ಎಸ್.ಪಿ.ಬಿ ಅವರಲ್ಲಿ ಮಾತ್ರವೇ ಇತ್ತು ಆ ಸ್ಪೆಷಲ್‌ಸಾಮರ್ಥ್ಯ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 125


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಬಯಲುದಾರಿ ಸಿನಿಮಾ ತೆಗಿದಾಗ ನಮ್ಮ ಕ್ಯಾಂಪ್‌ಗೆ ಎಸ್‌ಪಿಬಿ ಪ್ರವೇಶ ಪಡೆದ. ಯಾರು ಸಿನಿಮಾಕ್ಕೆ ಹೀರೊ ಎಂದು ಕೇಳಿದ. ಅನಂತ್‌ನಾಗ್‌ಎಂದೆ. ಅವರ ಶೈಲಿಯಲ್ಲಿಯೇ ನಾನು ಹಾಡುತ್ತೇನೆ ಎಂದ. ಎಸ್‌.ಪಿ.ಬಿ ಯಾರು ಹೀರೊ ಎಂದು ಕೇಳಿ, ಅವರ ಸ್ವರದಲ್ಲಿಯೇ ಹಾಡುತ್ತಿದ್ದ. ಆ ರೀತಿಯ ಸಾಮರ್ಥ್ಯ ಎಸ್‌.ಪಿ.ಬಿ ಯಲ್ಲಿತ್ತು.


‘ಚೆಲ್ಲಿವೆ ಎಲ್ಲಿರುವೆ ಮನವ ಕಾಡುವ ರೂಪಸಿಯೇʼ, ʼಕನಸಲ್ಲೂ ನೀನೇ ಮನಸ್ಸಲೂ ನೀನೆʼ... ಹಾಡುಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಆ ಹಾಡುಗಳನ್ನು ಹಿಂದಿ, ತೆಲುಗು, ತಮಿಳು.. ಹೀಗೆ ಎಲ್ಲದಕ್ಕೂ ಕಾಪಿ ಮಾಡಿ ಹಾಕಿಬಿಟ್ಟಿದ್ದಾರೆ. ಚಂದನದ ಗೊಂಬೆಯಲ್ಲೂ ಅವನೇ ಹಾಡಿದ್ದಾನೆ. ನನ್ನ ನಟನೆಗೆ ಎಸ್‌ಪಿಬಿ ಧ್ವನಿ ಹೊಂದುತ್ತದೆ. ಅವರನ್ನೆ ಹಾಕಿ ಎಂದು ವಿಷ್ಣುವರ್ಧನ್‌ ಕೇಳುತ್ತಿದ್ದ. ವಿಷ್ಣುವಿನ ಬಹುತೇಕ ಸಿನಿಮಾಗಳಿಗೆ ಎಸ್‌ಪಿಬಿಯೇ ಗಾಯಕ. ಅವನಿಗೆ ಕೊರೊನಾ ಬಂದ ಸಂದರ್ಭದಲ್ಲಿ ಡಾಕ್ಟರ್‌ಗಳು ಅವರೇ ಹಾಡಿರುವ ಭಕ್ತಿ ಗೀತೆಗಳನ್ನು ಹಾಕಿ ಬೇಗ ಹುಷಾರಾಗುತ್ತಾರೆ ಎಂದು ಹೇಳಿದ್ದಾರಂತೆ. ಅವನ ಹೆಂಡತಿಗೂ ಕೊರೊನಾ ಎಂದಾಗ ನನಗೆ ತುಂಬಾ ಸಂಕಟವಾಗಿತ್ತು.ಮುಂದುವರೆಯುವುದು...

20 views