ಕನ್ನಡದ ಮೊದಲ ಎಡಿಟಿಂಗ್‌ ಸ್ಟುಡಿಯೋ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 93

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಹೀ ಆಲ್ವೇಸ್ ಯೂಸ್ ಟು ಸೇ, ಅವಾಗೆಲ್ಲಾ ಪೋಸ್ಟ್ ಆಕ್ಟಿವಿಟಿ ಚೆನ್ನೈನಲ್ಲೇ ಆಗ್ತಿತ್ತು. ನಮ್ಮಪ್ಪ ಹೇಳ್ತಿದ್ರು ಯಾಕೆ ಅಲ್ಲಿಗೆ ಹೋಗ್ಬೇಕು ನಮ್ಮಲ್ಲಿಲ್ವಾ? ಹಾಗೆ ಫಸ್ಟ್ ಅವ್ರು ಶುರು ಮಾಡಿದ್ದು ‘ಜ್ಯೋತಿ ಫಿಲ್ಮ್ ಎಡಿಟಿಂಗ್ ಅಂತ. ಅವಾಗ ಅಲ್ಲಿ ಸುರೇಶ್ ಅರಸ್ ಇರ್ತಿದ್ದ. ಅವಾಗ ಸುರೇಶ್ ಹದಿನಾರು, ಹದಿನೇಳು ವರ್ಷದ ಹುಡುಗ. ವಸಂತ್ ಲ್ಯಾಬಲ್ಲೂ ಅಸಿಸ್ಟೆಂಟ್ಗೆ, ಅಸಿಸ್ಟೆಂಟ್ ಆಗಿದ್ದಿದ್ದು. ‘ಬಂಗಾರದ ಜಿಂಕೆ’ ದು ಯಾವದೋ ಪ್ರಿಂಟ್ ನ ಕಟ್ ಮಾಡ್ಬೇಕಾಗಿತ್ತು. ಆಗ ನಮ್ಮಪ್ಪ ಸುರೇಶ್ ನ ಕರ್ದು “ಇದನ್ನ ಮಾಡ್ಕೊಂಡು ಬಾ, ಎಲ್ಲಾ ಕಡೆ ಟ್ಯೂನ್ ಮಾಡ್ಕೊಂಡು ಬಾ” ಅಂದ್ರು. ಅಪ್ಪ ಬಹಳ ಖುಷಿಯಾದ್ರು ಅವ್ನ ನೋಡಿ “ಒಳ್ಳೆ ಕೆಲ್ಸ. ತುಂಬ ಚೆನ್ನಾಗಿ ಮಾಡ್ತೀಯ ಕಣೊ ನೀನು” ಅಂತ. ವಿತಿನ್ ಒನ್ ಯಿಯರ್ ಹಿ ಸ್ಟಾರ್ಟಡ್ ‘ಜ್ಯೋತಿ’. “ಚೆನ್ನೈನಲ್ಲಿ ಐವತ್ತು ಸಾವಿರ ರೂಪಾಯಿ ಕೊಡ್ತೀರ ಸಿನಿಮಾ ಎಡಿಟಿಂಗ್ ಮಾಡಕ್ಕೆ, ಹದಿನೈದು ಸಾವಿರ ರೂಪಾಯಿ ಕೊಡಿ ನನಿಗೆ, ಬಟ್ ವಿತ್ ಎಕ್ಸಲೆಂಟ್ ಫೆಸಿಲಿಟಿ”. ಎರಡು ಫ್ಲೋರ್ ಇತ್ತು ನಮ್ದು ವಿಲ್ಸನ್ ಗಾರ್ಡನಲ್ಲಿ. 1982 ನಲ್ಲಿ ಶುರು ಮಾಡಿ 2000 ದ ವರೆಗೂ ನಡ್ಸಿದ್ದೀವಿ. ಎಕ್ಯುಪ್ಮೆಂಟೆಲ್ಲಾ ಬಾಂಬೆಯಿಂದ ತಂದಿದ್ದು. ಎಲ್ಲಾ ಸುರೇಶ್, ಟೋಟಲ್ ಇಂಚಾರ್ಜ್ ಸುರೇಶ್. ಅಲ್ಲಿ ‘ಮಣಿರತ್ನಮ್’ ಫಿಲಮ್ಸ್ ಕೂಡ ಮಾಡಿದ್ದೀವಿ.


ಅವ್ರು ಹೇಳ್ತಿದ್ರು “ಯಾಕೆ ನೀವು ಲೊಕೇಶನ್ ಹುಡುಕ್ಕೊಂಡು ಯೂರೋಪ್ ಗೆಲ್ಲಾ ಹೋಗೋದು, ನಮ್ಮಲ್ಲೇ ಅಷ್ಟು ಜಾಗ ಇದೆ ಎಕ್ಸಪ್ಲೋರ್ ಇಲ್ಲೇ ಮಾಡಿ. ಕರ್ನಾಟಕ ನ ಪ್ರಮೋಟ್ ಮಾಡ್ಬೇಕು ಇಲ್ಲೇ ಮಾಡಿ. ಬ್ಯಾಕರ್ ಮಾರ್ಗಯ್ಯ ಹಿಟ್ ಆಯ್ತು, ಚೆನ್ನಾಗಿ ಓಡ್ತು, ಆರ್.ಕೆ. ನಾರಾಯಣ್ ಅವ್ರಿಗೆ ಹಿಡಿಸ್ತು. ಅದಾದ್ಮೇಲೆ ನಾರಾಯಣ್ ಅವ್ರು ಹೇಳಿದ್ರು, “ನೆಕ್ಸ್ಟ್ ಯಾವುದಾದ್ರೂ ಪ್ರಾಜೆಕ್ಟ್ ಬಂದ್ರೆ ಅಥವಾ ನಿಮ್ಗೆ ಯಾವುದಾದ್ರೂ ಇಷ್ಟ ಆಗಿದ್ರೆ ಹೇಳಿ” ರೈಟ್ಸ್ ಕೊಡ್ತೀನಿ ಅಂತ.ಮುಂದುವರೆಯುವುದು…

13 views