ಕಣ್ಣಡಿಗರೆಲ್ಲ ನೂರು ರೂಪಾಯಿ ಕೊಡಿ ಎಂದು ಬಾಲಣ್ಣ ಕೇಳಿದ್ರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 64


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಬಾಲಕೃಷ್ಣ ಅವರಿಗೆ ಸ್ಟುಡಿಯೊ ಪ್ರಾರಂಭಿಸಬೇಕೆಂಬ ಹಂಬಲ ಉಂಟಾಯಿತು. ಆದರೆ, ದುಡ್ಡು ಹೊಂದಿಸುವ ಚಿಂತೆ ಎದುರಾಯ್ತು. ಅವರ ಪತ್ನಿ ಸರೋಜಮ್ಮ ತುಂಬಾ ಒಳ್ಳೆಯವರು. ಗಂಡನಿಗೆ ವಿಧೇಯಳಾಗಿ, ದೇವರ ಸಮನಾಗಿ ನೋಡಿಕೊಳ್ಳುತ್ತಿದ್ರು. ಅವರ ಸಂಸಾರ ತುಂಬಾ ಚೆನ್ನಾಗಿತ್ತು. ಅವರಿಗೊಂದು ಹೆಣ್ಣು ಮಗು ಆಯ್ತು. ಆಕೆಗೆ ಏನು ಹೆಸರು ಇಡಲಿ ಭಗವಾನ್‌ ಎಂದು ಕೇಳಿದ್ರು ಬಾಲಣ್ಣ. ರಾಘವೇಂದ್ರ ಸ್ವಾಮಿಗಳಿಗೆ ಬೃಂದಾವನ ಎಂದ್ರೆ ಬಹಳ ಇಷ್ಟ. ಹಾಗಾಗಿ ಬೃಂದ ಎಂದು ಹೆಸರಿಡಿ ಎಂದೆ. ಅವರ ಮಗಳಿಗೆ ಬೃಂದ ಎಂದೇ ಹೆಸರಿಟ್ಟರು.


ಅಭಿಮಾನ್‌ಸ್ಟುಡಿಯೊವನ್ನು ಅವರು ಪ್ರಾರಂಭಿಸಿದ್ರು. ಅವರು ಇರುವವರೆಗೂ ಬಹಳ ಚೆನ್ನಾಗಿಯೇ ನಡೆಯುತ್ತಿತ್ತು. ನನ್ನ ಮೇಲೆ ಅಭಿಮಾನ ಇರುವ ಕನ್ನಡಿಗರು 100 ಕೊಡಿ ಎಂದು ಹೇಳಿ, ಶೇರ್‌ರೀತಿ ಮಾಡಿ, ಅಭಿಮಾನ ಸ್ಟುಡಿಯೊ ಕಟ್ಟಿದರು. ದುಡ್ಡು ಸಾಲದ ಕಾರಣ, ಸಂಪೂರ್ಣ ಸಿಮೆಂಟ್‌ಮಾಡಲು ಸಾಧ್ಯವಾಗಲಿಲ್ಲ. ಪರದೆಗಳನ್ನು ಹಾಕಲು ಆಗಲಿಲ್ಲ. ಆಗಿನ ಕಾಲದಲ್ಲಿ 100 ಅಂದ್ರೆ ದೊಡ್ಡ ಮೊತ್ತವೇ ಆಗಿತ್ತು. ಹಾಗಾಗಿ ಬಹಳ ಜನವೇನು ಹಣ ಕೊಟ್ಟಿರಲಿಲ್ಲ. ಅವರ ಕಾಲದ ನಂತರ ಮಕ್ಕಳು ಅಭಿಮಾನ್‌ ಸ್ಟುಡಿಯೊ ನೋಡಿಕೊಳ್ಳುತ್ತಿದ್ರು. ನಂತರದಲ್ಲಿ ಏನು ಆಯ್ತು ಎಂಬುದೆಲ್ಲ ನಿಮಗೆ ಗೊತ್ತೇ ಇದೆ.
ಮುಂದುವರೆಯುವುದು...

17 views