ಕೊಪ್ಪಳ ನನಗೆ ಕಲಿಸಿದ ಪಾಠ ಏನು?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 65ಕಲೆ ಬಹಳ ದೊಡ್ಡ ಸಾಗರ. ನೀನು ನಿನ್ನ ಸ್ನೇಹಿತನ ಬಗ್ಗೆ ಹೇಳು. ನಿನ್ನ ಬಗ್ಗೆ ಹೇಳುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ಇದು ನನ್ನ ಮಾತಿನಲ್ಲಿ ಸತ್ಯವಾಗಿದೆ. ಸಂಸರ್ಗ ಎನ್ನುವುದು ಬಹಳ ಮುಖ್ಯ. ಇದಕ್ಕೆ ಒಂದು ಘಟನೆಯನ್ನು ಮುಂದೆ ಹೇಳುತ್ತೇನೆ.


ಒಂದು ಹುಡುಗನಿಗೆ ಹೊಡೆದು, ಬುದ್ಧಿಹೇಳಿ, ಕಣ್ಣೀರು ಒರೆಸಿ, ಕಲಿಸುವ ರೀತಿಯಲ್ಲಿಯೇ ಕೊಪ್ಪಳ ನನಗೆ ಸಾಕಷ್ಟು ಪಾಠ ಕಲಿಸಿದೆ. ಅದು ಅರ್ಥವಾಗುವಷ್ಟರಲ್ಲಿ ನಾನು ಕೊಪ್ಪಳವನ್ನು ಬಿಟ್ಟಿದ್ದೆ. ನನಗೆ ಕೊಪ್ಪಳ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ರಾಯಚೂರು ಜಿಲ್ಲೆಯಿಂದ ಕೊಪ್ಪಳಕ್ಕೆ ಹೋಗಿ ಎಂದು ಆರ್ಡರ್‌ ಕೊಡುವಾಗ ಹೇಳಿದ್ರು. ರಾಯಚೂರಿಗೆ ಹೋಗಿ ಅಲ್ಲಿಂದ ಟಾಂಗದವರ ಬಳಿ ಕೊಪ್ಪಳ ಹೋಗಬೇಕು ಎಂದೆ. ಬಸ್‌ಗೆ ಹೋಗಿ ಎಂದ್ರು. 46.ರೂ ಟಿಕೆಟ್‌ ತೆಗೆದುಕೊಂಡ್ರು. ಬೆಂಗಳೂರಿನಿಂದ ಕೊಪ್ಪಳಕ್ಕೂ ಅಷ್ಟೇ ಟಿಕೆಟ್‌ ಇತ್ತು. ಇಲ್ಲಿಂದ ಹೋಗುವವರೆಗೂ ಹೇಗೆ ಹೋಗಬೇಕು ಎಂದು ಯಾರೂ ಹೇಳಿರಲಿಲ್ಲ.


ಶಾಂತ್‌ಕುಮಾರ್‌ ಎಂಬುವವರು ನನಗೆ ಮ್ಯಾನೇಜರ್‌ ಆಗಿದ್ರು. ಅವರು ನನಗಿಂತ ಆರು ತಿಂಗಳು ದೊಡ್ಡವರಾಗಿದ್ರು ಅಷ್ಟೆ. ನನಗೆ ಅಲ್ಲಿ ಏನೇನೂ ಗೊತ್ತಿರಲಿಲ್ಲ. ತಿಂಡಿ ತಿನ್ನಲು ಹೋದೆ. ಶೀರಾ ಇದೆ ಎಂದ್ರು. ನಾನು ಅದನ್ನು ಶಿರ ಎಂದುಕೊಂಡು, ತಲೆ ಮಾಂಸ ತಿನ್ನೋದಾ ಬೇಡ ಎಂದು ವಾಪಸ್‌ ಬಂದೆ. ಅವರ ಮಾತಿನ ಶೈಲಿ ನೋಡಿದಾಗ ಇದು ಯಾವ ಭಾಷೆಯಪ್ಪಾ ಹೇಗೆ ಕಲಿಯೋದು ಎಂದು ಅನಿಸಿತ್ತು.ಮುಂದುವರೆಯುವುದು...

14 views