ಕೊಪ್ಪಳದ ಆ ಬಾಡಿಗೆ ಮನೆಯಲ್ಲಿ ದೆವ್ವಗಳ ಕಾಟ

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 72
ಕೊಪ್ಪಳದ ಖಾನ್‌ಸಾಹೇಬರ ಮನೆಯಲ್ಲಿ ಬಾಡಿಗೆ ಇದ್ದಾಗ ವಿಚಿತ್ರವಾದ ಘಟನೆಯೊಂದು ನಡೆಯಿತು. ಯಾರು ನಂಬುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ನಾನು ದೆವ್ವ, ಪಿಶಾಚಿಗಳಲ್ಲಿ ನಂಬಿಕೆ ಇಲ್ಲದಿರುವ ವ್ಯಕ್ತಿ. ಅದೊಂದು ದೊಡ್ಡ ಮನೆ. ಐದು ಕೋಣೆ ಇತ್ತು. ಯಾರು ಮನೆಯಲ್ಲಿ ಇರಲಿಲ್ಲ. ವರಾಂಡದಲ್ಲಿ ನಾನು ಮಲಗಿದ್ದೆ. ಅಡುಗೆ ಮನೆಯಲ್ಲಿ ದಢಾರ್‌ಎಂಬ ಶಬ್ದ ಆಯ್ತು. ಅಡುಗೆ ಮನೆ ಚಿಲಕ ಹೇಗೆ ತೆರೆಯಿತು. ಇಲ್ಲಿ ಯಾರು ಇಲ್ವಲ್ಲಾ ಎಂದು ನೋಡಿದೆ. ಹ್ಯಾಮರ್‌ತರೋಣ ಎಂದು ರೂಮಿಗೆ ಓಡಿ ಹೋದ್ರೆ, ಅಡುಗೆ ಮನೆ ಡಬಾರ್‌ಎಂದು ತೆರೆಯಿತು. ಟಾರ್ಚ್‌ಹಾಕಿ ನೋಡಿದೆ. ಅಡುಗೆ ಮನೆಯಲ್ಲಿ ಯಾರೂ ಇರಲಿಲ್ಲ. ಐದನೇ ಬೆಡ್‌ ರೂಂ ನಿಂದ ಮತ್ತೆ ಅದೇ ಶಬ್ದ ಕೇಳಿಸಿತು. ಮತ್ತೆ ಅಲ್ಲಿ ಹೋದೆ. ಯಾರೂ ಕಾಣಿಸಲಿಲ್ಲ. ಹೊರಗಡೆ ಚಿಲಕ ಹಾಕಿದ ಹಾಗೆ ಇತ್ತು. ನೋಡಿದ್ರೆ, ವಯಸ್ಸಾದ ವ್ಯಕ್ತಿ ಮತ್ತು ಹುಡುಗಿ ಒಬ್ಬರಿಗೊಬ್ರು ಮಾತನಾಡುತ್ತಿದ್ರು. ನಾನು ಉರ್ದುವಿನಲ್ಲಿ ‘ಯಾರು ನೀವು. ಇದು ನಮ್ಮ ಮನೆ. ಯಾಕೆ ಇಲ್ಲಿಗೆ ಬಂದಿದ್ದೀರಿ’ ಎಂದು ಮಾತನಾಡಿದೆ. ಅವರು ಸುಮ್ನೆ ನಡೆದುಕೊಂಡು ಹೋದ್ರು. ಅವರು ಯಾರು ಎಲ್ಲಿಗೆ ಹೋದ್ರು ಎಂಬುದು ನನಗೆ ಗೊತ್ತಿಲ್ಲ.


ಮಾರನೇ ದಿನ ಸಂಜೆ ಎಲ್ಲರೂ ಜೊತೆಗಿದ್ದಾಗ ಈ ಘಟನೆಯನ್ನು ಹೇಳಿದೆ. ಎಲ್ರೂ ನಕ್ಕರು. ಒಬ್ಬ ವ್ಯಕ್ತಿ ಮಾತ್ರ ಸುಮ್ನೆ ಎದ್ದು ಹೋದ. ಅವನ ಬಳಿ ಹೋಗಿ ಕೇಳಿದೆ. ಮುಂಚೆ ಇಲ್ಲೊಬ್ಬ ಬುದ್ಧಿಮಾಂದ್ಯ ಹುಡುಗಿ ಇದ್ದಳು. ಯಾರೊ ವ್ಯಕ್ತಿ ಪಾಠ ಕಲಿಸಲು ಬಂದು ಹೆಚ್ಚುಕಮ್ಮಿ ಆಗಿ, ಆಮೇಲೆ ಇಬ್ರು ಸತ್ತು ಹೋದ್ರು. ಅದಿನ್ನು ಕಾಡುತ್ತಿರಬೇಕು ಎಂದ್ರು. ಯಾವುದೋ ಊರಿಗೆ ಹೋಗಿದ್ದೇನೆ. ಅಪ್ಪ, ಅಮ್ಮ ಇಬ್ಬರೂ ಇಲ್ಲ. ನನ್ನ ಜೊತೆಗಿದ್ದವರು ಟ್ರಾನ್ಸ್‌ಫರ್‌ಆಗಿ ಹೋಗಿದ್ರು. ಆ ಮನೆ ನನಗೆ ಬಹಳ ಇಷ್ಟವಾಗಿತ್ತು. ಆದರೆ, ಈ ರೀತಿಯ ಘಟನೆ ಆದ ಮೇಲೆ ಅಲ್ಲಿ ಇರುವುದಾದರೂ ಹೇಗೆ. ಭಯ ಶುರುವಾಯ್ತು. ಆ ಘಟನೆಯಾದ ಎರಡು–ಮೂರು ದಿನದೊಳಗೆ ನಾನು ಮನೆ ಶಿಫ್ಟ್‌ಮಾಡಿದೆ.ಮುಂದುವರೆಯುವುದು...

13 views