ಕನ್ನಡಕ್ಕಾದರೆ ನನ್ನ ಜೀವವನ್ನೇ ಮುಡಿಪಾಗಿಡುತ್ತೇನೆ ಎಂದ ರಾಜ್‌ಕುಮಾರ್‌

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 98


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)‌ಪಾಟೀಲ್‌ಪುಟ್ಟಪ್ಪ, ಚಿದಾನಂದ ಮೂರ್ತಿಯವರು ಗೋಕಾಕ್‌ ಚಳವಳಿಯನ್ನು ಪ್ರಾರಂಭಿಸಿದರು. ಆದರೆ, ಅದಕ್ಕೆ ‌ಜನಗಳ ಪ್ರೋತ್ಸಾಹ ಸಿಗಲಿಲ್ಲ. ಸಾ.ರಾ ಗೋವಿಂದು ಅವರಿಬ್ಬರ ಬಳಿ ಹೋಗಿ, ನೀವು ಈ ಚಳವಳಿ ಮಾಡಿದರೆ, ಜನರು ಬೆಂಬಲಿಸುವುದಿಲ್ಲ. ಸಿನಿಮಾ ನಟರನ್ನು ಇದರಲ್ಲಿ ತೊಡಗಿಸಿಕೊಂಡರೆ ನಿಮ್ಮ ಚಳವಳಿಗೆ ಶಕ್ತಿ ಬರುತ್ತದೆ.


ರಾಜ್‌ಕುಮಾರ್‌ ಅವರನ್ನು ಸಂಪರ್ಕಿಸಿ ಎಂದರು. ಅವರನ್ನು ನಾವು ಹೇಗೆ ಭೇಟಿಯಾಗುವುದು ನೀವು ಬರಬೇಕು ಎಂದು ಸಾ.ರಾ ಗೋವಿಂದು ಅವರ ಬಳಿ ಅವರು ಕೇಳಿಕೊಂಡರು. ನಂತರ ಸಾ.ರಾ ಗೋವಿಂದು, ಪಾಟೀಲ್‌ಪುಟ್ಟಪ್ಪ, ಚಿದಾನಂದ ಮೂರ್ತಿ ಅವರು ಕಾರಿನಲ್ಲಿ ಮದ್ರಾಸ್‌ಗೆ ಬಂದರು. ಕನ್ನಡಕ್ಕಾದರೆ ನನ್ನ ಜೀವವನ್ನೇ ಮುಡಿಪಾಗಿಡುತ್ತೇನೆ ಎಂದು ರಾಜ್‌ಕುಮಾರ್‌ ಅಲ್ಲಿ ಪ್ರತಿಜ್ಞೆ ಮಾಡಿದರು.ಮುಂದುವರೆಯುವುದು...

16 views