ಕನ್ನಡಕ್ಕೆ ಬ್ರಿಡ್ಜ್‌ ಸಿನಿಮಾ ಪರಿಚಯಿಸಿದ್ದು ಶಂಕರ್‌ನಾಗ್‌

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 89

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ಪರಮ್: ತಾವು ಕಲ್ತಿದ್ದು, ಅಡಾಪ್ಟ್ ಮಾಡ್ಕೊಂಡಿದ್ದು ಶಂಕರ್ ನಿಂದ?


ಅವಿನಾಶ್: ಸೀ, ಅವ್ರ ಒಡನಾಟನೇ ನಮಿಗೆ ತುಂಬಾ ಕಲಿಸಿ ಬಿಡ್ತು. ಅಂದ್ರೆ ನಮಿಗೆ ಗೊತ್ತಿಲ್ದೇನೇ ನಾವು ತುಂಬಾ ಅಡಾಪ್ಟ್ ಮಾಡ್ಕೊಂಡಿರ್ತೀವಿ. ನನಿಗೂ ಸಮಯ ಹಾಳು ಮಾಡೋದು ಇಷ್ಟ ಆಗಲ್ಲ, ಬೇರೆ ವಿಷಯಗಳ ಬಗ್ಗೆ ತಿಳ್ಕೊಳೋದು. ಆಕ್ಚುಲಿ ನಮಿಗೆ ಬೇರೆ ಸಿನಿಮಾಗಳ ಬಗ್ಗೆ ಪ್ಯಾರ್ಲರ್ ಸಿನಿಮಾಗಳ ಬಗ್ಗೆ ಆಸಕ್ತಿ ಶುರುವಾಗಿದ್ದೇ ಶಂಕರ್ ಬಂದ್ಮೇಲೆ. ಮುಂಚೆ ನಾನು ನೋಡ್ತಿದ್ದೆ ಆದ್ರೆ ಶಂಕರ್ ಬಂದ್ಮೇಲೆ, ಆರ್ಟ್ ಸಿನಮಾ ಮತ್ತೆ ಕಮರ್ಷಿಯಲ್ ಸಿನಿಮಾಗಳ ಮಧ್ಯ ಈ ಬ್ರಿಡ್ಜ್ ಸಿನಿಮಾ ಬಂತು. ಶಂಕರ್ ನಾಗ್ ಡಿಡ್ ಬ್ರಿಡ್ಜ್ ಸಿನಿಮಾ. ಆಕ್ಸಿಡೆಂಟ್ ಆಗ್ಲಿ, ಮಿಂಚಿನ ಓಟ ಆಗ್ಲಿ ಬ್ರಿಡ್ಜ್ ಸಿನಿಮಾಗಳು. ವಾಚೆಬಲ್ ಬಟ್ ಸ್ಟಿಲ್ ವೆರಿ ಡಿಫ್ರೆಂಟ್. ರಿಯಲಿಸಮ್ ಇಟ್ಕೊಂಡು ಜನಗಳು ನೋಡುವಹಾಗೆ ಸಿನಿಮಾನೇ ಬ್ರಿಡ್ಜ್ ಸಿನಿಮಾ.


ಯಾಕಂದ್ರೆ ಕೆಲವೊಂದು ಆರ್ಟ್ ಸಿನಿಮಾ ಮಾಡ್ದಾಗ, ಬರೀ ನಮ್ಮ ಸಂತೋಷಕ್ಕೆ ಮಾಡ್ದ ಹಾಗೆ ಆಗುತ್ತೆ, ಜನಗಳು ನೋಡ್ದೇನೆ ಇರ್ಬಹುದು. ರೀಚ್ ಆಗ್ದೇ ಇದ್ದಾಗ, ನಾವು ಮಾಡಿದ ಅಷ್ಟು ಎಫರ್ಟ್ ವೇಸ್ಟ್ ಆಗ್ಬಿಡುತ್ತೆ ಅಲ್ವಾ? ಅಷ್ಟೊಂದು ಕಷ್ಟ ಪಟ್ಟು, ಅಷ್ಟು ಕಾಳಜಿಯಿಂದ, ಅಷ್ಟು ಪ್ರೀತಿಯಿಂದ ನಾವು ಸಿನಿಮಾ ಮಾಡಿ, ಜನಗಳು ಅದನ್ನ ನೋಡ್ದೇ ಇದ್ದಾಗ, ಎಲ್ಲೋ ಒಂದ್ಕಡೆ ಡಿಸಪಾಯಿಂಟ್ಮೆಂಟ್ ಇರುತ್ತಲ್ಲ, ಆ ತರ ಆಗದೆ, ಕ್ರಿಟಿಕಲ್ಲೀ ಅಕ್ಲೈಮ್ಡ್ ಆಸ್ ವೆಲ್ ಆಸ್, ವಾಚೆಬಲ್ ಟು ಪಬ್ಲಿಕ್. ದಟ್ಸ್ ವೆರಿ ಇಂಪಾರ್ಟೆಂಟ್ ಐ ಥಿಂಕ್.


ಶಂಕರ್ ನಾಗ್ ಅದನ್ನ ತಂದ್ರು ಕನ್ನಡ ಸಿನಿಮಾಗೆ. ಎಂಟರ್ಟೈನಿಂಗ್, ದೇರ್ ಈಸ್ ಅ ಮೆಸೇಜ್ ತೀರಾ ಕಮರ್ಷಿಯಲ್ ಆಗಿ ಹಾಡು ಡ್ಯಾನ್ಸ್ ಇಲ್ಲದೆ ಸಿನಿಮಾ ಮಾಡಿದ್ದು, ಆಕ್ಸಿಡೆಂಟ್ ಅಂತಹ ಸಿನಿಮಾ ಗಳು ಮಾಡಿದ್ರಲ್ಲ ಅವಾಗ. ನಾವು ಇವಾಗ ಮಾತಾಡ್ತಿದ್ದೀವಿ ಅವ್ರು 1980 ರಲ್ಲೇ ಮಾಡ್ಬಿಟ್ರು. ಹಿ ವಾಸ್ ವೆರಿಮಚ್ ಎಹೆಡ್ ಆಫ್ ಟೈಮ್. ನೋಡಿ ಆಕ್ಸಿಡೆಂಟ್ ಕತೆ ಏನು? ಅವ್ನು ಡ್ರಗ್ ತಗೊಂಡು ಫೂಟ್ಬಾತಲ್ಲಿ ಮಲ್ಗಿರುವವ್ರ ಮೇಲೆ‌ ಕಾರು ಬಿಟ್ಟು ಬಿಡ್ತಾನೆ. ಮನ್ಮೊನ್ನೆವರೆಗೂ ನಡಿತಿತ್ತಲ್ವಾ? ಇವತ್ತೂ ಕೂಡ ನಡಿತಿದ್ಯಲ್ಲಾ? ಸಲ್ಮಾನ್ ಖಾನ್ ದು ಕೂಡ ಅದೇ ಕತೆ ತಾನೆ? ಅಂದ್ರೆ ಯಾವಾಗ ಮಾಡಿದ್ದು ಶಂಕರ್ ಅದನ್ನ?


ಹೀ ವಾಸ್ ರಿಯಲ್ಲಿ ಅಹೆಡ್ ಆಫ್ ಟೈಮ್. ಅನ್ಬಿಲೀವೆಬಲ್ ಎನರ್ಜಿ ಹೀ ಹ್ಯಾಡ್. ನಾನು ನೋಡ್ಲೇ ಇಲ್ಲ ಆ ತರ ಎನರ್ಜಿ. ನಾನು ಅವ್ರ ಜೊತೆ ಹೋಗ್ತಾ ಇದ್ರೆ, ಓಡ್ಬೇಕು ಆಕ್ಚುಲಾಗಿ. ಅವ್ರ ಜೊತೆ ನಡಿಯಕ್ಕೇ ಆಗ್ತಾ ಇರ್ಲಿಲ್ಲ. ನನಿಗೆ ಚೆನ್ನಾಗಿ ನೆನಪಿದೆ, ಕಲಾಕ್ಷೇತ್ರ ಮೆಟ್ಲು ಹತ್ಕೊಂಡು ಹೋಗುವವ್ರು. ಐ ನೆವರ್ ಸೀನ್ಡ್ ಹಿಮ್ ಸ್ಲೋಡೌನ್ ಫಾರ್ ಅ ಸೆಕೆಂಡ್. ನಿಧಾನ ಅನ್ನೋ ಪದಕ್ಕೆ ಅವ್ರ ಹತ್ರ ಜಾಗನೇ ಇರ್ತಾ ಇರ್ಲಿಲ್ಲ. ಅರಾಮಾಗಿರೋ ಪದ ಅವ್ರ ಡಿಕ್ಷನರಿಯಲ್ಲೇ ಇರ್ಲಿಲ್ಲ.ಮುಂದುವರೆಯುವದು…

13 views