ಏನೂ ಗೊತ್ತಿಲ್ಲದ ನಾನೂ ಮಾಲ್ಗುಡಿ ಭಾಗ ಆದೆ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 107

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ವೆಂಕಟೇಶ್: ನಾನು ವೆಂಕಟೇಶ್ ಅಂತ. ಐ ಆಮ್ ಚಾರ್ಟಡ್ ಅಕೌಂಟ್ ಪ್ರಾಕ್ಟೀಸಿಂಗ್ ಫ್ರಮ್ ಲಾಸ್ಟ್ 30 ಯಿಯರ್ಸ್. ಬದ್ರಿ, ನರಸಿಂಹನ್ ಅವ್ರ ಮಗ, ನರಸಿಂಹನ್ ಈಸ್ ಪ್ರೊಡ್ಯೂಸರ್ ಆಫ್ ‘ಮಾಲ್ಗುಡಿ ಡೇಸ್.’ಬದ್ರಿನಾನು ಜೊತೆಯಲ್ಲೇ ಸಿ.ಎ. ಮಾಡ್ತಾ ಇದ್ವಿ. ಆ ಟೈಮಲ್ಲೇ ಮಾಲ್ಗುಡಿ ಶುರುವಾಗಿದ್ದು. ನರಸಿಂಹನ್ ಅವ್ರು ನಾನು ಚಿಕ್ಕವನಿರುವಾಗ್ಲಿಂದನೇ ಪರಿಚಯ, ನಾನು ಅವ್ರ ಮನೆಯವ್ರ ತರನೇ ಇದ್ದೆ. ಅವ್ರು ವಿ಼ಷ್ಣುವರ್ಧನ್ ಅವ್ರ ‘ಬಂಗಾರದ ಜಿಂಕೆ’ನಾಗಾಭರಣಡೈರಕ್ಷನಲ್ಲಿಪ್ರೊಡ್ಯೂಸ್ಮಾಡಿದ್ರು. ಅದಿಕ್ಕೆಮುಂಚೆ ‘ಬ್ಯಾಂಕರ್ ಮಾರ್ಗಯ್ಯ’ಮಾಡಿದ್ರು. ಬ್ಯಾಂಕರ್ ಮಾರ್ಗಯ್ಯ ಆರ್.ಕೆ.ನಾರಾಯಣ್ ಅವ್ರ ಕಾದಂಬರಿ, ಅದ್ರಲ್ಲಿ ಲೋಕೇಶ್ ಮತ್ತೆ ಜಯಂತಿ ಅವ್ರು ಆಕ್ಟ್ ಮಾಡಿದ್ರು. ಕೊಪ್ಪದಲ್ಲಿ ಶೂಟ್ ಆಗಿದ್ದು. ಆ ಟೈಮಲ್ಲಿ ನಾನು ಬದ್ರಿ ಅವ್ರ ಜೊತೆಯಲ್ಲಿ ಸುಮ್ನೆ ಹೋಗಿ ಅಲ್ಲಿ ಇದ್ದು ಬಂದಿದ್ವಿ. ಅದು ನನ್ನ ಫಸ್ಟ್ ಎಕ್ಸಪೀರಿಯನ್ಸ್ ಫಿಲ್ಮ್ ಮೇಕಿಂಗಲ್ಲಿ.


1985 ರಲ್ಲಿ ಶಂಕರ್ ನಾಗ್ ಅವ್ರ ಡೈರಕ್ಷನಲ್ಲಿ ಮಾಲ್ಗುಡಿ ಡೇಸ್ ಶುರು ಮಾಡಿದ್ರು. ಫಸ್ಟ್ ಪೈಲೆಟ್ ಎಪಿಸೋಡ್ ಮಾಡಿದ್ದು ʼಓಲ್ಡ್ಮ್ಯಾನ್ ಆಫ್ ದ ಟೆಂಪಲ್, ಮಂದಿರ್ ಕಾ ಬೂಡ ’ ಅಂತ. ಅದ್ರಲ್ಲಿ ಅನಂತ್ ನಾಗ್ ಮತ್ತೆ ಬಿಮಲ್ ದೇಸಾಯಿ ಆಕ್ಟ್ ಮಾಡಿದ್ರು. ಬಿಮಲ್ ದೇಸಾಯಿ ಬೆಂಗಳೂರಿನ ಇಂಗ್ಲೀಷ್ ಥಿಯೇಟರಲ್ಲಿ ಬಹಳ ಹೆಸರು ಮಾಡಿದ್ದ. ಆ ಟೈಮಲ್ಲಿ ನರಸಿಂಹನ್ ನನ್ನ ಕರ್ದು “ಬಂದು ಸ್ವಲ್ಪ ಹೆಲ್ಪ್ ಮಾಡ್ತೀಯಾ?” ಅಂತ ಕೇಳಿದ್ರು. ನನಿಗೆ ಅವಾಗ ನನ್ನ ಪ್ರೊಫೆಶನ್ ಬಗ್ಗೆ ಬಹಳ ಕಾಳಜಿ ಇತ್ತು. ನಾನು ಹೇಳ್ದೆ “ಇಲ್ಲ ನಾನು ಈ ಲೈನಿಗೆ ಬರಲ್ಲ” ಅಂತ.


ಏನಾಯ್ತು? ಅವ್ರು 35ಎಮ್.ಎಮ್. ಅಲ್ಲಿ ಶೂಟ್ ಮಾಡ್ತಾ ಇದ್ದದ್ದು. ಹಿಂದಿ ಮತ್ತೆ ಇಂಗ್ಲೀಷ್ ಎರಡ್ರಲ್ಲು ತೆಗಿತಾ ಇದ್ರು. ಸೋ ಒಂದೊಂದು ಎಪಿಸೋಡ್ ಈಗಿನ ತರಹ ಅಲ್ಲ, ಐದು, ಆರು ದಿನ ಆಗೋದು. ಆಂಡ್ ಸುಮಾರು ಖರ್ಚಾಗ್ತಾ ಇತ್ತು. ಯಾಕಂದ್ರೆ 35 ಎಮ್.ಎಮ್. ಅಂದ್ರೆ ಅದು ಚೆನ್ನೈ ಇಂದ ಬರ್ಬೇಕು. 60-70 ಜನ ಇರ್ಬೇಕು, ಸೋ ಏನಿಲ್ಲಾ ಅಂದ್ರೂ ವಾರಕ್ಕೆ ಐದಾರುಲಕ್ಷ ಖರ್ಚಾಗ್ತಾ ಇತ್ತು. ಅಂದ್ರೆ ಆವ್ರೇಜ್ ದಿನಕ್ಕೆ ಒಂದು ಲಕ್ಷ ಖರ್ಚು. ಫಸ್ಟ್ ಎಪಿಸೋಡಿಗೆ ಸುಮ್ಮನೆ ಹೋಗಿದ್ದು, ರಾತ್ರಿ ಶೂಟಿಂಗ್ ನಡಿಯುತ್ತೆ ಅಂತ. ಆಮೇಲೆ ನರಸಿಂಹನ್ ಅವ್ರು ಕರ್ದು ಹೇಳಿದ್ರು “ ಇಷ್ಟು ಖರ್ಚಾಗ್ತಾ ಇದೆ, ನೀನೂ, ಬದ್ರಿ ಸೇರ್ಕೊಂಡು ದುಡ್ಡು ಸರಿಯಾದ ದಾರಿಯಲ್ಲಿ ಖರ್ಚಾಗ್ತಾ ಇದ್ಯಾ ಅಂತ ನೋಡ್ಕೊಂಡ್ರೆ ನನಿಗೆ ಸ್ವಲ್ಪ ಸಮಾಧಾನ ಇರುತ್ತೆ. ನೀನು ಬರ್ಲೇಬೇಕು ಅಂದ್ರು.


ಶಂಕರ್ ನಾಗ್ ವಾಸ್ ಆನ್ ಎಕ್ಸಲೆಂಟ್ ಮ್ಯಾನ್, ನನಿಗೆ ಅವಾಗ್ಲೇ ಅವ್ರ ಪರಿಚಯ ಆಗಿದ್ದು. ಸ್ಟಾರ್ಟಿಂಗಲ್ಲಿ ವುಡ್ಲ್ಯಾಂಡಲ್ಲಿ ಎರಡು ಕಾಟೇಜ್ ಬುಕ್ ಮಾಡಿದ್ರು. ಅಲ್ಲಿ ಪ್ರೀ ಪ್ರೊಡಕ್ಷನ್ ವರ್ಕೆಲ್ಲ ಸುಮಾರು ದಿನ ನಡಿತಾ ಇತ್ತು. ಲೊಕೇಶನ್ ಆಗುಂಬೆ ಅಂತ ಫಿಕ್ಸ್ ಆಯ್ತು. 1985 ನಲ್ಲಿ ಐ ಥಿಂಕ್ ಹೀ ಸ್ಟಾರ್ಟಡ್ ಶೂಟಿಂಗ್ ಮಾಲ್ಗುಡಿ. ಮೂರು ವರ್ಷ ನಡೀತು ಸತತವಾಗಿ. ನಾಟ್ ಕಂಟಿನ್ಯೂಸ್ಲೀ, ಎರಡು ಮೂರು ತಿಂಗ್ಳು ಆಗುಂಬೆಯಲ್ಲಿ ಶೂಟ್ ಮಾಡ್ತಿದ್ರು. ಕೆಲವೊಂದು ಬೆಂಗಳೂರಲ್ಲೂ ಶೂಟ್ ಮಾಡಿದ್ದಾರೆ. ಇನ್ನೂ ಸುಮಾರು ಜಾಗದಲ್ಲೂ ಶೂಟ್ ಮಾಡಿದ್ದಾರೆ. ಬೆಂಗಳೂರು, ಬೆಟ್ಟದಾಸನ್ಪುರ, ಮತ್ತೆ ಜಾನ್ ದೇವರಾಜ್ ಅವ್ರ ಮನೆ ಇತ್ತು ಪಾಪೂಸ್ ಕಾಟೇಜ್ ಅಂತ, ಯಡಿಯೂರು ಲೇಕ್ ಪಕ್ಕ ಅಲ್ಲೂ ಮಾಡಿದ್ದಾರೆ. ಶಂಕರ್ ನಾಗ್ ಸಾರಾಮ್ ಅಲ್ಲೂ ಮಾಡಿದಾರೆ, ಆಮೇಲೆ ‘ದೇವರಾಯನದುರ್ಗ’ದಲ್ಲಿ ಒಂದೆರಡು ಎಪಿಸೋಡ್ ಮಾಡಿದಾರೆ.


ಆಂಡ್ ಬಹಳ ಜನ ಅಂದ್ರೆ 60-70 ಜನ. ಅವ್ರಿಗೆಲ್ಲಾ ವ್ಯವಸ್ಥೆ ಆಗ್ಬೇಕು, ಅಡುಗೆಯವರು ಎಲ್ಲಾ ಆಗ್ಬೇಕಿತ್ತು. ಆಗುಂಬೆ ಜಾಗ ಮಾತ್ರ ಜನ ಮಾಲ್ಗುಡಿನೇ ಅನ್ಕೊಳುವಷ್ಟು ಎಕ್ಸಲೆಂಟ್ ಆಗಿತ್ತು. ಯಾರಾದ್ರು ಬಸ್ ಅಲ್ಲಿ ಬಂದು ಇಳ್ದವ್ರು ಅಲ್ಲಿ ಬೋರ್ಡ್ ನೋಡ್ಬಿಟ್ಟು ಇದೇನು ಮಾಲ್ಗುಡಿಗೆ ಬಂದಿದ್ದೀವಾ ಅಂತ ಅನ್ಕೊಳ್ಳುವ ಹಾಗೆ ಆಗ್ತಿತ್ತು. ಆಂಡ್ ಲಾಟ್ ಆಫ್ ಲಾಜಿಸ್ಟಿಕ್ ಪ್ರಾಬ್ಲಮ್ಸ್ ಇತ್ತು ಅಲ್ಲಿ. ಕಮ್ಯೂನಿಕೇಷನ್ ಈ ತರ ಇರ್ಲಿಲ್ಲ ಅವಾಗೆಲ್ಲಾ. ಒಂದೇ ಒಂದು ಫೋನ್ ಇತ್ತು, ಪೋಸ್ಟ್ ಆಫೀಸಲ್ಲಿ. ಅಲ್ಲಿ ನಾವು ಟ್ರಂಕ್ ಕಾಲ್ ಬೆಳಗ್ಗೆ ಬುಕ್ ಮಾಡಿದ್ರೆ, ಮಧ್ಯಾನನೋ ಸಾಯಂಕಾಲನೋ ಸಿಗ್ತಾ ಇತ್ತು. ಅಲ್ಲಿರೊದು ಎರಡೇ ರೋಡು. ಯಾವದೋ ಹುಡುಗ ಬಂದು ಕಾಲ್ ಬಂದಿದೆ ಅಂತ ಹೇಳ್ತಿದ್ದ. ಅದೇ ಕಮ್ಯೂನಿಕೇಷನ್. ಅದಿಲ್ದೇ ಇದ್ರೆ ಟೆಲಿಗ್ರಾಮ್, ಅದ್ರಲ್ಲಿ ಒಂದು ಲೈನ್ ಅಥವಾ ಎರಡು ಲೈನ್ ಬರೀಬಹುದು ಅಷ್ಟೇ. ಇನ್ಲಾಂಡ್ ಲೆಟರ್ ಬರೆಯುವ ತರ ಎಲ್ಲಾ ಆಗಲ್ಲ. ಬರೀ ಇಷ್ಟೇ ಕಮ್ಯೂನಿಕೇಶನ್ ಇದ್ದಿದ್ದು.ಮುಂದುವರೆಯುವುದು…

19 views