ಕಷ್ಟಪಟ್ಟು ಮೇಲೆ ಬಂದಾಗ ಸಿಗುವ ಖುಶಿ ಹೇಗಿರುತ್ತೆ?

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 60
ನೋವು, ಹಾಸ್ಯ, ಭೀಕರತೆ, ಭಯ ಉಂಟು ಮಾಡುವಂತಹ ಸನ್ನಿವೇಶಗಳು ನನ್ನ ಜೀವನದಲ್ಲಿ ಬಹಳ ಬಂದಿವೆ. ನನ್ನನ್ನು ಕೈಹಿಡಿದು ಕರೆದುಕೊಂಡು ಯಾರೂ ಹತ್ತಿಸಲಿಲ್ಲ. ನಾನೇ ಹಾರಿಕೊಂಡು, ಹತ್ತಿಕೊಂಡು ಹೋಗಬೇಕಾಗಿತ್ತು. ಯಾರಾದ್ರೂ ನಮ್ಮನ್ನು ಮೇಲೆ ಏರಿಸುವುದರಿಂದ ಸಂತೋಷ ಸಿಗುವುದಿಲ್ಲ. ನಾವಾಗಿಯೇ ಪ್ರತಿಯೊಂದು ಹಂತವನ್ನು ದಾಟಿ ಮೇಲೇರಿದಾಗ ಮಾತ್ರವೇ ಬಹಳ ಖುಷಿ ಸಿಗುತ್ತದೆ. ಬೆಟ್ಟದ ಮೇಲೆ ಹೆಲಿಕಾಪ್ಟರ್‌ನಲ್ಲಿ ಹೋದರೆ ಮಜಾ ಸಿಗುವುದಿಲ್ಲ. ಶಬರಿ ಮಲೆಗೆ ಹೆಲಿಕಾಪ್ಟರ್‌ನಿಂದಲೂ ಹೋಗಬಹುದು. ಆದರೆ, ಬೆಟ್ಟವನ್ನು ಹತ್ತಿ ಹೋದರೇನೆ ಖುಷಿ ಸಿಗುವುದು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹತ್ತಿ ಹೋದಾಗ ಸಿಗುವ ಖುಷಿಯೇ ಬೇರೆ. ಜೀವನದಲ್ಲಿ ಕಷ್ಟಪಟ್ಟು ಗುರಿ ತಲುಪಿದಾಗ ಬಹಳ ಚೆನ್ನಾಗಿರುತ್ತದೆ.


ನನ್ನ ಜೀವನದಲ್ಲಿಯೂ ಕಷ್ಟಪಟ್ಟು ಗುರಿ ಮುಟ್ಟಿರುವ ಹಲವು ಘಟನೆಗಳಿವೆ. ಕೊಪ್ಪಳದಲ್ಲಿ ಕೆಲಸದಲ್ಲಿದ್ದೆ ಎಂದು ಮೊದಲೇ ಹೇಳಿದ್ದೆ. ನಾನು ನನ್ನೂರಿನಲ್ಲಿ ಇದ್ದಾಗ ಬಹಳ ಗೌರವ ಕೊಡುತ್ತಿದ್ರು. ಪಂಡಿತರ ಮಗನೇ, ಡಾಕ್ಟರ್‌ ಮಗನೇ ಎಂದೆಲ್ಲ ಕರೆಯುತ್ತಿದ್ರು. ನನ್ನ ಮನೆತನಕ್ಕೆ, ಅಪ್ಪನಿಗೆ ಬಹಳ ಮರ್ಯಾದೆ ಇತ್ತು. ಆ ಮರ್ಯಾದೆ ನನಗೂ ಸಿಗುತ್ತಿತ್ತು.ಮುಂದುವರೆಯುವುದು...

20 views