ಕನ್ನಡದಲ್ಲಿ ಗಾಯಕರು ಹುಟ್ಟಲು ಹಂಸಲೇಖ ಕಾರಣ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-11ಅವರು ಮ್ಯೂಸಿಕ್‌ ಡೈರೆಕ್ಟರ್ ಆಗಿದ್ದ ಸಂದರ್ಭಗಳಲ್ಲಿ ಶೇಕಡ 90 ರಷ್ಟು ಕನ್ನಡ ಗಾಯಕರಿಂದಲೇ ಹಾಡಿಸುತ್ತಿದ್ದರು. ಹಂಸಲೇಖ ಅವರ ರೀತಿಯಲ್ಲಿಯೇ ಕನ್ನಡ ಗಾಯಕರನ್ನು ಮತ್ತಷ್ಟು ಹುಟ್ಟು ಹಾಕಬೇಕೆಂಬ ಆಸೆ ಅವರಲ್ಲಿತ್ತು. ಕನ್ನಡ ಗಾಯಕರು ಹುಟ್ಟಲು ಹಂಸಲೇಖ ಅವರೇ ಕಾರಣ. ಎಸ್‌. ಜಾನಕಿ, ಎಸ್‌.ಬಿ ಬಾಲಕೃಷ್ಣ, ಪಿ.ಬಿ ಶ್ರೀನಿವಾಸ್‌, ಚಿತ್ರಾ ಅವರೆಲ್ಲ ತೆಲುಗು, ತಮಿಳಿನವರು. ಕನ್ನಡದಲ್ಲಿಯೇ ಹುಟ್ಟಿ ಬೆಳೆದ ಗಾಯಕರು ಬಹಳ ಕಡಿಮೆ ಇದ್ದರು.


ಹಂಸಲೇಖ ಅವರು ‘ಪ್ರೇಮಲೋಕ’ ಸಿನಿಮಾದಲ್ಲಿ ಕನ್ನಡದವರಿಗೆ ಆದ್ಯತೆ ಕೊಡಬೇಕೆಂಬ ಉದ್ದೇಶದಿಂದ ಪುತ್ತೂರು ನರಸಿಂಹನಾಯಕ ಅವರನ್ನು ಹಾಡಲು ಆಯ್ಕೆಮಾಡಿಕೊಂಡರು. ಟ್ರ್ಯಾಕ್‌ಸಿಂಗಿಂಗ್‌ತರಬೇತಿ ಕೊಡಲು ಪ್ರಾರಂಭಿಸಿದ್ದು ಹಂಸಲೇಖ ಅವರೇ. ಗಾಯಕ ತಯಾರಾಗುವುದರ ಜೊತೆಗೆ ಅವರಿಗೆ ಸಂಪಾದನೆಯು ಆಗುತ್ತದೆ ಎಂಬ ಯೋಚನೆ ಅವರದ್ದಾಗಿತ್ತು. ಅವರಿಗೆ ಕೈ ಮುಗಿಯಬೇಕು. ಅದ್ಭುತವಾದ ಕೆಲಸ ಮಾಡಿದ್ದರು. ಇಲ್ಲದಿದ್ದರೆ ಕನ್ನಡದ ಗಾಯಕರು ಹುಟ್ಟುವುದು ಬಹಳ ಕಷ್ಟ ಇತ್ತು. ಅವರಿಗೆ ಚಿರಋಣಿ. ಅವರಿಂದಾಗಿಯೇ ಕನ್ನಡದಲ್ಲಿ ಬಹಳಷ್ಟು ಗಾಯಕರು ಹೊರಬಂದರು. ಕನ್ನಡದಲ್ಲಿ ಕೋರಸ್‌ ಸಿಂಗರ್ಸ್‌ ಕೂಡ ಇರಲಿಲ್ಲ. ಚೆನ್ನೈ ಅವರನ್ನೇ ಬಳಸುತ್ತಿದ್ದರು. ಅವರನ್ನು ತಯಾರು ಮಾಡಿದ್ದು ಹಂಸಲೇಖ ಅವರೇ.ಮುಂದುವರೆಯುವುದು...

13 views