ಕಲಾವಿದರ ಬಗ್ಗೆ ಪೊಲೀಸರಿಗಿರುವ ಗೌರವ ಎಂಥದ್ದು

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 75ವಿದೇಶಕ್ಕೆ ಹೋಗಬೇಕಿದ್ದ ಸಂದರ್ಭದಲ್ಲಿ ಏರ್‌ಪೋರ್ಟ್‌ಗೆ ಹೋಗಿದ್ದೆ. ನನ್ನ ಜೊತೆಗೆ ಬರಬೇಕಿದ್ದ ಕಲಾವಿದ ಬಂದಿರಲಿಲ್ಲ. ಆಗೆಲ್ಲ ಇಂಟರ್‌ನ್ಯಾಷನಲ್‌ಕಾಲ್‌ಇರಲಿಲ್ಲ ಫೋನ್‌ವಾಪಸ್ಸು ಕೊಟ್ಟು ಹೋಗಬೇಕಿತ್ತು. ಅಷ್ಟೊತ್ತಿಗೆ ಒಂದು ಕಾಲ್‌ಬಂತು. ಸರ್‌.. ನನ್ನ ಪೊಲೀಸ್‌ಹಿಡಿದುಕೊಂಡಿದ್ದಾರೆ ಎಂದ್ರು. 2 ಗಂಟೆ ಇತ್ತು ವಿಮಾನ ಟೇಕ್‌ ಆಫ್‌ಆಗಲು. ಬನ್ನಿ ಬೇಗ ಎಂದ್ರು. ನಾನು ಎಲ್ಲ ಲಗೇಜ್‌ಇಟ್ಟು, ಆಟೊ ಮಾಡಿಕೊಂಡು ಹೋದೆ. ದೊಮ್ಮಲೂರಿನಲ್ಲಿ ಕಲಾವಿದನನ್ನು ಹಿಡಿದು ನಿಲ್ಲಿಸಿದ್ರು. ಬೈಕ್‌ನಲ್ಲಿ ಹೋಗುತ್ತಿದ್ದಾಗ ಇವರ ಜೊತೆಗಿದ್ದವರು ಪೊಲೀಸ್‌ಅವರನ್ನೇ ಹಿಂದಿನಿಂದ ತಳ್ಳಿದ್ದರಂತೆ. ಅವರು ಮೋರಿಗೆ ಬೀಳುವವರು ಬಚಾವ್‌ಆಗಿದ್ರು. ಅವರು ಹೊಡೆದಿರಲಿಲ್ಲ. ಆದರೆ, ಇವತ್ತೊಂದು ದಿವಸ ಒಳಗೆ ಹಾಕೇ ಹಾಕ್ತೇನೆ ಎಂದು ಇರಿಸಿಕೊಂಡಿದ್ರು.


ನಾನು ಹೋಗಿ, ಅವರನ್ನು ಬಿಡುವಂತೆ ಕೇಳಿಕೊಂಡೆ. ಕಾನ್‌ಸ್ಟೆಬಲ್‌ಕೈಯಲ್ಲಿ ಒಂದಷ್ಟು ದುಡ್ಡು ಕೊಟ್ಟು ಇನ್‌ಸ್ಪೆಕ್ಟರ್‌ಗೆ ಕೊಡುವಂತೆ ಹೇಳಿದೆ. ಕಾನ್‌ಸ್ಟೆಬಲ್‌ಇನ್‌ಸ್ಪೆಕ್ಟರ್‌ಗೆ ದುಡ್ಡು ಕೊಡಲು ಹೋದ್ರು. ಅವರು ತೆಗೆದುಕೊಂಡ್ರು. ನಂತರ ನನ್ನ ಬಳಿ ಬಂದು. ನಾನು ಅವರನ್ನು ಬಿಡಲು ಸಾಧ್ಯವೇ ಇಲ್ಲ. ಕುಡಿದು ಗಾಡಿ ಓಡಿಸುವುದು ತಪ್ಪು. ನನ್ನನ್ನು ತಳ್ಳಿದ್ದು ದೊಡ್ಡ ತಪ್ಪು. ನಾನು ಮೋರಿಯಲ್ಲಿ ಬೀಳುತ್ತಿದ್ದೆ. ಸ್ವಲ್ಪದರಲ್ಲೇ ತಪ್ಪಿತು. ಏನಾದ್ರೂ ಹೆಚ್ಚುಕಮ್ಮಿ ಆಗಿದ್ರೆ ನನ್ನ ಹೆಂಡತಿ, ಮಕ್ಕಳ ಗತಿ ಏನಾಗುತ್ತಿತ್ತು ಎಂದ್ರು. ಆಗ ನಾನು ಸರ್‌, ತಪ್ಪಾಗಿದೆ ನಿಜ. ಆದರೆ, ಇವತ್ತೊಂದು ದಿನ ಬಿಡಿ ಸರ್‌, ವಿದೇಶದಲ್ಲಿ ದೊಡ್ಡ ಶೋ ಇದೆ. ಟಿಕೆಟ್‌ಎಲ್ಲ ಬುಕ್‌ಆಗಿದೆ. ಪ್ಲೀಸ್‌ಎಂದು ಹೇಳಿದೆ. ನನಗೆ ನೀವು ಯಾರೆಂದು ಗೊತ್ತು. ಅವರು ಗೊತ್ತು. ಅವರು ಮಾಡಿದ್ದು ಸರಿಯಿಲ್ಲ. ನೀವು ಕೈ ಮುಗಿಯಬೇಡಿ, ಕರೆದುಕೊಂಡು ಹೋಗಿ, ನನ್ನ ಹತ್ತಿರ ಬರಬೇಡಿ ಕರೆದುಕೊಂಡು ಹೋಗಿ ಎಂದ್ರು. ನಾನು ಆ ವ್ಯಕ್ತಿಯನ್ನು ಕರೆದುಕೊಂಡು ಹೊರಟೆ. ಅಷ್ಟರಲ್ಲೇ ಬನ್ನಿ ಇಲ್ಲಿ ಎಂದ್ರು. ಏನ್‌ ಸರ್‌ ಎಂದು ಹೇಳಿ ಹೋದೆ. ಇದು ನಗಿಸಿರುವ ದುಡ್ಡು. ನಾನು ತೆಗೆದುಕೊಳ್ಳಲ್ಲ ಎಂದು ಹೇಳಿ ವಾಪಸ್‌ಕೊಟ್ರು. ಪೊಲೀಸ್‌ ಜೀಪ್‌ನಲ್ಲಿಯೇ ನಮ್ಮನ್ನು ಏರ್‌ಪೋರ್ಟ್‌ವರೆಗೂ ಡ್ರಾಪ್‌ ಮಾಡಿಸಿದ್ರು. ಇಂತಹ ಪೊಲೀಸ್‌ನವರಿಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು. ಪೊಲೀಸರ ಬಗ್ಗೆ ಹಲವು ಮಂದಿ ಹಗುರವಾಗಿ ಮಾತಾಡ್ತಾರೆ. ಆದರೆ, ಇಂತಹ ಪೊಲೀಸ್‌ನವರು ಬಹಳಷ್ಟು ಮಂದಿ ಇದ್ದಾರೆ. ಎಲ್ಲೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಎಲ್ಲ ಪೊಲೀಸರ ವಿರುದ್ಧ ತಪ್ಪು ಮಾತನಾಡುವುದು ಸರಿಯಲ್ಲ. ಎಲ್ಲಾ ಕ್ಷೇತ್ರಗಳ ನೋವು, ನಲಿವುಗಳನ್ನು ತಿಳಿದುಕೊಂಡಾಗಲೇ ಒಬ್ಬ ಒಳ್ಳೆಯ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ.ಮುಂದುವರೆಯುವುದು...

11 views