ಕಳೆದುಕೊಂಡಿದ್ದ ಮನೆ ದುಡ್ಡು ಎಲ್ಲ ಮೂರು ವರ್ಷದಲ್ಲೇ ಬಂದವು

ಮಿಮಿಕ್ರಿ ದಯಾನಂದ್‌ ಲೈಫ್‌ ಸ್ಟೋರಿ ಭಾಗ 37
ಶ್ರೀರಾಂಪುರದಲ್ಲಿ ಭೋಗ್ಯಕ್ಕೆ ಒಂದು ಮನೆ ತೆಗೆದುಕೊಂಡೆ. ಕೆಲಸ ಬಿಟ್ಟಿದ್ದೆ. 10 ಲಕ್ಷ ಭೋಗ್ಯದ ದುಡ್ಡೆಂದು ಕೊಟ್ಟಿದ್ದೆ. ನೋಡಿದ್ರೆ, ನಾನು ದುಡ್ಡು ಕೊಟ್ಟವನು ಆ ಮನೆಯ ಮಾಲೀಕನೇ ಅಲ್ಲ. ಪಿ.ಎಫ್‌ ದುಡ್ಡು ಮನೆ ಕಟ್ಟಿ ಕಳೆದುಕೊಂಡ್ರೆ, ಪೂರ್ತಿ ಜೀವನ ಸಂಪಾದನೆ ಮಾಡಿದ್ದ ಹಣ ಹೀಗೆ ಹೋಯ್ತು. ಆ ಮನೆಯ ಸೀಜ್ ಆಗುವುದರಲ್ಲಿತ್ತು. ಎಲ್ಲರನ್ನು ನಗಿಸಬೇಕು. ಇನ್ನೊಂದು ಕಡೆ ಕಾಲು ನೋವು, ಕುಂಟುಕೊಂಡು ಕಾರ್ಯಕ್ರಮ ಮಾಡಬೇಕು. ದುಡ್ಡಿರಲಿಲ್ಲ. ಮಕ್ಕಳು ಚಿಕ್ಕವರು. ಮನೆಯನ್ನು ಯಾವಾಗ ಸೀಜ್‌ ಮಾಡ್ತಾರೊ ಗೊತ್ತಿಲ್ಲ. ನೀವು ಹೋಗಿ ಬಿಡಿ. ದುಬಾರಿ ಬೆಲೆಯ ವಸ್ತು ಇದ್ರೆ, ಅದನ್ನು ತೆಗೆದುಕೊಂಡು ಹೋಗ್ತಾರೆ ಎಂದ್ರು. ಮನೆಯಿಲ್ಲ, ದುಡ್ಡಿಲ್ಲ. ಶೋ ಸಿಕ್ಕಾಪಟ್ಟೆ ಇದೆ, ದೇಹ, ಮನೆ, ದುಡ್ಡು... ಹೀಗೆ ಟೆನ್ಷನ್‌ಗಳ ಸರಮಾಲೆ. ಇದರ ಜತೆ ಜನರನ್ನು ನಗಿಸಬೇಕು. ನಾನು ಇಡೀ ಜೀವನದಲ್ಲಿ ಸಂಪಾದಿಸಿದ್ದನ್ನು ನೋವಿನಲ್ಲಿದ್ದ ಈ ಮೂರು ವರ್ಷಗಳಲ್ಲೇ ಸಂಪಾದಿಸಿಬಿಟ್ಟೆ. ಹತ್ತು ಲಕ್ಷ ಇಸ್ಕೊಂಡೆ ಬಿಡಲಿಲ್ಲ. ಮತ್ತೆ ಹಳೆ ಜಾಗದಲ್ಲಿಯೇ ಮನೆ ಕಟ್ಟಿಸಿಕೊಂಡೆ.


ಕಾಲಲ್ಲಿ ಸಮಸ್ಯೆ ಇಲ್ಲ. ಪೆಟ್ಟು ಬಿದ್ದಿರುವುದು ಸೊಂಟಕ್ಕೆ ಎಂದು ವೈದ್ಯರೊಬ್ಬರು ಹೇಳಿದ್ರು. ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಆಪರೇಷನ್‌ ಮಾಡಿಸಿಕೊಂಡೆ. ಈಗ ಆರಾಮಾಗಿ ನಡೆಯುತ್ತೇನೆ, ಓಡುತ್ತೇನೆ. ಯಾವುದೇ ಸಮಸ್ಯೆ ಇಲ್ಲ. ಆದರೆ, ದಯಾನಂದ್‌ ಕಾಲು ಕಟ್‌ ಮಾಡಿದ್ದಾರೆ ಎಂದು ಪ್ರಚಾರ ಆಯಿತು. ನಾನು ಇದ್ದೀನಿ ಎಂಬುದನ್ನು ತೋರಿಸಲು, ಮತ್ತೇ ಟಿವಿಯಲ್ಲಿ, ಶೋಗಳಲ್ಲಿ ಕಾಣಿಸಿಕೊಂಡೆ. ಇವತ್ತಿಗೂ ಅವಕಾಶಗಳಿದ್ದು, ಬ್ಯುಸಿ ಇದ್ದೇನೆ. ಮಂಗಳೂರು, ಉಡುಪಿ, ಸೂರತ್ಕಲ್‌, ಕುಂದಾಪುರ... ಅಲೆಲ್ಲ ಕರೆಯುತ್ತಾರೆ. ಅಲ್ಲಿಯ ಜನ ಡಬಲ್‌ ಮೀನಿಂಗ್‌ಗೆ ನಗುವುದಿಲ್ಲ. ಯಕ್ಷಗಾನ ನೋಡುವ ಪ್ರೇಕ್ಷಕರು ಅವರು. ಇನ್‌ಟಲೆಕ್ಚುವಲ್ ಕಾಮಿಡಿ ಇದ್ರೆ ಮಾತ್ರವೇ ಅಲ್ಲಿಯವರು ನಗುವುದು.ಮುಂದುವರೆಯುವುದು...

5 views