ಎಸ್‌ಪಿಬಿ ಲವ್‌ಸ್ಟೋರಿಗೆ ನಾನೇ ಸಾಕ್ಷಿ...

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 125


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಮದ್ರಾಸಿನ ಮಂದವಳಿ ಎಂಬ ಪ್ರದೇಶದಲ್ಲಿ ದೇವನಾದನ್‌ಸ್ಟ್ರೀಟ್‌ನಲ್ಲಿ ನಂ.8ನೇ ಮನೆಯಲ್ಲಿ ನಾವಿದ್ದೆವು. ನಮ್ಮದೇ ಸ್ವಂತ ಮನೆಯದು. ನನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳವು. ಜೇಡರ ಬಲೆ ಸಿನಿಮಾ ಮಾಡಿದ್ದೆ. 1970–71 ನೇ ಇಸವಿಯದು.


ನಮ್ಮ ಮನೆಯ ಎದುರುಗಡೆ ನಂ. 12ನೇ ಮನೆಯ ಮುಂದೆ ಪ್ರತಿದಿನ ಆರು ಗಂಟೆಗೆ ಕಾರೊಂದು ಬಂದು ನಿಲ್ಲುತ್ತಿತ್ತು. ಹುಡುಗಿಯೊಬ್ಬಳು ಬಂದು ಅದರಲ್ಲಿ ಕುಳಿತುಕೊಳ್ಳುತ್ತಿದ್ದಳು. ರಾತ್ರಿ ಹತ್ತು ಗಂಟೆಗೆ ಕಾರು ವಾಪಸ್‌ಬರುತ್ತಿತ್ತು. ಹುಡುಗಿ ಕಾರಿನಿಂದ ಇಳಿದು ಮನೆಯೊಳಗೆ ಹೋಗುತ್ತಿದ್ದಳು. ಹುಡುಗ ಕಾರಿನಲ್ಲಿ ವಾಪಸ್‌ಹೋಗುತ್ತಿದ್ದ. ಇದು ಪ್ರತಿದಿನ ನಡೆಯುತ್ತಿತ್ತು. ಕಾರಿನಲ್ಲಿ ಬರುತ್ತಿದುದ್ದು, ಎಸ್‌.ಪಿ ಬಾಲಸುಬ್ರಹ್ಮಣ್ಯಂ. ನಮ್ಮ ಮನೆಯ ಎದುರಿಗೆ ಇದಿದ್ದು, ಅವನ ಹೆಂಡತಿ. ನನ್ನನ್ನು ನೋಡಿದಾಗ ನಮಸ್ಕಾರ ಹೇಳುತ್ತಿದ್ದ. ಆಗಲೇ ಅವನು ಜನಪ್ರಿಯರಾಗಿದ್ದ. ಕನ್ನಡದಲ್ಲಿಯೂ ವೃತ್ತಿಜೀವನ ಆರಂಭಿಸಿದ್ದ.


ಮುಂದುವರೆಯುವುದು...

9 views