ಕನ್ನಡದವರಿಗೆ ಯಾಕೆ ಅವಕಾಶ ಕೊಡುವುದಿಲ್ಲ

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-24

ರಾಜೇಶ್‌ ಕೃಷ್ಣ, ಹೇಮಂತ್‌, ಚೇತನ್‌, ಅನುರಾಧ ಭಟ್‌, ನಂದಿತಾ, ಶಮಿತಾ ಮಲ್ನಾಡ್‌.... ಹೀಗೆ ಇಂಥ ಗಾಯಕರಿರುವಾಗ ಸೋನು ನಿಗಂ, ಶ್ರೇಯಾ ಘೋಷಾಲ್‌ ಏಕೆ ಬರಬೇಕು. ಹೊರಗಿನವರು ಹಾಡಿರುವ ಅಪ್ಪನಂಥ ಹಾಡಗಳನ್ನು ನಮ್ಮವರು ಹಾಡಿ ಜಯಿಸಿಲ್ಲವೇ?.


ಐದು ಹಾಡಿನಲ್ಲಿ ಮೂರು ಹಾಡನ್ನು ನಮ್ಮವರಿಗೆ ಕೊಟ್ಟು, ಎರಡು ಹಾಡನ್ನು ಅವರಿಗೆ ಕೊಟ್ರೆ ಯಾರೂ ಬೇಡ ಎನ್ನುವುದಿಲ್ಲ. ಯಾಕೆ ನಿಮಗೆ ನಮ್ಮ ಮನೆಯ ಮಕ್ಕಳನ್ನು ಬೆಳೆಸುವ ಆಸೆಯಿಲ್ಲ. ಪ್ರತಿಯೊಬ್ಬ ಪ್ರೊಡ್ಯೂಸರ್‌, ಮ್ಯೂಸಿಕ್‌ ಡೈರೆಕ್ಟರ್‌ಗೆ ಈ ಮಾತನ್ನೇ ಹೇಳುತ್ತೇನೆ ನಾನು. ನಮ್ಮ ಕಾಲ ಮುಗಿಯಿತು. ನಾನು ಗಾಯಕಿ ಆಗಿ ಮುಂದೆ ಬಂದು ನನಗೇನು ಆಗಬೇಕಿಲ್ಲ. ಹಂಸಲೇಖ ಅವರು ಬುನಾದಿ ಹಾಕಿ, ಇಷ್ಟು ಹಾಡುಗಾರರನ್ನು ತಯಾರು ಮಾಡಿ ಏನು ಪ್ರಯೋಜನ ಆಯಿತು. ಅದೇ ನಮ್ಮ ಗಾಯಕರು ಅಲ್ಲಿಗೆ ಹೋದರೆ ಅವರು ಮಣೆ ಹಾಕುತ್ತಾರಾ?


ಪುಣ್ಯಕ್ಕೆ ಹೊರಗಿನಿಂದ ಹೀರೊಗಳನ್ನು ಇಲ್ಲಿಯವರೆಗೂ ಕರೆಸುತ್ತಿಲ್ಲ. ಆದರೆ, ಹೀರೊಯಿನ್‌ಗಳ ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತೇ ಇದೆಯಲ್ವಾ. ಶೃತಿ, ರಾಧಿಕಾ ಪಂಡಿತ್‌ ಅವರಂತಹ ಕೆಲವು ಹೀರೋಯಿನ್‌ಗಳು ಹೆಸರು ಮಾಡಿದ್ದಾರೆ. ಆದರೆ, ಪರಾಭಾಷೆಯವರದೇ ಪಾರಮ್ಯ. ಸರಿಗಮಪ, ಲಿಟ್ಲ್‌ ಚಾಂಪ್ಸ್‌, ಕಾಮಿಡಿ ಕಿಲಾಡಿಗಳೆಲ್ಲ ನಡೆಯುತ್ತೇ. ಆದರೆ, ಹೊರಗೆ ಬಂದರೆ ಅವರಿಗೆ ಅವಕಾಶ ಇದೆಯಾ? ಶೋ ನಡೆಯುವ ಸಂದರ್ಭದಲ್ಲಿ ಮಾತ್ರವೇ ಅವರಿಗೆ ಹೆಸರು. ಹೊರಗಡೆಯ ಶೋ ಕೆಲವೊಂದು ಸಿಗುತ್ತದೆ. ಅಷ್ಟು ಬಿಟ್ಟರೆ ಸಿನಿಮಾ ಕ್ಷೇತ್ರದಲ್ಲಿ ಎಲ್ಲಿದೆ ಅವರಿಗೆ ಅವಕಾಶ?.


ಮುಂದುವರೆಯುವುದು...

22 views