ಒಂದೊಂದು ದಿವ್ಸ ಎರಡೆರಡು ಕಾಲ್‌ ಶೀಟ್ ಮಾಡಿದ್ದೀನಿ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 19ಈ ಮಧ್ಯದಲ್ಲಿ ಸೀತಾಂಜನೇಯ ಅಂತ ಒಂದು ಪಿಚ್ಚರ್ ಬಂತು. ಬೂದಾಳ್ ಕೃಷ್ಣಮೂರ್ತಿ ಅವರು ಡೈರೆಕ್ಟರ್. ಈ ಪಿಚ್ಚರ್ ಬೇರೆ ತಗಲಾಕೊಳ್ತು. ಶ್! ಪಿಚ್ಚರ್ ಚಿಕ್ಕಮಗಳೂರಲ್ಲಿ ಶೂಟಿಂಗ್ ಇತ್ತು. ಸೀತಾಂಜನೇಯ ಕಳ್ಳರಸೀಕೆರೆ, ಅಲ್ಲ ಅಂಬರೀಶ್ ಹುಟ್ಟಿದ ಊರು?


ಪರಮ್: ದೊಡ್ಡ ಅರಸೀಕೆರೆ?


ಬ್ಯಾಂಕ್ ಜನಾರ್ಧನ್: ದೊಡ್ಡರಸೀಕೆರೆಯಲ್ಲಿ ಶೂಟಿಂಗ್. ಅಲ್ಲಿ ಮುಗಿಸ್ಕೊಂಡು ಇಲ್ಲಿ ಬರೋದು, ಇಲ್ಲಿ ಮುಗಿಸ್ಕೊಂಡು ಅಲ್ಲಿ ಹೋಗೋದು, ಹೀಗೆಲ್ಲಾ ಆಗಿ ಕಾಲ್ ಶೀಟ್‍ಗಳೆಲ್ಲಾ ಬೆಡ್‍ಶೀಟ್‍ಗಳಾದ್ವು.


ಪರಮ್: ಬ್ಯುಸಿ ಆಗ್ಬಿಟ್ರಿ ನೀವು?


ಬ್ಯಾಂಕ್ ಜನಾರ್ಧನ್: ಫುಲ್ ಬ್ಯುಸಿ ಆಗ್ಬಿಟ್ಟೆ. ಒಂದೊಂದು ದಿವ್ಸ ಎರಡೆರಡು ಕಾಲ್ ಶೀಟ್ ಮಾಡಿದ್ದೀನಿ ಸಾರ್. ಎರಡೆರಡು ಪಿಚ್ಚರ್ ಮಾಡಿದ್ದೀನಿ. ನಾನು ಜಗ್ಗೇಶ್, ಮತ್ತೆ ಬೇರೆ ಪಿಚ್ಚರ್‍ಗಳು.


ಪರಮ್: ಬ್ಯಾಂಕಲ್ಲೂ ಇದ್ರಿ?


ಬ್ಯಾಂಕ್ ಜನಾರ್ಧನ್: ಬ್ಯಾಂಕಲ್ಲೂ ಇದ್ದೆ. ಆದರೆ ಬ್ಯಾಂಕ್‍ಗೆ ಹೋಗ್ತಾ ಇರ್ಲಿಲ್ಲ. ಯಾವಾಗ ಇಲ್ಲಿ ಇಂಪ್ರೂವ್ಮೆಂಟ್ ಆಯ್ತೋ ಬ್ಯಾಂಕ್‍ಗೆ ಹೋಗ್ತನೇ ಇರ್ಲಿಲ್ಲ. ಬ್ಯಾಂಕ್‍ನಲ್ಲಿ ಏನೇನು ಮಾಡ್ಬೇಕೋ ಎಲ್ಲಾ ಮಾಡಿದ್ರು. ನೋಟೀಸ್ ಕೊಟ್ರು, ಚಾರ್ಜ್‌ ಶೀಟ್ ಕೊಟ್ರು, ಸಸ್ಪೆಂಡ್ ಮಾಡ್ತೀನಿ ಅಂದ್ರು ಏನೇ ಮಾಡಿದ್ರೂ ನಾನು ಬ್ಯಾಂಕ್‍ಗೆ ಹೋಗ್ಲೇ ಇಲ್ಲ. ನನಗೆ ಏನು ಅನುಕೂಲ ಆಯ್ತು ಅಂದ್ರೆ ನಮ್ಮ ಯೂನಿಯನ್ ಲೀಡರ್ ಒಬ್ರು ವಿಷ್ವನಾಥ್ ಅಂತ ಇದ್ರು, ಅವರು ಸ್ವಲ್ಪ ನನ್ನ ಬ್ಯಾಂಕಲ್ಲಿ ಬಚಾವ್ ಮಾಡಿದ್ರು. ಮೆಡಿಕಲ್ ಅಂತೇನೇನೋ ಕಾರಣಗಳು ಹಾಕಿ ಒಟ್ನಲ್ಲಿ ಸಂಬಳ ಇಲ್ಲ ಆದ್ರೆ ಕೆಲ್ಸ ಇತ್ತು. ಈ ರೀತಿ ಮಾಡ್ತಾ ಜಗ್ಗೇಶ್ ಹಾಗೂ ನನ್ನ ಪಿಚ್ಚರ್‍ಗಳು ಬಹಳ ಸಕ್ಸಸ್ ಆಯ್ತು.ಮುಂದುವರೆಯುವುದು…

112 views