ಕೊಪ್ಪಳದಲ್ಲಿ ಬಾಡಿಗೆ ಮನೆ ಹುಡುಕುವಾಗಿನ ಫಜೀತಿ

Updated: Oct 28, 2021

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 70ಕೊಪ್ಪಳದಲ್ಲಿ ನಾವು ಮೂವರು ಬ್ಯಾಚುಲರ್ಸ್‌ಗಳು ರೂಮಿಗಾಗಿ ಹುಡುಕುತ್ತಿದೆವು. ಬ್ಯಾಚುರಲ್ಸ್‌ಗಳಿಗೆ ರೂಂ ಕೊಡಲ್ಲಾ ಎನ್ನುತ್ತಿದ್ರು. ಆದ್ರೂ ಬಿಡದೇ, ಟ್ರೈ ಮಾಡೋಣ ಎಂದು ಹುಡುಕುತ್ತಲೇ ಇದ್ವಿ. ಆಗ ನಂದು ಅಟೆಂಡರ್‌ ಪೋಸ್ಟ್‌. ಆದರೆ, ಮಾಡುತ್ತಿದ್ದುದು ಅಸ್ಟಿಟೆಂಟ್‌ ಮ್ಯಾನೇಜರ್‌ ಕೆಲಸ. ಶಾಂತ್‌ಕುಮಾರ್‌ ಅವರು ಅಸಿಸ್ಟೆಂಟ್‌ ಮ್ಯಾನೇಜರ್‌ ರೀತಿಯಲ್ಲಿಯೇ ನನ್ನನ್ನು ನೋಡಿಕೊಂಡ್ರು. ಚಿಕ್ಕ ಪೋಸ್ಟ್‌ ಎಂದು ಯಾವತ್ತೂ ಕಡೆಗಣಿಸಲಿಲ್ಲ. ನನಗೆ ಎಸ್‌ಎಸ್‌ಎಲ್‌ಸಿ ಪುಸ್ತಕ ತಂದುಕೊಟ್ಟು ಪರೀಕ್ಷೆ ಬರೆಯಲು ಅವರು ಹೇಳಿದ್ರು. ಮಹಾನ್‌ ವ್ಯಕ್ತಿ ಅವರು. ಇವತ್ತು ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.


ಅಲ್ಲಿ ಖಾನ್‌ ಸಾಬ್‌ ಅವರ ಬಿಲ್ಡಿಂಗ್‌ ಇತ್ತು. ಅಲ್ಲಿ ಮನೆಗಳು ಖಾಲಿ ಇದ್ದವು. ಅವರು ನಿಮ್ಮನ್ನೆಲ್ಲ ಹತ್ತಿರ ಸೇರಿಸಲ್ಲ ಎಂದು ಯಾರೋ ಹೇಳಿದ್ರು. ನಾನು ಹೋದೆ. ಕನ್ನೇಶ್ವರ ರಾಮ ಸಿನಿಮಾದ ಮನೆ ಇದ್ದ ಹಾಗಿತ್ತು ಅದು. ಪೂರ್ತಿ ಕಲ್ಲಿನ ಬಿಲ್ಡಿಂಗ್‌, ಬಂದೂಕು, ಜುಬ್ಬ ಹಾಕಿಕೊಂಡು ಕೂತಿದ್ರು. ಬಾಪ್ಪ ತಮ್ಮ, ಮೂರು ಜನ ಬಂದಿದ್ದೀರಾ? ಬನ್ನಿ ಇಲ್ಲಿ ಕುಂದ್ರಿ. ಸಾಬ್ರು ಮನೆ ಚಾ ಕುಡಿತೀರೇನು ಎಂದ್ರು. ಕುಡೀತೀನಿ ಸರ್‌ ಎಂದೆ. ನಾನು ಮಸೀದಿಗೆಲ್ಲ ಹೋಗಿ ನಮಾಜ್‌ ಕೂಡ ಮಾಡಿದ್ದ ಅನುಭವ ಇತ್ತು ನನಗೆ.


ಮನೆ ಕೇಳಕ್ಕೆ ಬಂದಿದ್ದೀರಲ್ಲಾ, ಎಷ್ಟು ಧೈರ್ಯ ಇದೆ ನಿಮಗೆ. ಎಲ್ಲಾ ಹೆಣ್ಣು ಮಕ್ಕಳು ಇದ್ದಾರೆ ಎಂದ್ರು. ನಾನು ಹೊಡಿತಾರೇನೋ ಅಂದುಕೊಂಡೆ. ಆದರೆ, ಅವರು ಮೆಚ್ಚಿದ್ದೇನೆ. ನೀವು ಮಾತನಾಡುವುದು ನೋಡಿದ್ರೆ, ನಿಮ್ಮ ಮೇಲೆ ಭರವಸೆ ಐತೆ. ನಿಮ್ಮನ್ನು ನಂಬಿ ಮನೆ ಕೊಡುತ್ತಿದ್ದೇನೆ ಎಂದ್ರು. ಅಲ್ಲಿ ಹೋದ ಮೇಲೆ ಗೊತ್ತಾಯ್ತು. ಅಲ್ಲಿ ಲಿಂಗಾಯತರು ಸೇರಿದಂತೆ ಎಲ್ಲ ಧರ್ಮದವರು ಇದ್ರು. ಅಲ್ಲಿಗೆ ಹೋಗಬೇಡಿ ಎಂದು ಸುಮ್ನೆ ನಮಗೆ ಹೆದರಿಕೆ ಹುಟ್ಟಿಸಿದ್ರು.
ಮುಂದುವರಿಯುವುದು

ಸಂದರ್ಶನ: ಕೆ.ಎಸ್‌. ಪರಮೇಶ್ವರ

29 views