ಒಂದು ಸಿನಿಮಾ ತಯಾರಾಗಲು ಯಾರು ಯಾರು ಮುಖ್ಯ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 80


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಸಿನಿಮಾ ರೂಪುತಳೆಯಲು ಕನಿಷ್ಠ 30 ಜನರ ಪರಿಶ್ರಮ ಇರುತ್ತದೆ. ಲೈಟ್‌ ಬಾಯ್‌ಯಿಂದ ಹಿಡಿದು ಪ್ರತಿಯೊಬ್ಬರ ಶ್ರಮವೂ ಮಹತ್ವದಾಗಿರುತ್ತದೆ. ಅವರವರ ಕೆಲಸವನ್ನು ಸಮರ್ಪಕವಾಗಿ ಮಾಡಿದರೆ ಮಾತ್ರವೇ ಸಿನಿಮಾ ಅಂದವಾಗಿ ರೂಪುತಳೆಯುತ್ತದೆ.


ಕೆಜಿಎಫ್‌–2 ಸಿನಿಮಾವನ್ನು ಯಶ್‌ ಒಬ್ಬರೇ ಮಾಡಿಲ್ಲ. ಈ ಸಿನಿಮಾದ ಹಿಂದೆ 60 ಜನ ಇದ್ದಾರೆ. ಸ್ಟಂಟ್‌, ಆರ್ಟ್‌ ಡೈರೆಕ್ಟರ್‌ ಅವರ ಕೈಚಳಕ ಸಿನಿಮಾ ನೋಡಿದಾಗ ಅರಿವಿಗೆ ಬರುತ್ತದೆ. ಇವೆಲ್ಲ ಟೀಂ ವರ್ಕ್‌. ಹನ್ನೊಂದು ಜನರ ಕ್ರಿಕೆಟ್‌ ಟೀಂನಲ್ಲಿ ಪ್ರತಿಯೊಬ್ಬರು ಚೆನ್ನಾಗಿ ಆಡಿದರೆ ಮಾತ್ರವೇ ಜಯ ಸಿಗುವಂತೆ, ನಮ್ಮ ಕ್ಷೇತ್ರದಲ್ಲಿಯೂ ನೂರಾರು ಜನರ ಪರಿಶ್ರಮ ಇರುತ್ತದೆ.


ನಮ್ಮ ಸಮಕಾಲೀನ ನಿರ್ದೇಶಕರಾದ ಸೋಮಶೇಖರ್‌ ಅವರು, ‘ಸ್ಟಂಟ್‌ ಡೈರೆಕ್ಟರ್‌ ಅವರಿಗೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಂತೆ ತಿಳಿಸಿ, ಕಲಾವಿದರರನ್ನು ಜೊತೆಗೆ ಕಳುಹಿಸುತ್ತಿದ್ರು. ಆ ವೇಳೆಯಲ್ಲಿಯೇ ಅವರು ಸ್ಟುಡಿಯೊದಲ್ಲಿ ಹೀರೊ ಇಲ್ಲದಿರುವ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ರು. ಸಮಯದ ಜೊತೆಗೆ ಹಣ ಉಳಿತಾಯವನ್ನು ಮಾಡುವ ಉದ್ದೇಶ ಅವರದ್ದಾಗಿತ್ತು.
ಮುಂದುವರೆಯುವುದು...

9 views