ಎಸ್.ಪಿ.ಬಿ ಅವರಿಗೆ ಹಿನ್ನೆಲೆ ಗಾಯಕ ಇದ್ದರು

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-13
ಶಾಸ್ತ್ರಿ ಟ್ರ್ಯಾಕ್‌ ಹಾಡಿದ್ದ ಹಾಡಿನ ಛಾಯೆ ಎಸ್‌ಪಿಬಿ ಅವರು ಹಾಡಿದ್ದರಲ್ಲಿ ಇರುತ್ತಿತ್ತು. ನೀನೇ ಹಾಡಿದ್ದ ಎಂದು ಶಾಸ್ತ್ರಿ ಅವರನ್ನು ನಾನು ಕೇಳಿದ್ರೆ, ಇಲ್ಲ ನಾನು ಹಾಡಿದ್ದನ್ನು ಅವರು ಕೇಳಿಸಿಕೊಂಡಿದ್ದಾರಲ್ಲ ಚೆನ್ನಾಗಿದೆ ಎಂದು ಅದನ್ನು ಉಳಿಸಿಕೊಂಡಿದ್ದಾರೆ ಎನ್ನುತ್ತಿದ್ದರು. ಟ್ರ್ಯಾಕ್‌ ಹಾಡು ಚೆನ್ನಾಗಿದ್ದರೆ, ಎಸ್‌ಪಿ ಅವರೇ ಇದೇ ಚೆನ್ನಾಗಿದೆಯಲ್ವಾ ಉಳಿಸಿಕೊಳ್ಳಿ. ನಾನ್ಯಾಕೆ ಹಾಡಬೇಕು ಎಂದು ಎಷ್ಟೋ ಬಾರಿ ಹೇಳಿದ್ದಾರೆ. ಆದರೆ, ನಿರ್ಮಾಪಕರು ನೀವೇ ಬೇಕು ಎಂದಿದ್ದಾರೆ ಹಾಗಾಗಿ ನೀವೇ ಹಾಡಿ ಎಂದು ಸಂಗೀತ ನಿರ್ದೇಶಕರು ಅವರಿಗೆ ಹೇಳುತ್ತಿದ್ದರು.


ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರಿಗೆ ಶಾಸ್ತ್ರಿ ಅವರನ್ನು ಕಂಡರೆ ಬಹಳ ಇಷ್ಟ. ‘ನಾನು ಕನ್ನಡದ ಹೀರೊಗಳಿಗೆ ಹಿನ್ನೆಲೆ ಗಾಯ. ಆದರೆ, ನನಗೆ ಒಬ್ಬ ಹಿನ್ನೆಲೆ ಗಾಯಕನಿದ್ದಾನೆ. ಅದು ಶಾಸ್ತ್ರಿ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಶಾಸ್ತ್ರಿ ಅವರಿಗೆ ಹುಷಾರಿಲ್ಲ ಎಂದು ತಿಳಿದ ನಂತರ, ನಮ್ಮನ್ನು ಸಂಪರ್ಕಿಸಿ ಚಿಕಿತ್ಸೆಗೆ ಒಂದಷ್ಟು ಹಣವನ್ನು ಕೊಟ್ಟಿದ್ದರು. ನಂತರ ಹದಿನೈದು ದಿನ ಬಿಟ್ಟು ನಮ್ಮ ಮನೆಗೆ ಬಂದು, ಮಾತನಾಡಿಸಿ, ಸಮಾಧಾನ ಮಾಡಿ, ಕಣ್ಣಲ್ಲಿ ನೀರು ಹಾಕಿಕೊಂಡರು. ಏನಾದ್ರೂ ತೊಂದರೆ ಇದ್ರೆ ಹೇಳು. ನನ್ನ ಕೈಯಲ್ಲಾದರೆ ಖಂಡಿತ ಮಾಡುತ್ತೇನೆ ಎಂದು ನನಗೆ ಹೇಳಿ ಹೋಗಿದ್ರು.ಮುಂದುವರೆಯುವುದು...

25 views