾಡ್ತಿದ್ವಿ. ನಂದಿ ಬೆಟ್ಟದಲ್ಲಿ ಶೂಟಿಂಗ್ ನಡಿತಾ ಇತ್ತು. ಅಲ್ಲಿ ದೊಡ್ಡದೊಂದು ಬೋರ್ಡ್ ಇತ್ತು, ಅದನ್ನ ತಗಿಬೇಕು ಅಂದ್ರೆ, ಫಾರೆಸ್ಟ್ ಡಿಪಾರ್ಟ್ ಮೆಂಟ್ ಅವ್ರೇ ಬಂದು ತಗಿಬೇಕು. ಅದು ಫ್ರೇಮಲ್ಲಿ ಬರ್ತಾ ಇದೆ. “ರಾಮು ಸರ್ ಅದನ್ನ ತಗಿ ಬೇಕು ಅಂತ ಹೇಳ್ತಿದ್ದಾರೆ, ಏನ್ಮಾಡೋದು ಜಗ್ಗ?” ಅಂದ್ರೆ, ಜಗ್ಗ “ನೀವು ಏನೂ ಯೋಚ್ನೆ ಮಾಡ್ಬೇಡಿ. ಶೂಟಿಂಗ್ ಶುರು ಮಾಡಿ” ಅಂದ್ರು. ಪರ್ಮಿಶನ್ ಇಲ್ದೇನೆ ಹೆಂಗೆ ತಗಿಯೋದು? ಆದ್ರೆ ತೆಗ್ದು ಶೂಟಿಂಗ್ ಮುಗ್ಸಿ ಫಾರೆಸ್ಟ್ ಡಿಪಾರ್ಟಮೆಂಟ್ ಅವ್ರು ಬರುವಷ್ಟರಲ್ಲಿ ಮತ್ತೆ ಹಾಕಿ ಆಗಿತ್ತು.


ಇನ್ನೊಂದೇನಾಯ್ತು ಅರಸಾಳು, ತೀರ್ಥಳ್ಳಿಯಿಂದ 2 ಹವರ್ಸ್ ಜರ್ನಿ. ನಾವು ಆಗುಂಬೆಯಲ್ಲಿ ಶೂಟಿಂಗ್ ಮಾಡ್ತಾ ಇದ್ದೀವಿ. ಅರಸಾಳು ನಲ್ಲಿ ರೈಲ್ವೇ ಸ್ಟೇಷನ್ ಸೀನ್ ಇರೋದು. ನಾವು ರೈಲ್ವೇ ಸ್ಟೇಷನಲ್ಲಿ ಶೂಟ್ ಮಾಡ್ಬೇಕು ಅಂದ್ರೆ, ಚೆನ್ನೈಗೆ ಹೋಗಿ ಅಲ್ಲಿ ದುಡ್ಡು ಕಟ್ಟಿ, ಪರ್ಮೀಶನ್ ತಗೊಂಡು ಬರ್ಬೇಕು. “ಏನ್ಮಾಡೊದು?” ಅಂತ ಶಂಕರ್ ಜಗ್ಗನ ಕೇಳಿದ್ರು. “ಒಂದು ಕೆಲ್ಸ ಮಾಡೋಣ ನಮಗೆ ಸ್ಟೇಷನ್ ಅಷ್ಟೇ ಬೇಕಲ್ವಾ? ರೈಲು ಬೇಡ. ಮಿಕ್ಕಿದೆಲ್ಲ ಹೊರಗಡೆ ಶೂಟ್ ಮಾಡೋಣ ಬೆಳಗ್ಗೆ ಅರಸಾಳುಗೆ ಹೋಗೋಣ” ಅಂದ್ರು. ನಾವು ಆಗುಂಬೆಯಲ್ಲಿ ರಾತ್ರಿ 11 ಗಂಟೆವರೆಗೂ ಶೂಟ್ ಮಾಡಿದ್ದೀವಿ. ಆಗುಂಬೆಯಿಂದ 3 ಹವರ್ಸ್ ಜರ್ನಿ ಅರಸಾಳುಗೆ. ಅಲ್ಲಿಂದ ರಾತ್ರಿ ಎಲ್ಲರೂ ಹೊರಟ್ರು. ಅದಿಕ್ಕೆ ಮುಂಚೆನೇ ಕೆಲವು ಜನರನ್ನ ಜಗ್ಗ ಅರಸಾಳುಗೆ ಶಿಫ್ಟ್ ಮಾಡಿಬಿಟ್ಟಿದ್ದ. ಅಲ್ಲಿಂದ ನಾವೆಲ್ಲ ಒಟ್ಟಿಗೆ ಹೋದ್ವಿ. ಅಲ್ಲಿ ತಲುಪಿದಾಗ ಬೆಳಗಿನ ಜಾವ 3 ಗಂಟೆ ಆಗಿತ್ತು. ಆರು ಗಂಟೆಗೆ ಟ್ರೇನ್ ಬರುವಾಗ ವಿತ್ ಮೇಕಪ್ ಎಲ್ಲಾ ರಡಿ ಇರ್ಬೇಕಲ್ವ? ಹೋದ ತಕ್ಷಣನೇ ಮಾಸ್ಟರ್ ಮಂಜು, ಅನಂತ್ ನಾಗ್, ಮೇಷ್ಟ್ರು, ಜ್ಯೂನಿಯರ್ ಆರ್ಟಿಸ್ಟ್ಗಳು ಯಾಕಂದ್ರೆ ಪಿ.ಸಿ.ಗಳು, ಪೋಲಿಸ್ ನವರು ಎಲ್ಲಾ ಬೇಕಾಗುತ್ತಲ್ವ? ಪಾಸಿಂಗ್ ಶಾಟ್ಸ್ ಗೆ.


ನೀವು ನೋಡಿ ‘ಸ್ವಾಮಿ’ಯಲ್ಲೂ ಗೊತ್ತಾಗುತ್ತೆ, ‘ಮಿಠಾಯಿವಾಲ’ ದಲ್ಲೂ ಗೊತ್ತಾಗುತ್ತೆ. ಎಷ್ಟು ಚೆನ್ನಾಗಿ ಮಾಡಿದ್ದಾರೆ ಅಂದ್ರೆ? ನನಗೆ ನಿಜವಾಗ್ಲೂ ಮರಿಯಕ್ಕಾಗ್ದೇ ಇರುವ ಘಟನೆ. ಬೆಳಗ್ಗಿನ ಜಾವ ಐದು ವರೆ ಅಷ್ಟೊತ್ತಿಗೆ ಎಲ್ರೂ ರಡಿ, ಈವನ್ ಅನಂತ್ ನಾಗ್ ಅವ್ರೂ ಕೂಡ ರಡಿ ಇದ್ರು. ಒಂದು ಹ್ಯಾರಿ ಕ್ಯಾಮೆರಾ, ರಾಮು ಸರ್ ಹ್ಯಾಂಡಲ್ ಮಾಡ್ತಿದ್ರು, ಮಿಚ್ವಲ್ ಕ್ಯಾಮೆರಾ ಅವ್ರ ಅಸಿಸ್ಟೆಂಟ್ ಮಲ್ಲಿಕಾರ್ಜುನ್ ಹ್ಯಾಂಡಲ್ ಮಾಡ್ತಿದ್ರು. ಒಂದು ಕ್ಯಾಮೆರಾ ಟ್ರೇನ್ ಬರುವ ಕಡೆಗೆ ಇಟ್ಟಿದ್ರು, ಇನ್ನೊಂದು ಕ್ಯಾಮೆರಾ ಟ್ರೇನ್ ಹೋಗುವ ಕಡೆ ಇಟ್ಟಿದ್ರು. ಟ್ರೇನ್ ಬಂದು ಅಲ್ಲಿ ನಿಲ್ತಾ ಇದ್ದದ್ದು ಬರೀ ಮೂರು ನಿಮಿಷ ಅಷ್ಟೇ. ಅಷ್ಟರೊಳಗೆ ಆ ಶಾಟ್ ಗಳನ್ನ ತಗೊಬೇಕಾಗಿತ್ತು. ಟಿಸಿ ಹತ್ರ ಮಾತಾಡಿ ಐದು ನಿಮಿಷಕ್ಕೆ ಪರ್ಮೀಶನ್ ತಗೊಂಡಿದ್ದ ಜಗ್ಗ. ಅಷ್ಟರಲ್ಲಿ ಆ ಸೀನ್ ಮುಗಿಸಬೇಕು. ರೀಟೇಕ್ ಮಾಡಕ್ಕಾಗಲ್ಲ. ನಿಜವಾಗ್ಲೂ ಆ ವರ್ಕ್ ಇದ್ಯಲ್ಲಾ, ಈಗ್ಲು ನೆನೆಸ್ಕೊಂಡ್ರೆ ನನಿಗೆ ಖುಷಿಯಾಗುತ್ತೆ. ಯಾಕಂದ್ರೆ ನಾವು ಆಟೀಮಲ್ಲಿ ವರ್ಕ್ ಮಾಡಿದ್ದೀವಿ ಅಂತ. ಆರು ಗಂಟೆಗೆ ಟ್ರೇನ್ ಬಂತು, ಆರು ಗಂಟೆ ಐದು ನಿಮಿಷಕ್ಕೆ ಹೊರ್ಟೇ ಬಿಡ್ತು. ಅಷ್ಟರಲ್ಲಿ ಎಲ್ಲಾ ಶಾಟ್ ಗಳನ್ನ ಮುಗ್ಸಿದಾರೆ ನೋಡಿ. ಆ ಮೇಲೆ ಕ್ಲೋಸಪ್ ಶಾಟ್ ಗಳನ್ನ, ಜನರೇಟರ್ ಗಾಡಿಯಲ್ಲಿ ಚೀಟ್ ಮಾಡಿ, ಮಾಡಿರೋದು. ಬೇರೆ ವಿಚಾರ ಬಿಟ್ಬಿಡಿ. ಬಟ್ ಇದು ನಾನು ಹೇಳೋದು ಟೀಮ್ ವರ್ಕ್ ಬಗ್ಗೆ. ಶಂಕರ್ ಸುತ್ತಮುತ್ತ ಇರುವವರನ್ನ ಎಂಕರೇಜ್ ಮಾಡಿ, ವರ್ಕ್ ಮಾಡುವಹಾಗೆ ಮಾಡೋರು.ಮುಂದುವರೆಯುವುದು…

20 views