ಕೊಪ್ಪಳದ ಜನರ ಮನಸ್ಸು ಎಂಥದು?

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 74ಬೆಂಗಳೂರಿಗೆ ಕಳುಹಿಸಿಕೊಡಲು ಕೊಪ್ಪಳದ ರೈಲ್ವೆ ಸ್ಟೇಷನ್‌ತುಂಬಾ ಜನ ಬಂದಿದ್ರು. ಸಾಮಾನ್ಯವಾಗಿ ಆ ನಿಲ್ದಾಣದಲ್ಲಿ ನಾಲ್ಕು ಜನ ಇದ್ರೆ ಅದೇ ಹೆಚ್ಚಿತ್ತು. ನಾನೇನು ಸಂಪಾದನೆ ಮಾಡಿದ್ದೇನೆ ಎಂಬುದು ನನಗೆ ಆಗ ಗೊತ್ತಾಯಿತು. ಆ ಜನರನ್ನು ಕಂಡು ನಾನು ಈ ಊರಿಂದ ಹೋಗಬೇಕಾ? ನಾನು ಈ ಊರಿನವನಲ್ವಾ ಎನಿಸಿಬಿಡ್ತು. ರೈಲ್ವೆ ಸ್ಟೇಷನ್‌ಗಾರ್ಡ್‌ಇರಿ, ಸರ್‌, ಇವತ್ತು ಮೂರನೇ ನಂ. ಪ್ಲ್ಯಾಟ್‌ ಫಾರ್ಮ್‌ಗೆ ಗಾಡಿ ಬರುತ್ತದೆ. ಎರಡು ನಿಮಿಷ ಇರಿ ಸರ್, ನಾನು ಒಂದನೇ ಪ್ಲ್ಯಾಟ್‌ ಫಾರ್ಮ್‌ಗೆ ಹಾಕ್ತೇನೆ ರೈಲನ್ನು ಎಂದ್ರು. ಕಲಾವಿದರಿಗೆ ಇದಕ್ಕಿಂತ ಹೆಚ್ಚಿನ ಪ್ರೀತಿ ಇನ್ನೇನು ಬೇಕು.


ನಾನೇನು ದೊಡ್ಡ ಕಲಾವಿದನಲ್ಲ. ವೇದಿಕೆ ಮೇಲೆ ಕಾರ್ಯಕ್ರಮ ಮಾಡುವವನು ಅಷ್ಟೇ. ಆದರೂ, ಕಾರಿನಲ್ಲಿ ಹೋಗುವಾಗ ಸರ್ಕಲ್‌ನಲ್ಲಿ ನಿಲ್ಲಿಸಿದ್ರೆ, ಕಾನ್‌ಸ್ಟೆಬಲ್‌ನೋಡಿ ನಮಸ್ಕಾರ ಹೇಳ್ತಾರೆ. ಉಳಿದವರು, ಯಾರಿದು ಎಂದು ನೋಡಿ ಅವರು ನಮಸ್ಕಾರ ಹೇಳ್ತಾರೆ. ನಾವು ಅವರಿಗೆ ಏನು ಕೊಟ್ಟಿಲ್ಲ. ಆದರೂ, ಅಷ್ಟು ಪ್ರೀತಿ ತೋರಿಸ್ತಾರೆ.


ನಾನು ಶ್ರೀರಾಮಪುರದ ಮನೆಯಲ್ಲಿದ್ದಾಗ ಸ್ಕೂಟರ್‌ತೆಗೆದುಕೊಂಡು ಮಲ್ಲೇಶ್ವರಂಗೆ ಹೋಗಿದ್ದೆ. ಕಾನ್‌ಸ್ಟೆಬಲ್‌ಗಾಡಿ ನಿಲ್ಲಿಸಿ, 2345 ಕಾರಿದೆ ಅಲ್ವಾ ಸರ್‌. ಅದನ್ನು ತೆಗೆದುಕೊಂಡು ಹೋಗಿ ಗಾಡಿ ಬೇಡ ಎಂದ್ರು. ಯಾಕೆ ಸರ್‌ಎಂದೆ. ಇರುವುದೊಂದೇ ಪೀಸ್‌ ಕರ್ನಾಟಕಕ್ಕೆ ಎಲ್ಲೂ ಬೀಳಬಾರದು. ನೀವು ಚೆನ್ನಾಗಿರಬೇಕು ಎಂದ್ರು.ಮುಂದುವರೆಯುವುದು...

8 views