ಕೊಪ್ಪಳದಲ್ಲಿ ನನ್ನ ಸಂಬಳ 210.ರೂ ಊಟದ ಬಿಲ್‌ 240.ರೂ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 69ಕೊಪ್ಪಳದಲ್ಲೊಮ್ಮೆ ಸಿನಿಮಾಕ್ಕೆಂದು ಹೋಗಿದ್ವಿ. ಬರುತ್ತಾ 10.30 ಆಗಿತ್ತು. ಊಟಕ್ಕೆಂದು ಖಾನಾವಳಿಗೆ ಹೋದ್ವಿ. ಅಲ್ಲಿ ಊಟ ಖಾಲಿಯಾಗಿತ್ತು. ಖಡಕ್‌ ರೊಟ್ಟಿ ಕೊಡ್ತೇನೆ ಎಂದು ಅಲ್ಲಿದ್ದ ಮಹಿಳೆ ಹೇಳಿದ್ರು. ಅವರು ಕೈಗೆ ಕೊಟ್ಟಿದ್ದನ್ನು ತಟ್ಟೆ ಎಂದು ಕೊಂಡಿದ್ದೆ. ಅದರ ಮೇಲೆ ಪಲ್ಯ ಹಾಕಿದ್ರು. ರೊಟ್ಟಿ ಎಲ್ಲಿ ಎಂದೆ. ನೋಡಿದ್ರೆ, ಅದೇ ಖಡಕ್‌ ರೊಟ್ಟಿ. ಪಲ್ಯದ ಜೊತೆ ಕಲಸಿ ತಿನ್ನಿ ಅಂದ್ರು. ಮೊದ ಮೊದಲು ಬಾರಿ ಕಷ್ಟ ಆಯ್ತು. ಆದರೆ, ಈಗ ನನ್ನ ಡೈನಿಂಗ್‌ ಟೇಬಲ್‌ ಮೇಲೆ ಖಡಕ್‌ ರೊಟ್ಟಿ ಇರುತ್ತದೆ. ಗುರೆಳ್ಳು ಚಟ್ನಿ, ಪುಂಡಿಕಾಯಿ ಪಲ್ಯ... ಇವುಗಳನ್ನೆಲ್ಲ ಮರೆಯಲು ಆಗುವುದಿಲ್ಲ. ಚೆನ್ನಾಗಿ ತಿನ್ನುತ್ತಿದ್ದೆ ತಿಂಗಳಿಗೆ 240.ರೂ ಖಾನಾವಳಿ ಬಿಲ್‌ ಬಂದಿತ್ತು. ನನ್ನ ಸಂಬಳವೇ 210.ರೂ ಇತ್ತು.ಮುಂದುವರೆಯುವುದು...

24 views