
ಕನ್ನಡದರೇ ಮಾಡ್ತೀವಿ ಅನ್ನೋ ಚಾಲೇಂಜ್
ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 96
( ಶಂಕರ್ನಾಗ್ ಕುರಿತಂತೆ ಮಾಲ್ಗುಡಿ ಡೇಸ್ ನಿರ್ಮಾಪಕರ ನೆನಪುಗಳು)

ಐ ವಾಸ್ ಆನ್ ಇಂಚಾರ್ಜ್ ಆಫ್ ಪ್ರೊಡಕ್ಷನ್ ಸೋ ನನ್ನ ಕಡೆಯಿಂದ ವೆಂಕಿ. ಹೀ ವಾಸ್ ಮೈ ಬ್ಯಾಚ್ ಮೇಟ್ ಇನ್ ಚಾರ್ಟಡ್ ಅಕೌಂಟೆಂಟ್. ಹಿ ಹ್ಯಾಡ್ ಆಲ್ಸೋ ಇಂಟ್ರಸ್ಟಡ್ ಇನ್ ಸ್ಟೇಜ್. ನಮ್ಮಪ್ಪ ಕರ್ದಾಗ ಅವ್ನಿಗೆ ಇಲ್ಲಾಂತ ಹೇಳಕ್ಕಾಗ್ಲೇ ಇಲ್ಲ. ಆಂಡ್ ಸುಮಾರು ಕೆಲ್ಸ ಮಾಡಿದ್ದಾನೆ ವೆಂಕಿ ನಮ್ಮ ಜೊತೆ.
ಪರಮ್: ಬರೀ ಸೌತ್ ಇಂಡಿಯನ್ ಆಕ್ಟರ್ಸ್ ನ ಇಟ್ಕೊಂಡು ಹಿಂದಿ ಮತ್ತೆ ಇಂಗ್ಲೀಷಲ್ಲಿ ಮಾಡ್ಬೇಕು ಅಂದಾಗ, ನಿಮ್ಗೆ ಮಾಡಕ್ಕಾಗುತ್ತಾ ಅಂತ ಡೌಟ್ ಇರ್ಲಿಲ್ವಾ?
ಬದರಿನಾಥ್: ಇಲ್ಲ, ಖಂಡಿತ ಇಲ್ಲ, ಕಾನ್ಫಿಡೆನ್ಸ್ ಇತ್ತು ಮಾಡೇ ಮಾಡ್ತೀನಿ ಅಂತ, ನಮ್ಮಲ್ಲಿ ಬಂದ್ಬಿಟ್ಟಿತ್ತು. ಹೇಳಿದ್ನಲ್ಲ, ನಮ್ಮಪ್ಪನ ಮನಸ್ಸಿಗೆ ಏನಾದ್ರೂ ಬಂತು ಅಂದ್ರೆ, ದೇರ್ ಈಸ್ ನೋ ಲುಕಿಂಗ್ ಬ್ಯಾಕ್. ಮಾಡೋಣ, ವಿ ಆಲ್ಸೋ ಡೂ ಇಂಟರ್ನ್ಯಾಷನಲ್ ಪ್ರಾಜೆಕ್ಟ್, ಚೆನ್ನಾಗೇ ಮಾಡೋಣ. ಅದು ಆಟಿಟ್ಯೂಡ್ ಆಫ್ ಶಂಕರ್, ಆ ವ್ಯಕ್ತಿ ಹತ್ರ ಇಲ್ಲಾಂತ ಹೇಳೊದು ಏನೂ ಇಲ್ವೇ ಇಲ್ಲ. ಎನಿಥಿಂಗ್ ಈಸ್ ಪಾಸಿಬಲ್. ಅದೇ ಹೇಳಿದ್ನಲ್ಲಾ ಆ ತರ ರೈಟ್ ಟೈಮ್, ರೈಟ್ ಪ್ಲೇಸ್, ರೈಟ್ ಜನ ಕೂಡಿ ಬಂದಿದ್ದು ಬಹಳ ರೇರ್ ಕಣ್ರೀ.
ಮುಂದುವರೆಯುವುದು…