‘ಒಬ್ಬ ದೊಡ್ಡ ನಟ ಸಿನಿಮಾದಲ್ಲಿ ಬೆಳೆಯಲು ಬಿಡಲಿಲ್ಲ’

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 16ನಂತರದಲ್ಲಿ ಜನಪ್ರಿಯ ನಟವೊಬ್ಬರನ್ನು ಅನುಕರಿಸಿದ್ದಕ್ಕೆ ನನಗೆ ಸಿನಿಮಾ ಅವಕಾಶ ಕಡಿಮೆ ಆಗುವಂತೆ ಮಾಡಿಬಿಟ್ರು. ಅವರು ಬಹಳ ಒಳ್ಳೆಯ ಮನುಷ್ಯ. ಬಹಳ ದಿನ ಆದ ಮೇಲೆ ಅವರ ಹಲವು ಸಿನಿಮಾಗಳಲ್ಲಿ ನನ್ನನ್ನು ಕರೆದು ಅವಕಾಶ ಕೊಟ್ರು. ಅವರು ಬದಲಾದರೋ ಅಥವಾ ನಾನೇ ತಪ್ಪು ಮಾಡಿದ್ನೋ ಗೊತ್ತಿಲ್ಲ. ನನ್ನನ್ನು ಅನುಕರಣೆ ಮಾಡಲು ಯಾರಿಂದಲೂ ಆಗುವುದಿಲ್ಲ ಎಂದಿದ್ರು. ನಾನು ಮಾಡಿದ್ದೆ. ನಂತರದಲ್ಲಿ ಸಿನಿಮಾಗಳಲ್ಲಿ ನನ್ನ ಹೆಸರಿರುತ್ತಿತ್ತು. ಶೂಟಿಂಗ್‌ಗೆ ಕರೆಯುತ್ತಿರಲಿಲ್ಲ. ಅಡ್ವಾನ್ಸ್‌ ಕೊಟ್ಟು ಹೋದವರು ಕರೆಯುತ್ತಿರಲಿಲ್ಲ. ಇದೆಲ್ಲ ಆದ ಮೇಲೆ ನಾನು ಮಿಮಿಕ್ರಿಯನ್ನೇ ಮುಂದುವರಿಸಿದೆ.ಮುಂದುವರೆಯುವುದು...

29 views