ಒಬ್ಬನೇ ಆ ಕಡೆ ಹೋದ್ರೆ ಫಾದರ್‌, ಈ ಕಡೆ ಬಂದ್ರೆ ಕಾನ್ಸಟೇಬಲ್‌ ಆಗಿರ್ತಿದ್ದ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 36

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಆಮೇಲೆ ಲೋಕಲಲ್ಲಿ ಶಾಲೆ ಮಕ್ಕಳು ಬೇಕು. ಅಲ್ಲಿ ಶಾಲೆಗೆ ರಜೆ ಇತ್ತು. ಮತ್ತೆ ಲೋಕಲಲ್ಲಿ ಒಂದಿಬ್ಬರು, ಮೂರು ಜನ ಕಲಾವಿದರು ಸಿಕ್ಕಿದ್ರು ನಮಗೆ. ಅವ್ರು, ಅವರ ಸ್ನೇಹಿತರು, ಇನ್ಯಾರನ್ನೋ ಕೆಲವರ್ನ ಕರ್ಕೊಂಡು ಬರ್ತಿದ್ರು. ನಮಗೆ ಅವ್ರನ್ನ ಇಟ್ಕೊಂಡು ಮ್ಯಾನೇಜ್ ಮಾಡೊದು ಸಫೀಶಿಯಂಟ್ ಆಯ್ತು.


ಮ್ಯಾನೇಜ್ ಮಾಡೊದು ಹೇಗಂತಂದ್ರೆ, ಸೋ ಒಂದ್ಕಡೆಯಿಂದ ಇನ್ನೊಂದು ಕಡೆಗೆ ಜನ ಹೋಗ್ತಾರೆ. ಕ್ಯಾಮರಾ ಫ್ರೇಮಲ್ಲಿ ಒಬ್ಬ ಫಾದರ್ ಆ ಕಡೆ ಹೋಗ್ತಾನೆ. ಅವ್ನು ಫಾದರ್ ಗೌನ್ ಒಳಗಡೆ, ಕಾನ್ಸಟೇಬಲ್ ಡ್ರೆಸ್ ಹಾಕೊಂಡೇ ಇರ್ತಾನೆ. ಫಾದರ್ ಗೌನ್ ಕ್ಯಾಪ್ ತೆಗೆದು ಕಾನ್ಸಟೇಬಲ್ ಕ್ಯಾಪ್ ಹಾಕೊಂಡು ಅವ್ನೇ ಮತ್ತೆ ಈ ಕಡೆಗೆ ಬರ್ತಾನೆ. ಒಬ್ಬ ಸೈಕಲ್ ಹಿಡ್ಕೊಂಡು ಹೋಗ್ತಾನೆ. ನಾಲ್ಕು ಕತ್ತೆ ಇತ್ತು ನಮ್ಹತ್ರ ಎರಡು ಕತ್ತೆನ ಒಂದು ಲೇಡಿ ಕರ್ಕೊಂಡು ಹೋಗ್ತಾಳೆ ಈ ಕಡೆಯಿಂದ. ಇನ್ನೆರಡು ಕತ್ತೆನ ಇನ್ನೊಬ್ಬ ಬಟ್ಟೆ ಗಂಟು ಹಾಕ್ಕೊಂಡು ಆ ಕಡೆಯಿಂದ ಬರ್ತಾನೆ. ಸೊ ನಮ್ಹತ್ರ ಇರೋ ಜನಗಳನ್ನೇ ತುಂಬ ಜನ ಇರುವ ಹಾಗೆ ಬಳಸಿದ್ದೀವಿ. ಇದೆಲ್ಲ ಒಂದು ಸೀನ್ ಗೆ ಆಂಬಿಯೆನ್ಸ್ ಕ್ರಿಯೇಟ್ ಮಾಡೋದು.ಮುಂದುವರೆಯುವುದು…

11 views