ಕಲ್ಪನಾ ಅವರ ಆ ಆಸೆ ಈಡೇರಲಿಲ್ಲ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 7

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಕಲ್ಪನಾಜೀ ಅವರು ನನ್ನನ್ನ ಮಗಳಿಗಿಂತ ಹೆಚ್ಚು ಪ್ರೀತಿಯಿಂದ ನೋಡ್ತಿದ್ರು. ಒಂದು ಆ ಪಾತ್ರ ಮಾಡಿ ಅವರ ಗೌರವ ಉಳಿಸಿದ್ದೆ, ಹಾಗೂ “ಚನ್ನಾಗಿ ಡ್ಯಾನ್ಸ್ ಮಾಡ್ತಾಳೆ ಹುಡುಗಿ ಮುದ್ದಾಗಿದ್ದಾಳೆ” ಅಂತ ಹೇಳ್ತಿರೋರು. ಕೊನೆಗೆ ಸುಧೀರ್ ಅವರ ಜೊತೆಯಲ್ಲಿ ನನ್ನ ಮದುವೆ ಆಯ್ತು.


ಮದುವೆಯಾದ ನಂತರ ಸ್ವಲ್ಪ ದಿವ್ಸ ಕಲ್ಪನಾಜೀ ಅವರು ಶೂಟಿಂಗ್‍ನಲ್ಲಿ ಬ್ಯುಸಿ ಆಗ್ಬಿಟ್ರು. ಆ ಗ್ಯಾಪಲ್ಲಿ ಮದುವೆ ಆಗಿ ಒಂದು ವರ್ಷಕ್ಕೇ ನಂಗೆ ನಂದಕಿಶೋರ್ ಹುಟ್ಟಿದ್ದ 1978 ನಲ್ಲಿ. ಆಗ ಕಲ್ಪನಾ ಅವರು “ಸುಧೀರ್ ನಾನು ನೀನು ದೊಡ್ಡ ನಾಟಕ ಕಂಪೆನಿ ಮಾಡಿ ಇಡೀ ಕರ್ನಾಟಕ ಸುತ್ತೋಣ. ಇನ್ನೊಂದು ನಾಟಕ ಕಿತ್ತೂರು ರಾಣಿ ಚೆನ್ನಮ್ಮ ನಾಟಕ ನಮ್ಮದೇ ವಿಭಿನ್ನತೆಯಲಿ ಮಡೋಣ”ಅಂತ ಅವರ ಟ್ರೂಪಲ್ಲಿದ್ದ ಎಲ್ಲಾ ಕಲಾವಿದರಿಗೂ ಹೇಳಿದ್ರು.


ನಮ್ಮ ಸುಧೀರ್ ಅವರು ತುಂಬಾ ರಾಘವೇಂದ್ರ ಸ್ವಾಮಿ ಭಕ್ತರು. ನಾವು ಮಂತ್ರಾಲಯಕ್ಕೆ ಮಗುನ ಕರ್ಕೊಂಡೋಗಿ ನಾಮಕರಣ ಮಾಡಿ ಕಾರಲ್ಲಿ ಬರ್ತಾ ಇದ್ವಿ. ಆಗ ಕಲ್ಪನಾಜೀ ಅವರು ಹೋಗ್ಬಿಟ್ರು ಅಂತ ವಿಷಯ ಗೊತ್ತಾಯ್ತು. ಅವರು ಆತ್ಮಹತ್ಯೆ ಮಾಡ್ಕೊಂಡ್ರು, ಅಲ್ಲಿಗೆ ಆಚಾಪ್ಟರ್ ಕ್ಲೋಸ್ ಆಯ್ತು.ಮುಂದುವರೆಯುವುದು…

22 views