ಎಲ್ಲ ನಿರ್ದೇಶಕರು ಬಂದು ನನಗೆ ನಮಸ್ಕಾರ ಮಾಡ್ತಿದ್ರು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 40

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ನನಗೆ ಜನಗಳು ಹೆಂಗೆ ಅಷ್ಟು ಗೌರವ ಕೊಡಕ್ಕೆ ಶುರು ಮಾಡಿದ್ರೂ ಅಂದ್ರೆ, ಮಾಲ್ಗುಡಿಯಲ್ಲಿ ಕೆಲ್ಸ ಮಾಡಿದ್ದಾರೆ ಇವ್ರೂಂತಂದ್ರೆ ಬಂದು ನಮಸ್ಕಾರ ಮಾಡ್ತಿದ್ರು. ಹೊರಗಡೆ ಸ್ಟೇಟವ್ರು ಕೂಡ ಕನ್ನಡ ಸಿನಿಮಾ ಡೈರೆಕ್ಟ್ ಮಾಡ್ತಾರೆ. ಉದಾಹರಣೆಗೆ ಪಿ.ವಾಸು, ತಮಿಳ್ನಾಡವ್ರು ಕನ್ನಡ ಸಿನಿಮಾಗಳನ್ನ ಸೆಕ್ಸೆಸ್ ಫುಲ್ಲಾಗೇ ಮಾಡಿದ್ದಾರೆ. ನರಸಿಂಹ ರಾವ್ ಅಂತ ಅವ್ರೂ ಮಾಡ್ತಿದ್ರು.


ಪರಮ್: ರಾಘವೇಂದ್ರ ರಾವ್ ಅವ್ರೂ ಮಾಡ್ತಿದ್ರು…?


ರಮೇಶ್ ಭಟ್: ಅಂದ್ರೆ ಹೊರಗಡೆಯ ಸ್ಟೇಟವ್ರು ಕೆಲವರು ಭಾಷೆ ಗೊತ್ತಿಲ್ದೇ ಇದ್ರೂ ಕೂಡ ಇಲ್ಲಿಗೆ ಬಂದು ಡೈರೆಕ್ಟ್ ಮಾಡ್ತಿದ್ರು. ಈಗ ಸಚಿನ್ ಅಂತ ಮರಾಠಿ ಚೈಲ್ಡ್ ಆರ್ಟಿಸ್ಟ್ ಶೋಲೆ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರಲ್ಲ? ಅವ್ರು ಗ್ರೇಟ್ ಡಾನ್ಸರ್, ಮರಾಠಿಯಲ್ಲಿ ದೊಡ್ಡ ಡೈರೆಕ್ಟರ್ ಅವ್ರು. ‘ಏಕದಂತ’ ಅಂತ ಒಂದು ಸಿನಿಮಾ ಕನ್ನಡದಲ್ಲಿ ಡೈರೆಕ್ಟ್ ಮಾಡಿದ್ರು. ವಿಷ್ಣುವರ್ಧನ್ ಆಕ್ಟ್ ಮಾಡಿದ್ರು. ನಾನೂ ಕೂಡ ಆಕ್ಟ್ ಮಾಡಿದ್ದೆ. ಅಂದ್ರೆ ಭಾಷೆ ಗೊತ್ತಿಲ್ದೇ ಇದ್ರೂ ಡೈರೆಕ್ಟ್ ಮಾಡೋದು ಇದೆ. ಆ ತರ ಬಂದ ಡೈರೆಕ್ಟರ್ ಗಳಿಗೆ, ಇವ್ರು ಮಾಲ್ಗುಡಿ ಡೇಸಲ್ಲಿ ವರ್ಕ್ ಮಾಡಿದ್ದಾರೆ ಅಂತ ಗೊತ್ತಾದ್ರೆ ನಾನು ಇರುವ ಜಾಗಕ್ಕೆ ಬಂದು ನಮಸ್ಕಾರ ಮಾಡ್ತಾರೆ. ಪ್ಲೀಸ್ ಆಕ್ಸಪ್ಟ್ ದಿಸ್ ಅಂತ. ಯಾಕೆ ಅಂದ್ರೆ, “ಏನು ಸಾರ್ ಎಂಥಾ ಲೆಜೆಂಡ್ ಜೊತೆ ವರ್ಕ್ ಮಾಡಿದ್ದೀರ? ವಾಟ್ ಅ ವಂಡರ್ಫುಲ್ ಜಾಬ್ ದಟ್ ಈಸ್, ವಿ ಆರ್ ಪ್ರೌಡ್ ಆಫ್ ಯು ಥಾಂಕ್ಯೂ” ಅನ್ನೋರು.ಮುಂದುವರೆಯುವುದು…

11 views