ಕನ್ನಡ ಚಿತ್ರರಂಗದ ಸಭ್ಯತೆ ನಿಮಗೆ ಗೊತ್ತಾ?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 27
ಮೊನ್ನೆ ನಾನ್ನೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ದರ್ಶನ್‌, ಸಾಧುಕೋಕಿಲ, ಸೃಜನ್‌ ಲೋಕೇಶ್‌ ಸೇರಿದಂತೆ ಆರೇಳು ದೊಡ್ಡ ಕಲಾವಿದರೇ ಕೂತಿದ್ರು. ನಾನು ಹೋಗುತ್ತಿದ್ದಂತೆ ಅಲ್ಲಿದ್ದವರು ಎದ್ದು ನಿಂತ್ರು. ನಾನ್ನೊಬ್ಬ ಮಿಮಿಕ್ರಿ ಆರ್ಟಿಸ್ಟ್‌ ಅಷ್ಟೇ. ಅವರೆಲ್ಲ ನನ್ನ ವಯಸ್ಸಿಗೆ ಬೆಲೆ ನೀಡಿ ಎದ್ದು ನಿಂತು, ದಯಣ್ಣ ಕುಳಿತುಕೊಳ್ಳಿ ಎಂದು ಹೇಳಿ ನಾನು ಕೂತ ಮೇಲೆ ಅವರು ಕುಳಿತುಕೊಂಡ್ರು. ಇದು ರಾಜ್‌ಕುಮಾರ್‌ ಕಲಿಸಿಕೊಟ್ಟ ಪಾಠ. ಇದು ನಮ್ಮ ಕನ್ನಡ ಚಿತ್ರರಂಗದ ಸಭ್ಯತೆ. ನನಗೆ ಮಾತ್ರವೇ ಈ ಗೌರವವನ್ನು ತೋರಿಸುವುದಿಲ್ಲ. ಯಾರೇ ಬಂದರೂ ಹಾಗೆಯೇ ಮಾಡುತ್ತಾರೆ.ಮುಂದುವರೆಯುವುದು...

39 views