ಕೊಪ್ಪಳದಲ್ಲಿ ರೈಲ್ವೇ ಟ್ರ್ಯಾಕೇ ಟಾಯ್ಲೆಟ್

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 8
ಸರ್ಕಾರಿ ಕೆಲಸಕ್ಕೆ ಸೇರುವ ಮೊದಲು ಹಲವು ಕೆಲಸಗಳನ್ನು ಮಾಡಿದ್ದೇನೆ. ಬಟ್ಟೆ ವ್ಯಾಪಾರ, ಹೋಟೆಲ್‌ನಲ್ಲಿ ಕ್ಯಾಷಿಯರ್‌, ಮ್ಯಾನೇಜರ್‌ ಆಗಿದ್ದೆ. ಕೋಳಿ ಫಾರಂನಲ್ಲಿ ಕೆಲಸ ಮಾಡಿದ್ದೆ, ಸ್ವಂತ ಕಾಫಿ ಪುಡಿಯ ಕಂಪನಿ ತೆಗಿದಿದ್ದೆ. ಮನೆಯಲ್ಲಿಯೇ ಡಬ್ಬದಲ್ಲಿ ಕಾಫಿ ಪುಡಿಯನ್ನು ಹಾಕಿಕೊಂಡು ಕಂಪನಿಯದ್ದು ಎಂದು ಸುಳ್ಳು ಹೇಳಿ ಅಂಗಡಿಗಳಿಗೆ ಮಾರುತ್ತಿದ್ದೆ. ನಂತರ ಇವೆಲ್ಲ ಸರಿ ಇಲ್ಲ ಎಂದೆನಿಸಿ, ಕರ್ನಾಟಕ ಹ್ಯಾಂಡಿಕ್ರಾಫ್ಟ್‌ಗೆ ಕೆಲಸಕ್ಕೆ ಸೇರಿದೆ. ಅಲ್ಲಿ ಹೋಗಿ ನೋಡಿದ್ರೆ ಮ್ಯಾನೇಜರ್‌ಗೆ ನಾನು ಅಸಿಸ್ಟೆಂಟ್‌. 1975ರಲ್ಲಿ ಕೊಪ್ಪಳದಲ್ಲಿ ಎಲ್ಲಿಯೂ ಟಾಯ್ಲೆಟ್‌ ಇರಲಿಲ್ಲ. ರೈಲ್ವೆ ಟ್ರ್ಯಾಕ್‌ನಲ್ಲಿ ಟಾಯ್ಲೆಟ್‌ಗೆ ಹೋಗಬೇಕಿತ್ತು. ಯಾರಾದ್ರು ಬಂದ್ರೆ ಲುಂಗಿಯಲ್ಲಿ ಮುಖ ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ಇತ್ತು. ಆದರೂ, ಅದನ್ನೇ ಖುಷಿ ಎಂದುಕೊಂಡು ಜೀವನ ಕಳೆದೆ.


ಕೊಪ್ಪಳಕ್ಕೆ ನಾಟಕದ ಕಂಪನಿಗಳು ಬರುತ್ತಿತ್ತು. ನಾನು ಹಿಂದಿ ನಟರ ಮಿಮಿಕ್ರಿ ಮಾಡುತ್ತಿದ್ದೆ. ಆಗಿನ ಕಾಲದಲ್ಲಿ ಹಿಂದಿ ನಟರ ಮಿಮಿಕ್ರಿ ಮಾಡುವವರು ಯಾರು ಇರಲಿಲ್ಲ. ಹಾಗಾಗಿ ಎಲ್ಲ ನಾಟಕ ಕಂಪನಿಯವರು ನನ್ನನ್ನು ಕರೆಯುತ್ತಿದ್ರು. ಪಾತ್ರ ಕೊಟ್ಟರೆ ಮಾತ್ರವೇ ಮಾಡುತ್ತೇನೆ ಎನ್ನುತ್ತಿದ್ದೆ. ಹಾಗಾಗಿ ಸಣ್ಣ ಪಾತ್ರಗಳನ್ನು ಕೊಡುತ್ತಿದ್ರು. ನಾಲ್ಕು ವರ್ಷ ಕೊಪ್ಪಳದಲ್ಲಿದ್ದೆ.ಮುಂದುವರೆಯುವುದು...

14 views