ಕಾಡಿನಿಂದ ಬಂದ ಮೇಲೆ ಅಣ್ಣಾವ್ರಿಗೆ ಮೋಸ ಮಾಡಿದ ಆ ವ್ಯಕ್ತಿ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 49


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಕಾಡಿನಿಂದ ಬಂದ ಮೇಲೆ ಅವರಿಗೆ ಸಿನಿಮಾ ಮಾಡುವ ಮನಸ್ಸೇ ಹೊರಟು ಹೋಯ್ತು. ಪಿಕ್ಚರ್‌ ಬೇಡ, ಮ್ಯೂಸಿಕಲ್‌ ನೈಟ್ಸ್‌ ಮಾಡಿದ್ರೆ ನಿಮ್ಮ ಮನಸ್ಸು ಹಗುರ ಆಗಬಹುದು ಎಂದು ಹೇಳಿದೆ ನಾನು. ಅದೇ ಸಮಯಕ್ಕೆ ಸರಿಯಾಗಿ ಯಾರೋ ಬಬ್ಬರು ಬಿಜಾಪುರದಿಂದ ನಮಗೆ ಮ್ಯೂಸಿಕಲ್‌ ನೈಟ್ಸ್‌ ಮಾಡುವಂತೆ ಕೇಳಿಕೊಂಡ್ರು. ರಾಜ್‌ಕುಮಾರ್‌ ಅವರು ಒಪ್ಪಿಕೊಂಡು, ಬಿಜಾಪುರದಲ್ಲಿ ಮ್ಯೂಸಿಕಲ್‌ ನೈಟ್ಸ್‌ ಮಾಡಿದೆವು. ನಮ್ಮ ಗ್ರಹಚಾರಕ್ಕೆ ಮ್ಯೂಸಿಕಲ್‌ ನೈಟ್ಸ್‌ ಮಾಡಿಸಿದವನು ಕಾರ್ಯಕ್ರಮ ಮುಗಿದ ಮೇಲೆ ನಾಪತ್ತೆ ಆಗಿದ್ದ. ದುಡ್ಡು ತೆಗೆದುಕೊಂಡು ಹೊರಟು ಹೋಗಿಬಿಟ್ಟಿದ್ದ. ಕಾಡಿನಿಂದ ಬಂದ ನಂತರ ನಡೆಸಿದ ಮೊದಲ ಕಾರ್ಯಕ್ರಮ ಅದು. ಜನರು ಕಿಕ್ಕಿರಿದು ತುಂಬಿದ್ರು. ರಾಜ್‌ಕುಮಾರ್‌ ಅವರು, ‘ನಾನು ಅಷ್ಟು ದೂರದಿಂದ ಬಂದು, ಇಷ್ಟು ಕಷ್ಟಪಟ್ಟರೂ ಕೊನೆಗೆ ಅದರ ಫಲ ಸಿಗಲಿಲ್ಲ ಅಲ್ವಾ ಭಗವಾನ್‌. ನಾವು ಯಾಕೆ ಇದನ್ನು ಮಾಡಬೇಕು’ ಅಂದ್ರು. ಆಮೇಲೆ ಮ್ಯೂಸಿಕಲ್‌ ನೈಟ್ಸ್ ಯೋಚನೆಯನ್ನೇ ಬಿಟ್ಟುಬಿಟ್ಟೆವು.ಮುಂದುವರೆಯುವುದು...

34 views