ಕಲ್ಪನಾ ನಮ್ಮತ್ರ ತಮ್ಮ ಶೂಟಿಂಗ್‌ ಕತೆಗಳನ್ನ ಹೇಳ್ತಿದ್ರು

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 6

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಪರಮ್: ಅಷ್ಟೊತ್ತಿಗೇ ಕಲ್ಪನಾ ಅವರು ಸ್ಟಾರ್ ಆಗಿದ್ರು, ಸುಧೀರ್ ಅವರು ಸಿನಿಮಾದಲ್ಲಿದ್ರು?


ಮಾಲತಿ ಸುಧೀರ್: ಸಿನಿಮಾದಲ್ಲಿ ಇದ್ರು ಆದ್ರೆ ಫ್ಲಾಪ್ ಸಿನಿಮಾ ಮಾಡಿದ್ರು. ಮಾಯಾಮನುಷ್ಯ, ಛಲಗಾರ ಅಂತೆಲ್ಲಾ ಮಾಡಿದ್ರು. ಚಿತ್ರನಟ ಹೌದು. ಆದರೆ ಸಕ್ಸಸ್ ಆಗಿದ್ದ ಪಿಚ್ಚರ್ ಯಾವುದೂ ಇರ್ಲಿಲ್ಲ. ಎಲ್ಲಾ ಪಿಚ್ಚರೂ ಫ್ಲಾಪ್ ಆಗಿತ್ತು. ಕಲ್ಪನಾಜೀ ಅವರು ಅವಾಗ್ಲೇ ಸೂಪರ್ ಸ್ಟಾರ್ ಮಿನುಗುತಾರೆ. ಅವರು ಇಂಡಸ್ಟ್ರೀಯಲ್ಲಿ ಸಿನಿಮಾಗಳು ಕಮ್ಮಿ ಆಗಿದ್ರಿಂದ ನಾಟಕಕ್ಕೆ ಬಂದಿದ್ರು. ಅವಾಗ್ಲೇ ಹೇಳ್ತಾ ಇದ್ರು “ಬಯಲುದಾರಿ ಶೂಟಿಂಗ್ ಇದೆ ನಂಗೆ, ಎರಡು ಕನಸು ಶೂಟಿಂಗ್ ನಡಿತಾ ಇದೆ”ಆ ಪಿಚ್ಚರ್‍ಗಳ ಬಿಡುವಿನಲ್ಲಿ ಅವರು ನಾಟಕ ಮಾಡ್ತಿದ್ರು. ಆಗ ಅವರು ಬಂದು ಹೇಳ್ತಿದ್ರು “ಮನೆ ಸೀನ್ ರಾಜ್‍ಕುಮಾರ್ ಅವರ ಜೊತೆಯಲ್ಲಿ ಹೀಗೆಲ್ಲಾ ಮಾಡ್ದೆ. ದೊರೆ ಭಗವಾನ್ ಅವರು ನಂಗೇ ಡೈಲಾಗ್ ಹೇಳ್ಬಿಟ್ರು. ನಾನೊಬ್ಬಳೇ ಅದನ್ನ ಎಕ್ಸಪ್ರೆಷನ್ ತಗೊಂಡು ಮಾಡ್ದೆ”ಅಂತೆಲ್ಲಾ ಹೇಳೋರು. “ಬಯಲುದಾರಿ ಅಂತ ಒಂದು ಪಿಚ್ಚರ್ ಮಾಡ್ತಿದ್ದೀನಿ, ಹೊಸ ಆರ್ಟಿಸ್ಟ್ ಅನಂತ್‍ನಾಗ್ ಅಂತ ಹೇಳಿ. ಅವರ ಜೊತೆ”ಅಂತ ಹೇಳ್ತಿದ್ರು. ಅವಾಗ ನಮಗೆ ಅನಂತ್ನಾಗ್ ಯಾರು ಅಂತೇನೂ ಗೊತ್ತಿರ್ಲಿಲ್ಲ. ನಾವು ಏನೇ ಹೇಳಿದ್ರೂ “ಹೌದಾ? ಹೌದಾ?” ಅಂತ ಕೇಳ್ತಿದ್ವಿ.ಮುಂದುವರೆಯುವುದು…

19 views