“ಕ್ರಿಯೇಟಿವಿಟಿ ಅಂದ್ರೆ ಶಂಕ್ರಣ್ಣ”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 12

(ಸ್ವಾಮಿ ಆಂಡ್ ಫ್ರೆಂಡ್ಸ್ ಸ್ವಾಮಿ, ಅಥವಾ ಮಾಸ್ಟರ್ ಮಂಜುನಾಥ್ ಅವರ ನೆನಪುಗಳು)


ಯಡಿಯೂರು ಲೇಕ್‌ ನ ಮಾರ್ಕೇಟ್‌ ಮಾಡಿದ ಜಾನ್‌ ದೇವರಾಜ್ಮಂಜುನಾಥ್: ಯಡಿಯೂರು ಲೇಕ್ ಪಕ್ಕ ಹಳೇದೊಂದು ಗಲ್ಲಿ ಇತ್ತು, ಮಾಲ್ಗುಡಿ ಡೇಸಲ್ಲಿ ಒಂದಷ್ಟು ಶಾಟ್ಸ್ ಮಿಸ್ ಆಗಿತ್ತೋ, ಅಥವಾ ಸರಿಯಾಗಿ ಬಂದಿರ್ಲಿಲ್ವೋ ಗೊತ್ತಿಲ್ಲ ನನಿಗೆ. ಆಗುಂಬೆಯಲ್ಲಿ ಏನು ಮಾರ್ಕೆಟ್ ಮಾಡಿದ್ರೋ, ಅದಷ್ಟನ್ನೂ ಯಡಿಯೂರು ಲೇಕ್ ಪಕ್ಕ ಡೂಪ್ಲಿಕೇಟ್ ಕ್ರಿಯೇಟ್ ಮಾಡಿದ್ರು. ಬಸವನಗುಡಿ ಆಕಡೆ ಹೆಚ್ಚುಕಮ್ಮಿ ಇಡೀ ರೋಡನ್ನೇ ಚೇಂಜ್ ಮಾಡಿದ್ರು, ಜಾನ್ ದೇವರಾಜ್ ಅವ್ರು.


ಒಂದಷ್ಟು ಸೀನ್ ಗಳಿವೆ. ಒಂದು ಸೀನು, ತಿಗ್ಗುನಳ್ಳಿ ಐ.ಬಿ. ರಾಜನ ಮನೆಯಾಗಿತ್ತು. ಒಂದು ಸೀನಲ್ಲಿ ಓಡೋದ್ರೆ, ಅದು ಶಂಕರ್ ನಾಗ್ ಅವ್ರ ಕಂಟ್ರೀ ಕ್ಲಬ್ ಫಾರ್ಮ್. ಮತ್ತೆ ಅಲ್ಲಿ ಒಂದು ಟರ್ನ್ ತಗೊಂಡ್ರೆ, ಯಡಿಯೂರು ಲೇಕ್ ಅದು. ಆಮೇಲೆ ಮನೆಯೊಳಗೆ ಹೋದ್ರೆ ಆಗುಂಬೆ. ಆ ಶಾಟ್ ನೋಡಿದ್ರೆ, ನನಗೆ ಗೊತ್ತಾಗುತ್ತೆ, ಎಲ್ಲೆಲ್ಲಿ ಮಾಡಿದ್ದೀನಿ ಅಂತ. ಬಟ್ ಬೇರೆ ಯಾರಿಗೂ ಗೊತ್ತಾಗಲ್ಲ. ನಮ್ಮ ಯೂನಿಟ್ ವ್ಯಾನ್ ಗೆ ರೈಲ್ವೆ ಭೋಗಿ ತರ ಪೇಂಟ್ ಮಾಡ್ಸಿದ್ರು. ಲಾಂಗ್ ಶಾಟ್ ಎಲ್ಲಾ ರೈಲಲ್ಲೇ ತಗೊಂಡಿದ್ರು. ಕ್ಲೊಸಪ್ ಎಲ್ಲಾ, ಯೂನಿಟ್ ವ್ಯಾನಲ್ಲೇ, ಒಂದೊಂದು ಬ್ಲಾಕ್ ಇಟ್ಕೊಂಡು ತಗೊತಾ ಇದ್ರು. ಯಾರಿಗೂ ಗೊತ್ತಾಗ್ತಿರ್ಲಿಲ್ಲ. ಹಾಗೆ ಅವ್ರದ್ದು ಇನೋವೇಟಿವ್ನೆಸ್.


ಸೋ ಅವರ ಮೈಂಡಲ್ಲಿ, ಸಿನಿಮಾ ಅಭಿರುಚಿ ಇರುವವರಿಗೆ, ಸಿನಿಮಾ ಕಲಿಯುವವರಿಗೆ, ಶಾರ್ಟ್ ಮೂವಿ ಅಥವಾ ವೆಬ್ ಸೀರಿಸ್ ಮಾಡುವವರಿಗೆ, ಶಂಕರ್ ನಾಗ್ ಅವ್ರ ವಿಜ್ವಲೈಸೇಷನ್ ಎಷ್ಟು ಕ್ಲಿಯರ್ ಆಗಿತ್ತೂಂತ ಗೊತ್ತಾಗುತ್ತೆ. ಆ ಸಿನಿಮಾ, ಸೀನು ಆಲ್ರಡಿ ಅವರ ಮೈಂಡಲ್ಲಿ ಓಡಿರ್ತಾ ಇತ್ತು ಅನ್ನೋದು ಗೊತ್ತಾಗುತ್ತೆ. ಎಸ್ಪೆಷಲ್ಲಿ ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಶಾರ್ಟ್ ಡಿವಿಷನ್, ಆಲ್ರಡಿ ಅವ್ರ ಮೈಂಡಲ್ಲಿ ರಡಿ ಇರ್ತಾ ಇತ್ತು. ಏನೂ ಕನ್ಫ್ಯೂಷನ್ ಇರ್ತಿರ್ಲಿಲ್ಲ. ಅದನ್ನ ಹೀಗೆ ಮಾಡಿದ್ರೆ, ಅಲ್ಲಿ ಜರ್ಕ್ ಹೊಡಿಬಹುದಾ, ಕಂಟಿನ್ಯೂಟಿ ಪ್ರಾಬ್ಲಮ್ ಆಗಬಹುದಾ, ಅಂತದ್ದೇನು ಇರುತ್ತಿರಲಿಲ್ಲ. ಆಲ್ರಡಿ ಅವರ ಮೈಂಡಲ್ಲಿ ಇರ್ತಾ ಇದ್ದಿದ್ರಿಂದ ಅವ್ರಿಗೆ ಕ್ಲಿಯರ್ ಆಗಿರ್ತಿತ್ತು, ಏನೂ ಕನ್ಫ್ಯೂಷನ್ ಇರ್ತಿರ್ಲಿಲ್ಲ. ಅಫ್ಕೋರ್ಸ್ ವಿ ಹ್ಯಾಡ್ ಅ ವಂಡರ್ಫುಲ್ ಟೀಮ್. ಆದ್ರೆ ಆ ಪ್ರೈಮರಿ ವಿಷ್ಯುವಲಾಯಿಸೇಷನ್ ಏನಿದೆ, ಅದ್ರಿಂದ ವಿ ಕ್ಯಾನ್ ಮೇಕ್ ವಂಡರ್ಸ್. ಕ್ಲಾರಿಟಿ ಇದ್ರೆ ನಿಮಗೆ ಇರುವ ಪ್ರೈಮರಿ ಸೋರ್ಸಲ್ಲಿ, ಏನು ಬೇಕಾದ್ರೂ ಎಚಿವ್ ಮಾಡ್ಬೋದು. ಲಿಟ್ರಲ್ಲಿ ನಿಮಗೆ ಏನು ಬೇಕು ಅಂತ ಗೊತ್ತಿರ್ಬೇಕು ಅಷ್ಟೇ.


ಪರಮ್: ಆಮೇಲೆ ನೀವು ರವಿಚಂದ್ರನ್ ಮೂವಿಯಲ್ಲಿ ಸುಮಾರು ವರ್ಕ್ ಮಾಡಿದ್ರಿ ಅಲ್ವಾ?

ಮಾಲ್ಗುಡಿಯ ಸ್ವಾಮಿ ರಣಧೀರದ ಪೋಲಿ ಹುಡುಗ ಆಗಿದ್ದು ಹೇಗೆ

ಮಂಜುನಾಥ್: ನನಗೆ ಸುಮಾರು ಜನ ಹೇಳ್ತಾರೆ “ಮಾಸ್ಟರ್ ಮಂಜುನಾಥ್ ಅಂದ್ರೆ ಕ್ವಾಲಿಟಿ ಆಕ್ಟಿಂಗ್” ಅಂತ. ಆದ್ರೆ ಅದೇನಲ್ಲ ನನಗೆ ಆ ಸಮಯದಲ್ಲಿ ಆ ತರದ ಕ್ವಾಲಿಟಿ ಸಿನಿಮಾ, ಕತೆ, ಪ್ರೊಡಕ್ಷನ್ ಹೌಸ್, ಡೈರಕ್ಡರ್ ಗಳ ಜೊತೆ ವರ್ಕ್ ಮಾಡೋದಕ್ಕೆ ಅವಕಾಶ ಸಿಕ್ಕಿದ್ದು, ನನ್ನ ಪುಣ್ಯ. ಅದ್ರಿಂದ ಮಾಸ್ಟರ್ ಮಂಜುನಾಥ್ ಅಂತ ಹೆಸರು ಉಳ್ಕೊಂಡಿದ್ಯೇನೋ? ಸೊ, ಮಾಲ್ಗುಡಿ ಡೇಸ್ ಆದ್ಮೇಲೆ ಏನಾಯ್ತು? ಟಿಪಿಕಲ್ಲಿ ಒಬ್ಬ ಆಕ್ಟರ್, ಒಂಥರಾ ಟೈಪ್ ಕಾಸ್ಟ್ ಆಗ್ಬಿಡ್ತೀವಿ. ಸೊ ‘ರಣಧೀರ’ ಬಂದಾಗ ಸುಮಾರು ಜನ ಹೇಳಿದ್ರು, “ಅದು ತುಂಬಾ ಕಮರ್ಷಿಯಲ್ ಮೂವಿ, ನಿನ್ನ ಬಾಯಲ್ಲಿ ಪೋಲಿ ಪೋಲಿ ಮಾತು ಹೇಳ್ಸೊದು” ಅಂತೆಲ್ಲಾ. ಆದ್ರೆ ಶಂಕರ್ ನಾಗ್ ಏನ್ಹೇಳಿದ್ರು ಅಂದ್ರೆ, “ನೀನು ಫಸ್ಟ್ ಅದನ್ನ ಮಾಡು, ಯಾಕಂದ್ರೆ, ನೀನು ಸ್ವಾಮಿ ಅಲ್ಲ, ನೀನು ಆಕ್ಟರ್. ಪಾತ್ರ ಮಾತಾಡೋದು. ನೀನು ಮಾತಾಡೋದಲ್ಲ. ಇಟ್ಸ್ ನಾಟ್ ಅಬೌಟ್ ಕಮರ್ಷಿಯಲ್. ಇಟ್ಸ್ ಅಬೌಟ್ ಆಕ್ಟಿಂಗ್. ಅದನ್ನ ಮಾಡಿದ್ರೇನೇ ನೀನು ಈ ಮೋಲ್ಡನ್ನ ಬ್ರೇಕ್ ಮಾಡೋದಕ್ಕೆ ಸಾಧ್ಯ. ಇಲ್ಲಾಂದ್ರೆ ನೀನು ಇಲ್ಲೇ ಉಳ್ಕೊತೀಯ. ನಿನ್ನ ಕೆರಿಯರ್ ಇಲ್ಲೇ ಮುಗಿಯುತ್ತೆ.” ಅಂತ ಹೇಳಿ ಎನ್ಕರೇಜ್ ಮಾಡಿದ್ರು.


ಇದೇ ಮಾಲ್ಗುಡಿ ಡೇಸ್ ಇಂದ, ‘ಅಗ್ನೀಪಥ್’ ಮೂವಿಯಲ್ಲಿ ಅಮಿತಾಬ್ ಬಚ್ಚನ್ ಅವ್ರ ಯಂಗರ್ ಕ್ಯಾರಕ್ಟರ್ ಮಾಡುವ ಅವಕಾಶ ಸಿಕ್ತು. ಅಫ್ಕೋರ್ಸ್ ಇದರಿಂದ ಅದು ಸಿಕ್ತು. ಅದು ಈ ಮೋಲ್ಡನ್ನ ಬ್ರೇಕ್ ಮಾಡ್ತು. ಈಗ ಬೆಂಗಾಲ್ ಆ ಕಡೆ ಎಲ್ಲಾ ಹೋದ್ರೆ, ಅಗ್ನೀಪಥ್ ತುಂಬಾ ಪಾಪ್ಯುಲರ್. ಸಬ್ಸೀಕ್ವೆಂಟ್ಲೀ ನನ್ನ ಲಾಸ್ಟ್ ಸಿನಿಮಾ ‘ಸ್ವಾತಿ ಕಿರಣಂ’ಅಂತ. ಕೆ ವಿಶ್ವನಾಥ್, ಮೊಮ್ಮುಟ್ಟಿ ಯಂತ ಕಲಾವಿದರು ಇದ್ದಾರ ಅದ್ರಲ್ಲಿ. ಅಲ್ಲೆಲ್ಲಾ ಹೋದ್ರೆ ಅವ್ರು ಇವೆರಡೂ ಸಿನಿಮಾಗಳನ್ನ ನೋಡಲ್ಲ. ‘ಗಂಗಾಧರ’ಆ ಕ್ಯಾರೆಕ್ಟರ್ ನೋಡ್ತಾರೆ.


ಪಂಜಾಬಿ ಊಟಕ್ಕೂ ಸೌತ್‌ ಇಂಡಿಯನ್ ಊಟಕ್ಕೂ ಹೋಲಿಕೆ ಇದಿಯಾ

ಒಬ್ಬ ಆಕ್ಟರ್ ಗೆ ಒಂದು ಒಳ್ಳೆ ಅವಕಾಶ ಸಿಗೋದು ದೊಡ್ಡದಲ್ಲ. ಸಿಕ್ಕಿದ್ಮೇಲೆ ಆ ಡೈರಕ್ಟರ್, ಟೀಮ್ ಏನಿದೆ ಹೀರೋ ಏನಿದ್ದಾರೆ, ಅವ್ರು ಎಷ್ಟು ಸ್ಕ್ರೀನ್ ಸ್ಪೇಸ್ ಬಿಟ್ಕೊಟ್ಟಿದಾರೆ ಅನ್ನೋದು ಮುಖ್ಯವಾಗುತ್ತೆ. ಎಸ್ಪೆಷಲ್ಲಿ ರವಿಚಂದ್ರನ್ ಅವ್ರು. ನಾನು ಯಾಕೆ ಈ ಮಾತನ್ನ ಹೇಳ್ತಾ ಇದ್ದೀನಿಂತಂದ್ರೆ, ರವಿಚಂದ್ರನ್ ಅವ್ರು ಸೂಪರ್ ಸ್ಟಾರ್. ಆಫ್ಟರ್ ‘ಪ್ರೇಮಲೋಕ’ ಅವರು ನನಗೆ ಅಷ್ಟು ಸ್ಪೇಸ್ ಬಿಟ್ಟುಕೊಡ್ಬೇಕಾಗಿದ್ದಿರ್ಲಿಲ್ಲ ‘ರಣಧೀರ’ದಲ್ಲಿ. ಆದ್ರೆ ನನ್ನ ಕ್ಯಾರಕ್ಟರೈಸೇಶನ್ ಗೆ ಆ ಸ್ಪೇಸ್ ಕೊಟ್ರು. “ಇಡೀ ಸಿನಿಮಾದಲ್ಲಿ ಇವ್ನಿಗೆ ಜಾಸ್ತಿ ಸ್ಪೇಸ್ ಹೋಗ್ತಿದೆಂತೆಲ್ಲ”ಯೋಚ್ನ್ ಮಾಡ್ಲಿಲ್ಲ ಅವ್ರು. ಅವ್ರು ಕೂಡ ಹಾಗೆನೆ ಕಮರ್ಷಿಯಲ್. ಲಾರ್ಜರ್ ದೆನ್ ಲೈಫ್, ಗ್ರಾಂಡ್ನೆಸ್ ಆ ಥರ. ತುಂಬಾ ಜನ ಹೋಲಿಕೆ ಮಾಡ್ತಾರೆ. ಶಂಕರ್ ನಾಗ್ ಹಾಗೂ ರವಿಚಂದ್ರನ್ ಅವ್ರನ್ನ ಹೋಲಿಕೆ ಮಾಡೋದು, ಸೌತ್ ಇಂಡಿಯನ್ ಊಟಕ್ಕೂ ಪಂಜಾಬಿ ಊಟಕ್ಕೂ ಹೋಲಿಕೆ ಮಾಡಿದ ಹಾಗೆ ಆಗುತ್ತೆ. ಎರಡನ್ನೂ ಹೋಲಿಸಕ್ಕೆ ಆಗಲ್ಲ. ಎರಡೂ ತುಂಬಾ ಟೇಸ್ಟಿಯಾಗಿರುತ್ತೆ. ಅಲ್ಲಿ ಸಿಕ್ಕಾಪಟ್ಟೆ ಬಟರ್ ಇರುತ್ತೆ, ಇವ್ರಲ್ಲಿ ಇರಲ್ಲ. ಆದ್ರೆ ಊಟ ಊಟನೇ, ರುಚಿ ರುಚಿನೇ ಆತರ. ಹಾಗೆ ಇವರಿಬ್ಬರನ್ನೂ ಹೊಲಿಕೆ ಮಾಡಕ್ಕೆ ಸಾಧ್ಯನೇ ಇಲ್ಲ. ಯಾಕಂದ್ರೆ ಇವ್ರ ಜಾನರ್ ಬೇರೆ. ಅವರ ಜಾನರ್ ಬೇರೆನೇ.


ಶಂಕರ್ ನಾಗ್ ಅವ್ರು ಹೀರೋ ಆಗಿ ಆಕ್ಟ್ ಮಾಡ್ತಿದ್ರೆ, ಟೈಮಿಗೆ ಸರಿಯಾಗಿ ಬರೋರು. ಅವ್ರೂ ಪ್ರೊಫೆಶನಲ್ ಆಕ್ಟರ್. ನಾನೂ ಪ್ರೊಫೆಶನಲ್ ಆಕ್ಟರ್. ಯಾವುದೋ ಬುಕ್ ತಂದು ಓದ್ತಾ ಇದ್ವಿ. ಹಾಗೆ ಸಾಧಾರಣವಾಗಿ ಇರ್ತಾ ಇದ್ರು. ಆದ್ರೆ ಅವ್ರ ಡೈರೆಕ್ಷನ್ ಇದ್ದಾಗ ಆ ರೀತಿನೇ ಬೇರೆ. ಬಾಡಿ ಲಾಂಗ್ವೇಜ್ ಬೇರೆ. ಕಮಿಂಗ್ ಟು ‘ರವಿಚಂದ್ರನ್’ಮೋರ್ ಟೆಕ್ನಿಕಲ್, ಮೋರ್ ವಿಷುವಲೈಸೇಷನ್, ಗ್ರಾಂಡ್. ನಾವು ಎರಡು ಕಾರ್ ನಿಲ್ಸಿದ್ರೆ, ಅವರಿಗೆ ಸಾವಿರ ಕಾರ್ ಗಳನ್ನ ಇಟ್ಕೊಂಡು ಮಾಡ್ತಾಯಿದ್ರು. ನಾವು ಹೊಡ್ದಾಕಿದ್ರೆ, ಕಿಟಕಿ ಗಾಜುನ ಹೋಡ್ದಾಕ್ತಿದ್ವಿ. ಅವರು ಇಡೀ ಮನೆನೇ ಹೊಡ್ದಾಕ್ತಿದ್ರು. ಇಟ್ಸ್ ರಿಯಲ್ಲೀ ಇಂಪಾಸಿಬಲ್ ಟು ಕಂಪೇರ್. ಬಟ್ ನಾನು ಅವರಿಗೆ ಯಾವಾಗ್ಲೂ ಚಿರರುಣಿ. ಯಾಕಂದ್ರೆ ಒಂದು, ಆ ಮೋಲ್ಡ್ ಚೇಂಜ್ ಮಾಡಿದ್ದು. ಮತ್ತೆ ಆತರದ್ದು ಒಂದು ಪ್ಲಾಟ್ ಫಾರ್ಮ್ ಕ್ರಿಯೇಟ್ ಮಾಡಿಕೊಟ್ಟಿದ್ದು. ರಣಧೀರ, ಯುದ್ದಕಾಂಡ, ಕಿಂದರಿಜೋಗಿ, ರಾಮಾಚಾರಿ. ಇವೆಲ್ಲನೂ ಇವತ್ತಿಗೂ ತುಂಬಾ ಜನ ನೋಡ್ದಾಗೆಲ್ಲಾ ಮೆಸೇಜ್ ಮಾಡಿ ಅಪ್ರಿಸಿಯೇಟ್ ಮಾಡ್ತಾರೆ. ಬಟ್ ರಿಯಲ್ಲೀ ದಟ್ ಕ್ರೆಡಿಟ್ಸ್ ಆಂಡ್ ಅಪ್ರಿಸಿಯೇಷನ್ ಗೋಸ್ ಟು ಸಚ್ ಅ ವಂಡರ್ಫುಲ್ ಡೈರಕ್ಟರ್ಸ್ ಆಂಡ್ ಆಕ್ಟರ್ಸ್.


ಪರಮ್: ಇಷ್ಟು ಒಳ್ಳೆ ಕೆರಿಯರ್ ಇತ್ತು ಯಾಕೆ ಬಿಟ್ರಿ? ಅಂತ ಕೇಳ್ಬಹುದಾ?


ಅತೀ ಚಿಕ್ಕ ವಯಸ್ಸಿಗೆ 68 ಸಿನಿಮಾದ ಅನುಭವ ಇವರಿಗೆ

ಮಂಜುನಾಥ್: ಡೆಫಿನೇಟ್ಲೀ ಸರ್. ಅದಕ್ಕೆ ಎರಡು ಪೋರ್ಷನ್ ಆನ್ಸರ್ ಇದೆ. ಒಂದು ಪೋರ್ಷನ್ ಏನಂದ್ರೆ, ಸುಮಾರು ಜನ ಕೇಳ್ತಿದ್ರು “ನಿನಗೆ, ಕ್ಯಾಮರಾ ಫೇಸ್ ಮಾಡುವಾಗ ಭಯ ಆಗಿಲ್ವಾ? ಅಂತ.” ನನಿಗೆ ನಾರ್ಮಲ್ ಲೈಫ್ ಏನೂಂತ ಗೊತ್ತಿದ್ರೆ ಅಲ್ವಾ? ಕ್ಯಾಮರಾ ಭಯ ಇರೋದು? ಮೂರನೇ ವಯಸ್ಸಿಗೇ ಕ್ಯಾಮರಾ, ಸೆಟ್, ಶೂಟಿಂಗ್, ನನಗೆ ಇದ್ಯಾವುದೂ ಬೇರೆ ಅಂತ ಅನಿಸುತ್ತಾ ಇರ್ಲಿಲ್ಲ. ಯಾಕಂದ್ರೆ ನಾನು ಬೆಳ್ದಿದ್ದೇ ಅದ್ರಲ್ಲಿ. ಹಲವಾರು ಅಮ್ಮಂದಿರು, ಅಣ್ಣಂದಿರು, ಅಕ್ಕಂದಿರು. ವೈಶಾಲಿ ಕಾಸರವಳ್ಳಿ ಮೇಡಮ್, ಗಿರಿಜಾ ಲೋಕೇಶ್ ಮೇಡಮ್ ಆಗ್ಲಿ, ಹಲವಾರು ಜನ ಹೆಚ್ಚು ಕಮ್ಮಿ ಅವ್ರ ಸ್ವಂತ ಮಗು ತರನೇ ನನ್ನ ನೋಡ್ಕೊಂಡಿದಾರೆ, ಸೆಟ್ ಗಳಲ್ಲಿ. ಇವತ್ತಿಗೂ ನನ್ನ ಹಾಗೆನೇ ಟ್ರೀಟ್ ಮಾಡ್ತಾರೆ. ನನಗೆ ಅವೆಲ್ಲಾ ನಾರ್ಮಲ್. ಈಗ ನೀವು ಕೂಡ ಅಷ್ಟೆ, ನಿಮ್ಮ ಜೀವನದಲ್ಲಿ ಯಾವುದೇ ಕೆಲಸಗಳನ್ನ, ಹದಿನೈದು ವರ್ಷ ಮಾಡಿದ್ದೇ ಮಾಡಿ ಮಾಡಿ, ಒಂದು ಸ್ಯಾಚುರೇಷನ್ ಪಾಯಿಂಟ್ ಬಂದುಬಿಡುತ್ತೆ. ಅದು ಆಕ್ಟರ್, ಸೀರಿಯಸ್ ಆಗಿ ತಗೊಳದೇ ಇದ್ರೆ ಏನು ತೊಂದರೆನೇ ಇಲ್ಲ. ಮಾಡ್ತನೇ ಇರ್ಬಹುದು. ಬಟ್ ನಿಜ್ವಾಗ್ಲೂ ಸೀರಿಯಸ್ ಆಗಿ ತಗೊಂಡು ಮಾಡಿದ್ರೆ, ಆ ಸ್ಯಾಚುರೇಷನ್ ಬರಕ್ಕೆ ಶುರುವಾಗುತ್ತೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.


ಇನ್ನೊಂದು ಕಾರಣ ಏನಂದ್ರೆ, ನನಗೆ ಆಗ ಹದಿನೈದು ವರ್ಷ. ಬಾಡಿಯಲ್ಲಿ ಚೇಂಜಸ್ ಆಗ್ತಿತ್ತು. ಇನ್ನೂ ಆ ಮಕ್ಕಳ ರೋಲ್ ಮಾಡಕ್ಕೆ ಆಗಲ್ಲ. ಹೀರೋ ರೋಲ್ ಗಳೂ ಮಾಡಕ್ಕಾಗಲ್ಲ. ಆತರ ಪಾತ್ರಗಳು ಬರ್ತಾ ಇರ್ಲಿಲ್ಲ. ಇನ್ನು ಯಾವುದೋ ಒಂದು ಪಾತ್ರ ಮಾಡಕ್ಕೆ ಹೋಗಿ, ಈ ಒಂದು ನನ್ನ 68 ಸಿನಿಮಾಗಳಲ್ಲಿ ಇರುವಂತಹ, 20 ಒಳ್ಳೆ ಪಾತ್ರಗಳು ಜನಗಳ ಮನಸ್ಸಲ್ಲಿ ಏನು ಮೂಡಿದ್ಯೋ? ನನ್ನದು ಹೈ ಏನಿತ್ತು, ‘ರಾಮಾಚಾರಿ’25 ವೀಕ್ಸ್ ಕನ್ನಡದಲ್ಲಿ. ತೆಲುಗು ವಿಶ್ವನಾಥ್ ಅವ್ರ ‘ಸ್ವಾತಿ ಕಿರಣಂ’ ಅದನ್ನ ಹಾಳು ಮಾಡ್ಕೊಳಕ್ಕೆ ನನಗೆ ಇಷ್ಟ ಇರ್ಲಿಲ್ಲ.


‘ಸ್ವಾತಿ ಕಿರಣಂ’ ನನಗೆ ಮಾಡಲ್ಲಾ, ಅನ್ನಕ್ಕೆ ಮನಸ್ಸೇ ಬರ್ಲಿಲ್ಲ. ಅದು ಅಲ್ಲಿ ಸೂಪರ್ ಹಿಟ್ ಆಗೋಯ್ತು. ಒಳ್ಳೆ ಅವಾರ್ಡ್ ಗಳೂ ಬಂತು. ತಕ್ಷಣ ನಿಲ್ಲಿಸಿ ಬಿಟ್ಟೆ. ಯಾಕಂದ್ರೆ “ಒಳ್ಳೆ ಹೆಸರಿದೆ, ಎಜ್ಯುಕೇಷನ್ ಮುಗ್ಸೋಣ, ಫಿಸಿಕಲ್ಲಿ ಬೆಳಿಯೋಣ. ಮೈಂಡಿಗೂ ಒಂದು ಬ್ರೇಕ್ ಸಿಗುತ್ತೆ. ಮೂರು ನಾಲ್ಕು ವರ್ಷ ಆದ್ಮೇಲೆ ವಾಪಸ್ ಬಂದು ನೋಡೊಣ. ಆಪರ್ಚ್ಯುನಿಟೀಸ್ ಹೇಗಿದೇಂತ.”


ಇದು ನನ್ನ ಒಬ್ಬನದ್ದೇ ಅಲ್ಲ. ನನ್ನ ಒಂದು ವರ್ಷ ಸೀನಿಯರ್ ಅಪ್ಪು, ಮಾಸ್ಟರ್ ಆನಂದ್, ವಿಜಯ ರಾಘವೇಂದ್ರ, ಸುನೀಲ್ ಎಲ್ಲರಿಗೂ ಒಂದು ಗ್ಯಾಪ್ ಬೇಕಾಗುತ್ತೆ. ಇಲ್ಲಾಂದ್ರೆ ಜನಗಳಿಗೂ ಅದನ್ನ ಡೈಜಿಸ್ಟ್ ಮಾಡ್ಕೊಳೋದು ಕಷ್ಟನೇ. ನಮಗೂ ಆ ಹೊಸ ರೂಪದಲ್ಲಿ ಬರೋದು ಕಷ್ಟ. ಇಫ್ ಯು ಸೀ ಅಪ್ಪು ಅವ್ರದ್ದು ‘ಬೆಟ್ಟದ ಹೂವುʼ ಡಾ ರಾಜ್ ಕುಮಾರ್ ಜೊತೆ ‘ಎರಡು ನಕ್ಷತ್ರಗಳುʼ ʼಭಕ್ತ ಪ್ರಹ್ಲಾದʼ ನೋಡಿದ್ರೆ ಎಕ್ಸಟ್ರಾರ್ಡಿನರಿ ಪರ್ಫಾರ್ಮೆನ್ಸ್. ಬಟ್ ಅದನ್ನ ಹಾಗೆ ಇಟ್ಕೊಂಡು ಹೋದ್ರೆ ನಮ್ಮ ಮೈಂಡಲ್ಲಿ ಅದೇ ಇರುತ್ತೆ. ಗ್ಯಾಪ್ ಕೊಟ್ಟು, ಅವ್ರು ಹೀರೋ ಲುಕ್ ಅಲ್ಲಿ ಬಂದಾಗ, “ಓ ಆಕ್ಟಿಂಗ್ ಎಬಿಲಿಟಿ ನಮಗೆ ಗೊತ್ತು. ಬಟ್ ದಿಸ್ ಈಸ್ ಅ ನಿವ್ ಅಪ್ಪು”ಅಂತ. ನಾನು ಅವರಿಗೆ ಹೋಲಿಕೆ ಮಾಡ್ತಾ ಇಲ್ಲ. ಬಟ್ ಐಡಿಯಾ ವಾಸ್ ದಟ್.


ಗ್ಲಾಮರ್‌ ವರ್ಸಸ್‌ ನಾರ್ಮಲ್‌ ಲೈಫ್

ಬಟ್ ನನಗೆ ನಾರ್ಮಲ್ ಲೈಫ್ ಎಷ್ಟು ಇಷ್ಟ ಆಗ್ಹೊಯ್ತ ಅಂದ್ರೆ, ಸುಮಾರು ಜನಗಳಿಗೆ ಅನ್ಸುತ್ತೆ ಗ್ಲಾಮರ್ ಲೈಫ್ ತುಂಬಾ ಚೆನ್ನಾಗಿದೆ ಅಂತ. ಬಟ್ ಸಿಕ್ಕಾಪಟ್ಟೆ ಹೆಕ್ಟಿಕ್ ಅದು. ಸಿನಿಮಾದಲ್ಲಿರೋರಿಗೆ ಮಾತ್ರ ಅರ್ಥ ಆಗುತ್ತೆ ಅದು. ಶನಿವಾರ ಭಾನುವಾರ ಇಲ್ಲ, ಯಾವುದೇ ಹಬ್ಬಗಳಿಲ್ಲ, ಬೆಳಗ್ಗೆ, ಮಧ್ಯಾನ, ಸಂಜೆ ಎಲ್ಲಾ ಒಂದೇ. ಈ ನಾರ್ಮಲ್ ಲೈಫು ಎಸ್ಪೆಷಲ್ಲಿ ನನ್ನ ಎಜ್ಯುಕೇಶನ್ ಮುಗಿದ್ಮೇಲೆ, ಐ.ಡಿ.ಜಿ.ಸಿ. ಯಲ್ಲಿ ಕೆಲಸ ಸಿಗ್ತು. 9 ಗಂಟೆಗೆ ಕೆಲಸಕ್ಕೆ ಹೋದ್ರೆ, 6 ಗಂಟೆಗೆ ಮನೆಗೆ ಹೋಗಬಹುದ? ಅದೇ ಒಂದು ಆಶ್ಚರ್ಯ ನನಗೆ. ಒಂಥರಾ ಡಿಫೈನ್ಡ್ ಕೆಲ್ಸ, ಓಪನ್ ಎಂಡೆಡ್ ಇಲ್ಲ. ರೋಡಲ್ಲಿ ಎಲ್ಲೋ ಒಂದು ಮೂಲೆಗೆ ಹೋಗಿ ಮಸಾಲಪುರಿ ತಿನ್ಬಹುದು. ನನ್ನ ಫ್ರೆಂಡ್ಸ್ ಜೊತೆ ಎಲ್ಲೋ ಒಂದ್ಕಡೆ ಹೋಗ್ಬಹುದು. ಸೋ ನನಗೆ ನಿಜವಾದ ಚೈಲ್ಡ್ ವುಡ್ 17 ರಿಂದ 20 ನೇ ವಯಸ್ಸಲ್ಲಿ ಸಿಕ್ತು ಅನ್ಸುತ್ತೆ. ನನಗೆ ಸುಮಾರು ವಿಷಯಗಳೇ ಗೊತ್ತಿರ್ಲಿಲ್ಲ, ಸುಮಾರು ಜನಕ್ಕೆ ಇದು ಆಶ್ಚರ್ಯ ಅನಿಸಬಹುದು ಯಾರದಾದ್ರೂ ಮನೆಗೆ ಹೋದ್ರೆ ನನಗೆ ಹೇಗೆ ನಡ್ಕೊಬೇಕೂಂತನೇ ಗೊತ್ತಿರ್ಲಿಲ್ಲ. ಇಲ್ಲಿ ಏನು ಮಾಡ್ಬೇಕೂಂತ ಯೋಚಿಸ್ತಿದ್ದೆ. ನಾರ್ಮಲ್ ಆಗಿ ಏನೋ ಮಾತಾಡ್ತಿರ್ತಾರೆ, ನನಗೆ ಅದು ಮಾತಾಡಕ್ಕೆ ಆಗ್ತಿರ್ಲಿಲ್ಲ. “ಚಿಕ್ಕ ಹುಡುಗ ಇದ್ದಾಗ ಹೋಗಿದ್ರೆ ತಾನೆ” ಸೋ ನನಗೆ ಪುನರ್ಜೀವನದ ಹಾಗೆ. ಇದೊಂತರಾ ಡಿಫ್ರೆಂಟ್ ವರ್ಲ್ಡ್ ಅಂತ ಎಂಜಾಯ್ ಮಾಡ್ದೆ.ಮುಂದುವರೆಯುವುದು…

11 views