ಎಸ್.ಪಿ.ಬಿ ಅವರ ಮಲ್ಟಿ ಟಾಸ್ಕಿಂಗ್‌ ಕೆಲಸಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 128


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಎಸ್‌ಪಿಬಿ ಅವರು ಬಾಳೊಂದು ಚದುರಂಗ ಸಿನಿಮಾದಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ ಆಗಬೇಕಿತ್ತು. ಅವರು ಒಪ್ಪಿಕೊಂಡಿದ್ದರು. ಅದರಲ್ಲಿ ಒಂದು ಪಾತ್ರವು ಅವರಿಗೆ ಇತ್ತು. ಚಿನ್ನೇಗೌಡರು ಅದಕ್ಕೆ ಪ್ರೊಡ್ಯೂಸರ್‌. ಒಂದೆರಡು ಸೆಷನ್‌ ಕೂಡ ನಡೆದಿತ್ತು. ಅವರಿಗೆ ಬಹಳ ಫೋನ್ ಬರುತ್ತಿತ್ತು. ಎದ್ದು ಹೋಗಿ ಪದೇ, ಪದೇ ಮಾತನಾಡುತ್ತಿದ್ರು.


ಆಗ ಮೊಬೈಲ್‌ ಬಂದಿರಲಿಲ್ಲ. ಲ್ಯಾಂಡ್‌ಲೈನ್‌ಗೆ ಫೋನ್‌ ಬರುತ್ತಿತ್ತು. ಅವರಿಗೆ ಪೂರ್ಣವಾಗಿ ಗಮನ ಹರಿಸಲು ಆಗುತ್ತಿರಲಿಲ್ಲ. ಹಾಗಾಗಿ, ಅವರೇ ‘ಶ್ರೀನಿವಾಸ್‌ಗೆ ಮ್ಯೂಸಿಕ್‌ ಡೈರೆಕ್ಟರ್‌ ಜವಾಬ್ದಾರಿ ಕೊಡಿ. ಎ.ಆರ್‌. ರೆಹಮಾನ್‌ಗೆ ಇವನೇ ಸಹಾಯಕ. ಚೆನ್ನಾಗಿ ಸಂಯೋಜನೆ ಮಾಡುತ್ತಾನೆ. ಬೇಕಾದರೆ ನಾನು ನೆರವಾಗುತ್ತೇನೆ. ಹಾಡುಗಳನ್ನು ಹಾಡುತ್ತೇನೆ. ನಟನೆಯನ್ನು ಮಾಡುತ್ತೇನೆ’ ಎಂದರು. ಶ್ರೀನಿವಾಸ್ ಕೂಡ ಕಂಪೋಸಿಂಗ್‌ಗೆ ಕೂರುತ್ತಿದ್ದ. ನಂತರ ಶ್ರೀನಿವಾಸ್‌ ಅವರೇ ಅದರ ಮ್ಯೂಸಿಕ್‌ ಡೈರೆಕ್ಟ್‌ ಮಾಡಿದ್ರು.ಮುಂದುವರೆಯುವುದು...

13 views