Preface: “ಕೋಟೆ ನಾಡಿನ ಒಂಟಿ ಸಲಗ” - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ

Updated: Jan 24, 2021

ಓಟದ ಆರಂಭ


ನಾನೊಬ್ಬ ಪ್ಯಾಷನೇಟ್ ರಂಗಕರ್ಮಿ, ಫುಲ್‍ಟೈಮ್ ಫಿಲಂ ಮೇಕರ್. ಆದರೆ ಪ್ರೊಫೆಷನಲ್ ಲೇಖಕನಲ್ಲ. ಬರವಣ ಗೆ ಖುಷಿ ಕೊಡುತ್ತೆ ಅನ್ನೋದನ್ನ ಒಪ್ತೇನಾದ್ರೂ ಬದುಕಿಗೋಸ್ಕರ ಬರವಣ ಗೆಯನ್ನ ನಂಬಿಕೊಂಡವನಲ್ಲ ನಾನು. ನಟನೆ ಮತ್ತು ನಿರ್ದೇಶನ ನನ್ನ ಪಾಲಿನ ಅನ್ನ ಮತ್ತು ಆತ್ಮ ಸಂತೋಷ. ಹಾಗಾಗಿ ಬರವಣಗೆಯಿಂದ ದಕ್ಕುವುದೆಲ್ಲವೂ ನನ್ನ ಪಾಲಿಗೆ ದೀಪಾವಳಿ ಬೋನಸ್!’

2003ರಲ್ಲಿ ಕಾಲೇಜು ಓದುತ್ತಿದ್ದ ದಿನಗಳ ಯಾವುದೊ ಒಂದು ಘಳಿಗೆಯಲ್ಲಿ ನಾನೂ ಏಕೆ ನಟನಾಗಬಾರದು? ಅಂತ ಅನ್ನಿಸಿದೇ ತಡ ಹಿಂದೂ ಮುಂದು ಯೋಚಿಸದೇ ಬೆಂಗಳೂರಿನ ಸಮಷ್ಠಿ ರಂಗ ತಂಡ ಸೇರಿಕೊಂಡು ಹವ್ಸಾಸಿ ನಟನಾಗಿ ಮೊದಲ ಹೆಜ್ಜೆ ಇಟ್ಟೇಬಿಟ್ಟಿದ್ದೆ. ನಂತರ ಅನೇಕ ಹವ್ಯಾಸಿ ರಂಗತಂಡಗಳಲ್ಲಿ ನಟ, ತಂತ್ರಜÐ ಹೀಗೆ ಅನೇಕ ಅವತಾರ ಎತ್ತಿದೆ. ಮುಂದೆ ಅಂದರೆ 2010ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರಕ್ಕೆ ಆಯ್ಕೆಯಾಗಿ ಪೂರ್ಣಾವಧಿ ಅಭಿನಯದ ಕೋರ್ಸು ಮಾಡಿಕೊಂಡೆ. ಅಲ್ಲಿಂದ ಮುಂದೆ ಹಿಂತಿರುಗಿ ನೋಡುವ ಅಂತ ಅನ್ನಿಸಿತಾದರೂ ಅದ್ಯಾಕೊ ಸಮಯವೇ ಸಿಗಲಿಲ್ಲ. ಅಷ್ಟು ಬಿಡುವಿಲ್ಲದ ರಂಗಚಟುವಟಿಕೆಗಳಲ್ಲಿ ಮುಳುಗಿ ಹೋದೆ. ನಾಟಕ ಶಾಲೆಯಿಂದ ಹೊರಬಿದ್ದ ನಂತರ ನಾಟಕಗಳನ್ನು ಮಾಡುವುದರ ಜೊತೆಗೆ ಕನ್ನಡದ ಕೆಲವು ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿ ಫಿಲಂ ಮೇಕಿಂಗ್ ಕಲಿಯುವುದರ ಜೊತೆಗೆ ರಂಗಭೂಮಿಗಿಂತಲೂ ಸಿನಿಮಾ ಮಾಧ್ಯಮದ ಶಕ್ತಿ, ವ್ಯಾಪ್ತಿ, ಪ್ರಭಾವ ದೊಡ್ಡದು ಅನ್ನುವ ಸತ್ಯ ಕಂಡುಕೊಂಡೆ. ಜೊತೆಗೆ ಕಾಲೇಜ್ ದಿನಗಳಿಂದಲೂ ಸಾಹಿತ್ಯದ ಮೇಲೆ ಒಂಥರ ಲವ್. ಅದರಲ್ಲೂ ತೇಜಸ್ವಿ ಬಾಸ್ (ಕೆ.ಪಿ ಪೂರ್ಣಚಂದ್ರ ತೇಜಸ್ವಿ) ಅಂದರೆ ಸಾಕು ಮಧ್ಯರಾತ್ರಿ ಬೇಕಾದ್ರೂ ಎದ್ದು ಕೂತು ಗಂಟಗಟ್ಟಲೇ ಮಾತಾಡುತ್ತಿದ್ದೆ. ಹಾಗಾಗಿ ಬಾಸ್ ಬಗ್ಗೆ ಯಾಕೆ ಒಂದು ಡಾಕ್ಯುಮೆಂಟರಿ ಮಾಡಬಾರದು ಅಂತ ಅನ್ನಿಸಿದ್ದೇ ತಡ ಗೆಳೆಯರನ್ನೆಲ್ಲಾ ಕಟ್ಟಿಕೊಂಡು 2012ರ ಇಡೀ ವರ್ಷ ಕರ್ನಾಟಕವನ್ನೆಲ್ಲಾ ಅಲೆದು ತೇಜಸ್ವಿ ಬದುಕಿನ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದೆ. ಅದು ಮತ್ತೆ ಮತ್ತೆ ತೇಜಸ್ವಿ ಹೆಸರಿನಲ್ಲಿ ಬಿಡುಗಡೆಯಾಗಿ, ಯಶಸ್ವಿಯಾಗಿ ಒಬ್ಬ ಸಮರ್ಥ ಡಾಕ್ಯುಮೆಂಟರಿ ಫಿಲಂ ಮೇಕರ್ ಅಂತ ನನಗೆ ಹೆಸರು ತಂದು ಕೊಟ್ಟಿತು. ಜೊತೆಗೆ ನನ್ನಿಂದ ಮುಂದೆ ಡಾ. ಎಂ ಎಂ ಕಲಬುರ್ಗಿ, ಬಿ.ಜಿ.ಎಲ್ ಸ್ವಾಮಿ, ಡಿವಿಜಿ, ಕುವೆಂಪು, ಬೇಂದ್ರೆ, ಸರ್ ಮಿರ್ಝಾ ಇಸ್ಮಾಯಿಲ್, ಬಿ.ಎಂ.ಶ್ರೀ, ಬೆಸಗರಹಳ್ಳಿ ರಾಮಣ್ಣ, ಬೀಚಿ, ಡಾ. ರಾಜ್‍ಕುಮಾರ್ ಮೊದಲಾದ ಕನ್ನಡದ ಮಹನೀಯರÀ ಕುರಿತು ಸಾಕ್ಷ್ಯಚಿತ್ರಗಳನ್ನು ಮಾಡಿಸಿತು. ಜೊತೆಗೆ ಕೆಲವು ಜಾಹೀರಾತುಗಳು, ಕಿರುಚಿತ್ರಗಳನ್ನೂ ನಿರ್ದೇಶಿಸಿದೆ. ಪುಸ್ತಕ ಬರೆಯಬೇಕು ಎಂದು ತಮಾಷೆಗೂ ಕೂಡ ಅಂದುಕೊಳ್ಳದೆ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ ಗ್ರಂಥಕರ್ತ ಎನ್ನುವ ಟ್ಯಾಗು ಅಂಟಿಹಾಕಿದ್ದು ಕೂಡಾ ಇದೇ ತೇಜಸ್ವಿ! ನಾವು ಮಾಡಿದ ಮೊದಲ ಸಾಕ್ಷ್ಯಚಿತ್ರ ಮತ್ತೆ ಮತ್ತೆ ತೇಜಸ್ವಿ ಬಿಡುಗಡೆಯಾದ ನಂತರ ಅವಧಿ ಅಂತರ್ಜಾಲ ಮ್ಯಾಗಝೀನ್‍ನ ಮುಖ್ಯಸ್ಥರಾದ ಜಿ.ಎನ್ ಮೋಹನ್ ಅವರು ನಿಮ್ಮ ತೇಜಸ್ವಿ ಡಾಕ್ಯುಮೆಂಟರಿಯ ಅನುಭವಗಳನ್ನ ಬರೆದುಕೊಡ್ತೀರ?ಎಂದು ಕೇಳಿದಾಗ ಒಂದು ಕ್ಷಣ ಹೆದರಿದ್ದೆನಾದರೂ ಹೆದರಿ ಹಿಂಜರಿಯುವುದು ವೀರನ ಲಕ್ಷಣವೇ? ಅಂದುಕೊಂಡು ಯೆಸ್ ಸಾರ್ ಎಂದುಒಪ್ಪಿಗೆ ಸೂಚಿಸಿ ಬರವಣ ಗೆ ಪ್ರಾರಂಭಿಸಿದ್ದೆ. ಇನ್ ಫ್ಯಾಕ್ಟ್ ಸಿನಿಮಾ, ಸಾಕ್ಷ್ಯಚಿತ್ರ, ಕಿರುಚಿತ್ರಗಳ ಸ್ಕ್ರಿಪ್ಟ್ ನಾನೇ ಬರೆದಿದ್ದೆನಾದರೂ ಈ ರೀತಿಯ ಪುಸ್ತಕ ಬರೆಯುವ ಪ್ರಕ್ರಿಯೆ ನನಗೆ ತುಂಬಾ ಹೊಸದಾಗಿತ್ತು. ಆದರೆ ಬಂದ ಹಾಗೆ ಬರೆದೆ, ಅವಧಿಯಲ್ಲಿ ”ತೇಜಸ್ವಿಯನ್ನು ಹುಡುಕುತ್ತಾ" ಹೆಸರಿನ ಆ ಅಂಕಣ ಮಾಲಿಕೆ ಸೂಪರ್‍ಹಿಟ್ ಆಗಿತ್ತು. ನಂತರ ಜಿ.ಎನ್ ಮೋಹನ್ ಅವರೇ ನಿಮ್ ಲೇಖನಗಳನ್ನ ಪುಸ್ತಕದ ರೂಪದಲ್ಲಿ ಪ್ರಿಂಟ್ ಮಾಡ್ತೀನಿ” ಅಂದು ಮತ್ತೊಂದು ಶಾಕ್ ಕೊಟ್ಟಿದ್ದರು. ಸ್ವಲ್ಪ ಕಾಲದಲ್ಲೇ ಆ ಲೇಖನಗಳನ್ನೆಲ್ಲಾ ಒಟ್ಟು ಮಾಡಿ,“ತೇಜಸ್ವಿ ಸಿಕ್ಕರು”ಎಂದು ನಾಮಕರಣ ಮಾಡಿ ಪುಸ್ತಕ ಪಬ್ಲಿಷ್ ಮಾಡಿ ಹೇಳಿದಂತೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟೇ ಬಿಟ್ಟರು! 2018 ಮತ್ತು 2019ರ ವರ್ಷ “ತೇಜಸ್ವಿ ಸಿಕ್ಕರು” ಬೆಸ್ಟ್ ಸೆಲ್ಲರ್ ಆಗುವುದರ ಜೊತೆಗೆ ಅನೇಕ ವಾರ ಟಾಪ್ ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತ್ತು. ಈಗ ನಿಮ್ಮ ಕೈಲಿರುವುದು ನನ್ನ ಎರಡನೇಯ ಪುಸ್ತಕ “ಡಾ. ಬಿ.ಎಲ್ ವೇಣು ಅವರ ಬದುಕು-ಕ್ಯಾಮೆರಾ ಕಣ ್ಣನ ಮೂಲಕ”! ಅಂಡ್ ಒನ್ಸ್ ಅಗೇನ್ ಈ ಪುಸ್ತಕ ಕೂಡ ನನಗೊಂದು ಬೋನಸ್ಸೇ, ಬಟ್ ದೀಪಾವಳಿಯದ್ದಲ್ಲ, ಕೊರೋನಾ ಲಾಕ್‍ಡೌನ್ ಬೋನಸ್.

ಯಾಕಂದ್ರೆ ಈ ಪುಸ್ತಕ ನಾನು ಬರೆದದ್ದು 2020ರ ಕೊರೋನಾ ಲಾಕ್‍ಡೌನ್ ಬಿಡುವಿನಲ್ಲಿ. ಇನ್ನು ನೀವೇನಾದ್ರೂ “ಡಾ. ಬಿ.ಎಲ್ ವೇಣು ಅಂದರೆ ಯಾರು ಮೊದಲು ಅದನ್ನ ಹೇಳು! ಅಂತ ಕೇಳಿದ್ದೇ ಆದ್ರೆ ನನ್ನ ಉತ್ತರ ಇದು; “ವೇಣು ಸರ್ ಗಂಡುಮೆಟ್ಟಿನ ನಾಡು ಚಿತ್ರದುರ್ಗದ ಮಣ ್ಣನ ಅಪ್ಪಟ ಕತೆಗಾರರು, ಕಾದಂಬರಿಕಾರರು ಮತ್ತು ಕನ್ನಡ ಚಲನಚಿತ್ರಗಳ ಸಂಭಾಷಣೆಕಾರರೂ ಹೌದು. ಬಂಗಾರದ ಮನುಷ್ಯ, ಭೂತಯ್ಯನ ಮಗ ಸಿನಿಮಾಗಳ ಖ್ಯಾತಿಯ ಸಿದ್ಧಲಿಂಗಯ್ಯನವರು ನಿರ್ದೇಶಿಸಿದ ಪರಾಜಿತ ಹಾಗೂ ಪ್ರೇಮಪರ್ವ ಸಿನಿಮಾಗಳು ವೇಣು ಅವರ ಕಾದಂಬರಿಗಳನ್ನು ಆಧರಿಸಿದ್ದವು. ಜೊತೆಗೆ ಪುಟ್ಟಣ್ಣ P್ಪಣಗಾಲ್ ಅವರ “ಅಮೃತ ಘಳಿಗೆ” ಸಂಭಾಷಣೆಕಾರರು ನಮ್ಮ ವೇಣು ಸರ್. ದೇವಾ, ಓಲವಿನ ಉಡುಗೊರೆ, ಜನನಾಯಕ, ರಾಜಕೀಯ, ರಾಮರಾಜ್ಯದಲ್ಲಿ ರಾಕ್ಷಸರು ಮೊದಲಾದ ಸೂಪರ್ ಹಿಟ್ ಸಿನಿಮಾಗಳ ಸಂಭಾಷಣೆ ಇದೇ ನಮ್ಮ ವೇಣು ಅವರದ್ದು. ಜೊತೆಗೆ “ಕಲ್ಲರಳಿ ಹೂವ್ವಾಗಿ” ಸಿನಿಮಾ ವೇಣು ಅವರ ಅದೇ ಹೆಸರಿನ ಕಾದಂಬರಿಯನ್ನ ಆಧರಿಸಿ ತೆಗೆದ ಚಿತ್ರ. ವೇಣು ಅವರ ಮತ್ತೊಂದು ಹೆಚ್ಚುಗಾರಿಕೆ ಇರುವುದು ದುರ್ಗದ ಇತಿಹಾಸವನ್ನು ಆಧರಿಸಿ ಬರೆದ ಅನೇಕ ಐತಿಹಾಸಿಕ ಕಾದಂಬರಿಗಳ ಸರಣ ಯಲ್ಲಿ. ಈ ಸರಣ ಯ ಮುಖ್ಯ ಕಾದಂಬರಿ “ಗಂಡುಗಳಿ ಮದಕರಿ ನಾಯಕ” ಈಗ ದರ್ಶನ್ ನಾಯಕತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡದ ಅದ್ಧೂರಿ ವೆಚ್ಚದ ಸಿನಿಮಾ.


ಆರೋಗ್ಯ ಇಲಾಖೆಯಲ್ಲಿ ನೌಕರಿಯಲ್ಲಿದ್ದುಕೊಂಡು ಬಿಡುವಿನ ವೇಳೆಯಲ್ಲಷ್ಟೇ ಬರೆದ ವೇಣು ಅವರು ಒಬ್ಬ ಪೂರ್ಣಾವಧಿ ಲೇಖಕನಷ್ಟೇ ಸಮರ್ಥವಾಗಿ ಅನೇಕ ಪ್ರಕಾರಗಳಲ್ಲಿ ಬರೆದು ಸೈ ಅನ್ನಿಸಿಕೊಂಡಿದ್ದು ಅವರ ಬರವಣ ಗೆಯ ತಾಕತ್ತಿಗೆ ಹಿಡಿದ ಕನ್ನಡಿ. ಇಂತಹ ಬಹುಮುಖ ಪ್ರತಿಭೆಯ ಲೇಖಕ ವೇಣು ಅವರ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಾಕ್ಷ್ಯಚಿತ್ರ ಮಾಡಿಕೊಡುವ ಕೆಲಸ 2018ರ ಜುಲೈ ತಿಂಗಳಲ್ಲಿ ನಮಗೆ ವಹಿಸಿತ್ತು. ಆಗ ವೇಣು ಅವರ ಬಗ್ಗೆ ಓದು, ಸಂಶೋಧನೆ, ಅವರ ಕೃತಿಗಳ ಓದು, ವೇಣು ಅವರ ಸಂದರ್ಶನ, ಅವರ ಒಡನಾಡಿಗಳ ಸಂದರ್ಶನ,, ದುರ್ಗದ ಕೋಟೆ, ಬೆಟ್ಟ, ಊರು ಕೇರಿಗಳ ಚಿತ್ರೀಕರಣ ಮೊದಲಾದ ಕೆಲಸಗಳನ್ನು ಮಾಡಿ 36 ನಿಮಿಷಗಳ ಸಾಕ್ಷ್ಯಚಿತ್ರ ರೂಪಸಿದ್ದೆವು, ಚಲನಚಿತ್ರ ಅಕಾಡೆಮಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ವೇಣು ಅವರನ್ನು ಸನ್ಮಾನಿಸಿ, ಅಭಿನಂದಿಸಿದ ಸಂದರ್ಭದಲ್ಲಿ ನಾವು ಮಾಡಿದ್ದ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿತ್ತು ಮತ್ತು ತುಂಬಾ ಮೆಚ್ಚುಗೆಯ ಮಾತುಗಳು ಸಾಕ್ಷ್ಯಚಿತ್ರದ ಕುರಿತಾಗಿ ಬಂದಿದ್ದವು. ನಂತರ ಸಾಕ್ಷ್ಯಚಿತ್ರಕ್ಕಾಗಿ ಮಾಡಿದ್ದ ವೇಣು ಅವರ ಒಟ್ಟು 3 ಗಂಟೆಗಳ ಅವಧಿಯ ಸಂದರ್ಶನ ಹಾಗೂ ಅವರ ಒಡನಾಡಿಗಳ 7-8 ಗಂಟೆಗಳ ಸಂದರ್ಶನಗಳನ್ನು ಯಥಾವಥ್ ನಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್‍ನಲ್ಲಿ ಆಸಕ್ತರು ನೋಡಲಿ ಎಂಬ ಕಾರಣಕ್ಕೆ ಹಾಕಿದ್ದೆವು. ಆದರೆ ನಮ್ಮ ನಿರೀಕ್ಷೆ ಮೀರಿ ಆ ಸಂದರ್ಶನಗಳನ್ನು ಸಿನಿಮಾ ನೋಡಿದಂತೆ ಅಪಾರ ಸಂಖ್ಯೆಯಲ್ಲಿ ಆಸಕ್ತರು, ವೇಣು ಅವರ ಅಭಿಮಾನಿಗಳು ನೋಡಿ ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದರು. ನಮಗಂತೂ ಈ ಪ್ರತಿಕ್ರಿಯೆಗಳು ಸಂತಸ, ತೃಪ್ತಿ ಉಂಟು ಮಾಡಿದ್ದು ಸುಳ್ಳಲ್ಲ. ನಂತರ ಹೀಗೆ ನಮ್ಮ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾಗ ಇದ್ದಕ್ಕಿದ್ದಂತೆ ಗೆಳೆಯ ತಾರಾನಾಥ್ ಭದ್ರಾವತಿಯವರು ಕರೆ ಮಾಡಿ “ವೇಣು ಅವರ ಡಾಕ್ಯುಮೆಂಟರಿ ಮತ್ತು ಸಂದರ್ಶನಗಳನ್ನು ನೋಡಿದ್ದೇವೆ. ಇದನ್ನೆಲ್ಲಾ ಸೇರಿಸಿ ಒಂದು ಪುಸ್ತಕ ರೂಪದಲ್ಲಿ ಬರೆದುಕೊಡಬಹುದೇ ಪರಮ್?” ಎಂದು ಕೇಳಿದ್ದೇ ಪ್ರೇರಣೆಯಾಗಿ ಈ ಪುಸ್ತಕ ಈಗ ನಿಮ್ಮ ಕೈಲಿದೆ. ಉಳಿದದ್ದು ನಿಮಗೆ ಸೇರಿದ್ದು. ಓದಿ. ಅಪ್ಪಿತಪ್ಪಿ ಮೆಚ್ಚುಗೆಯಾದರೆ ತಿಳಿಸಬಹುದು, ಮೆಚ್ಚುಗೆಯಾಗದಿದ್ದರೆ ತಿಳಿಸಲೇಬೇಕು ಎಂಬುದು ನನ್ನ ಪ್ರೀತಿ ಪೂರ್ವಕ ಆಗ್ರಹ. ಈ ಪುಸ್ತಕ ಬರೆಯಲು ಅನುಮತಿ ಕೊಟ್ಟ ಡಾ. ಬಿ.ಎಲ್ ವೇಣು ಅವರಿಗೆ, ಪ್ರಕಟಿಸುತ್ತಿರುವ ಫೀನಿಕ್ಸ್ ಬುಕ್ ಹೌಸ್‍ನ ಮಾಲೀಕರಿಗೆ, ಸಿಬ್ಬಂದಿಗಳಿಗೆ, ಪುಸ್ತಕ ಬರೆಯುವ ಆಫರ್ ಕೊಟ್ಟ ಗೆಳೆಯರಾದ ತಾರಾನಾಥ್ ಭದ್ರಾವತಿ ಅವರಿಗೆ, ಚಂದದ ಮುಖಪುಟ ಮಾಡಿದವರಿಗೆ, ಅಂದವಾಗಿ ಮುದ್ರಿಸಿ ಕೊಟ್ಟವರಿಗೆ, ಸಾಕ್ಷ್ಯಚಿತ್ರಕ್ಕಾಗಿ ದುಡಿದ ನನ್ನ ತಂಡಕ್ಕೆ, ನನ್ನ ಪ್ರತಿ ಸಾಕ್ಷ್ಯಚಿತ್ರದ ಸಂಶೋಧನೆ ಮತ್ತು ಸ್ಕ್ರಿಪ್ಟ್ ಬರೆದುಕೊಟ್ಟು ನನ್ನ ಶ್ರಮ ಕಡಿಮೆ ಮಾಡುವÀ ನನ್ನ ಪತ್ನಿ ಸವಿತಾಗೆ, ಜಗತ್ತನ್ನೇ ಲಾಕ್‍ಡೌನ್ ಮಾಡಿ ಬರೆಯಲು ಸಮಯ ಓದಗಿಸುವುದರ ಜೊತೆಗೆ ಅನೇಕ ಸೋಗಲಾಡಿಗಳ ನಿಜ ಬಣ್ಣ ಬಯಲು ಮಾಡಿದ ಕೊರೋನಾ ಮಹಾಮಾರಿಗೆ, ಮುಖ್ಯವಾಗಿ ಹಣದ ಜೊತೆಗೆ ಅಮೂಲ್ಯ ಸಮಯ ಕೊಟ್ಟು ಓದುವ ಓದುಗ ದೊರೆಗೆ ನನ್ನ ಸಾವಿರದ ಶರಣು!


ಕೆ.ಎಸ್ ಪರಮೇಶ್ವರ

ನಟ, ನಿರ್ದೇಶಕ, ರಂಗಕರ್ಮಿ

ಕಲಾಮಾಧ್ಯಮ

ಪದ್ಮನಾಭನಗರ, ಬೆಂಗಳೂರು, ಜುಲೈ 30 2020.129 views