“ಕ್ರಿಯೇಟಿವಿಟಿ ಅಂದ್ರೆ ಶಂಕ್ರಣ್ಣ”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 13

(ಸ್ವಾಮಿ ಆಂಡ್ ಫ್ರೆಂಡ್ಸ್ ಸ್ವಾಮಿ, ಅಥವಾ ಮಾಸ್ಟರ್ ಮಂಜುನಾಥ್ ಅವರ ನೆನಪುಗಳು)
ಫಸ್ಟ್‌ ಟೈಮ್‌ ಆನ್‌ಲೈನ್‌ ಅಲ್ಲಿ ರಿಸಲ್ಟ್ಸ್ ಹಾಕಬಹುದು ಅಂತ ಕಂಡುಹಿಡಿದಿದ್ದು ನಾನು

ತುಂಬಾ ಜನರಿಗೆ ಗೊತ್ತಿಲ್ದೇ ಇರ್ಬಹುದು ಐ.ಟಿ. ಸೆಕ್ಟರಲ್ಲಿ, ಫಸ್ಟ್ ಟೈಮ್ ಎವರ್ 1999 ನಲ್ಲಿ ಇಡೀ ಭಾರತ ದೇಶದಲ್ಲೇ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ, ಡಿಪ್ಲೋಮೋ ರಿಸಲ್ಟ್ ಗಳನ್ನ, ನಾನೇ ಫಸ್ಟ್ ಟೈಮ್ ಇಂಟರ್ನೆಟ್ ನಲ್ಲಿ ಹಾಕಿದ್ದು. ಆನ್ಲೈನ್ ಬೆಂಗಳೂರು ಡಾಟ್ ಕಾಮ್ ಅಂತ ವೆಬ್ ಸೈಟಲ್ಲಿ ಕೆಲ್ಸ ಮಾಡ್ತಿದ್ದೆ, ಏನಾದ್ರೂ ಮಾಡಿ ನಮ್ಮ ರಿಸಲ್ಟ್ ಜಾಸ್ತಿ ಮಾಡ್ಬೇಕಾಗಿತ್ತು. ಅಡ್ವಟೈಸ್ಮಿಂಟ್ ಮಾಡ್ಸೊದಕ್ಕೆ ಬಡ್ಜೆಟ್ ಇಲ್ಲ. ಅವಾಗ ಹೊಳೀತು, ರಿಸಲ್ಟ್ ಹಾಕೋಣಾಂತ ಯಾಕಂದ್ರೆ ನಾವು ಎಷ್ಟೋ ಕಷ್ಟ ಪಟ್ಟಿದ್ದೀವಿ ರಿಸಲ್ಟ್ ನೋಡಕ್ಕೆ. ನಾವು ಕ್ಯೂ ನಿಂತು, ಸರಿಯಾಗಿ ಕಾಣಸ್ದೆ, ಯಾರೋ ನಮ್ಮ ಹೆಸರಿರೊದನ್ನ ಹರೆದು ಹಾಕಿರೋದು. ಆ ಮೇಲೆ ಸ್ಕೂಲ್ ಹತ್ರ ಓಡ್ಹೋಗಿ ನೋಡೊದು. ಇವೆಲ್ಲಾ ಆಗುತ್ತೆ. ಹಾಗಾಗಿ ಯೋಚ್ನೆ ಮಾಡ್ದೆ “ಯಾಕೆ ರಿಸಲ್ಟ್ ಆನ್ಲೈನಲ್ಲಿ ಹಾಕ್ಬಾರ್ದು?” ಅಂತ. ಅದನ್ನ ಸರ್ಕಾರದ ಜೊತೆ ಡಿಸ್ಕಸ್ ಮಾಡಿ, ಆಲ್ಮೋಸ್ಟ್ ಸೆವೆನ್ ಮಂಥ್ಸ್ ಆಯ್ತು ಅವ್ರನ್ನ ಕನ್ವಿನ್ಸ್ ಮಾಡೊದಕ್ಕೆ. “ಇಲ್ಲ ಹಾಕ್ಬೋದು ಏನೂ ತೊಂದರೆ ಇಲ್ಲ, ನಿಮ್ಮ ಡೇಟಾಗೆ ಏನೂ ತೊಂದರೆ ಮಾಡಲ್ಲ ನಾವು, ಅದನ್ನ ಕಾಪಿ ಮಾಡಿ ಹಾಕ್ತೀವಿ ಅಷ್ಟೆ. ಜನಗಳಿಗೆ ಹೆಲ್ಪ್ ಆಗುತ್ತೆ, ಮಕ್ಕಳಿಗೆ ಹೆಲ್ಪ್ ಆಗಿತ್ತೆ, ಅವರು ಎಲ್ಲಿದ್ರೂ ರಿಸಲ್ಟ್ ನೋಡ್ಬಹುದು. ಫಸ್ಟ್ ಟೈಮ್ ಹಾಕ್ಸಿದ್ದೆ. ಬಹಳ ಖಷಿಯಾಯ್ತು. ಯಾಕಂದ್ರೆ, ನನ್ನ ಒಂದು ಎಫರ್ಟಿಂದ ತುಂಬ ಜನಗಳಿಗೆ ಹೆಲ್ಪ್ ಆಯ್ತು ಅಂತ.


ಶಂಕರ್ನಾಗ್‌ ರವಿಚಂದ್ರನ್‌ ಅಂಬರೀಷ್‌ ವಿಷ್ಣುವರರ್ಧನ್‌ ಹೇಳಿಕೊಟ್ಟದ್ದನ್ನ ಫಾಲೋ ಮಾಡಿದ್ದೀನಿ

ನೆಕ್ಸ್ಟ್ ಭೂಮಿ ಪ್ರಾಜೆಕ್ಟ್, ಅದರ ಅಡಿಪಾಯ ಹಾಕಿರೋದು ನನ್ನ ಕಂಪೆನಿ. ನನ್ನ ಟೀಮ್. ನಾವು ಬಿ.ಬಿ.ಎಮ್.ಪಿ. ಎಸ್.ಎಮ್.ಕೃಷ್ಣ ಅವ್ರ ಬಿ.ಎ.ಟಿ.ಎಫ್. ಟೀಮ್ ಜೊತೆ ಎಲ್ಲಾ ಕೆಲ್ಸ ಮಾಡಿ ಭೂಮಿಗೆ ಫಸ್ಟ್ ಡಿಜಿಟೈಸ್ ಲ್ಯಾಂಡ್ ರೆಕಾರ್ಡ್ಸ್ ಮಾಡಿದ್ದು, ನನ್ನ ಟೀಮ್. ಅದರ ಜೊತೆ ಭಾಗಿಯಾಗಿದ್ದೆ. ಅದರ ಜೊತೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ರೋಡ್ ರೆಕಾರ್ಡ್. ಕಣ್ಮುಂದೆ ಕಣ್ಣಾರೆ ಮಾಡೊದು ಏನಿದೆ, ಏನು ಇವತ್ತಿನವರೆಗೆ ಮಾಡಿಲ್ವೋ, ಯಾಕಂದ್ರೆ ಇವತ್ತಿಗೆ ಎಲ್ಲಾ ನ್ಯಾಷ್ನಲೈಸ್ ಆಗಿದೆ. ನಾವು ಕಟ್ಟುವಾಗ ಫಸ್ಟ್ ಟೈಮ್ ಆತರದೊಂದು ರೋಡ್. ಏನು ಅಡ್ಡ ಬರುವ ಹಾಗಿಲ್ಲ. ಫ್ರೀ ಲೆಫ್ಟ್ ಟರ್ನ್, ಫ್ರೀ ರೈಟ್ ಟರ್ನ್. ಅದನ್ನ ಯಾಕೆ ಮಾಡ್ಬಾರ್ದು? ಇಂತದನ್ನೆಲ್ಲಾ ಎಂಜಾಯ್ ಮಾಡ್ತಿದ್ದೀನಿ. ಶಂಕರ್ ನಾಗ್, ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್ ಅವ್ರೆಲ್ಲಾ ನನಗೆ ಹೇಳ್ಕೊಟ್ಟಿದ್ದು ಏನಂದ್ರೆ, “ಏನೇ ಮಾಡಿದ್ರೂ ಪ್ಯಾಷನೇಟಾಗಿ ಮಾಡೋದು” ಅದನ್ನ ನಾನು ಫಾಲೋ ಮಾಡ್ತಿದ್ದೀನಿ ಅಷ್ಟೆ.


ಇವಾಗ ನನ್ನ ಸೋ ಕಾಲ್ಡ್ ನಾರ್ಮಲ್ ಲೈಫಲ್ಲಿ, ಹೊಸ ಹೊಸ ಕೆಲಸಗಳನ್ನ ಮಾಡ್ತಾ ಇದ್ದೀನಿ. ಮೇ ಬೀ ಇದ್ರಲ್ಲಿ ಒಂದು ಸ್ಯಾಚ್ಯುರೇಶನ್ ಬರಬಹುದು. ಹದಿನೇಳು ವರ್ಷ ಆಯ್ತು ಇಲ್ಲಿ ಬಂದು. ಸೋ ಪ್ರೊಫೆಷನಲ್ ವರ್ಕ್ ಗೆ ಇಪ್ಪತ್ತು ವರ್ಷ ಆಗ್ತಾ ಬಂತು. ಇನ್ನೂ ಏನಾದ್ರು ಆದ್ರೆ ಮತ್ತೆ ಸಿನಿಮಾಗೆ ಹೋಗಬಹುದು. ರೈತ ಆಗ್ಬಹುದು. ಯಾಕಂದ್ರೆ ಕೋವಿಡ್ ಎಲ್ಲಾ ಬಂದ್ಬಿಟ್ಟು ಇವತ್ತು ಎಲ್ಲರಿಗೂ ಅರ್ಥ ಆಗಿದೆ, “ಊಟ ಎಷ್ಟು ಇಂಪಾರ್ಟೆಂಟ್” ಅಂತ. ಅದನ್ನ ಮಾಡ್ತೀನೋ ಗೊತ್ತಿಲ್ಲ. ಏನಾದ್ರೊಂದು ಮಾಡ್ಬೇಕು, ಬಟ್ ಎಂಜಾಯ್ ಮಾಡ್ಬೇಕು ಅಷ್ಟೆ.


ಬಟ್ ಸಿನಿಮಾ ನೋಡೊದು ಬಿಟ್ಟಿಲ್ಲ. ಸಿನಮಾ ಎಸೋಸಿಯೇಷನ್ ಜೊತೆ ಆಕ್ಟೀವ್ ಆಗೇ ಇದ್ದೀನಿ. ನನ್ನ ಸ್ನೇಹಿತರು, ನನ್ನ ನಿಜ ಕುಟುಂಬ, ನನ್ನ ಸಿನಿಮಾ ಕುಟುಂಬ ಹಾಗೇ ಇದೆ. ಆ ಟಚ್ಚಲ್ಲಿರೋದ್ರಿಂದ ನನಗೆ ತುಂಬಾ ದೂರದಲ್ಲಿದ್ದೀನಿ, ಅಂತೇನೂ ಅನ್ನಿಸ್ತಾ ಇಲ್ಲ. ಸೋ ಸಿಂಪಲ್ಲಾಗಿ ಹೇಳೊದಾದ್ರೆ ಗ್ಯಾಪ್ ಕೊಡೊದಕ್ಕಾಗಿ ಬಿಟ್ಟೋಗಿರೋದು. ಇನ್ನು ವಾಪಸ್ ಯಾಕೆ ಬರ್ಲಿಲ್ಲಾಂತಂದ್ರೆ, ಅದಕ್ಕೆ ನನ್ಹತ್ರ ನಿಜವಾಗ್ಲೂ ಆನ್ಸರ್ ಇಲ್ಲ. ಲೈಫನ್ನ ಎಂಜಾಯ್ ಮಾಡ್ತಿದ್ದೀನಿ ಅಷ್ಟೆ. ನೋ ರಿಗ್ರೆಟ್ಸ್!


ಪರಮ್: ಶಂಕರ್ ಅವ್ರ ಲಾಸ್ಟ್ ಡೇ, ಆಕ್ಸಿಡೆಂಟ್…? ಬಗ್ಗೆ ಹೇಳಿ.


ಮಂಜುನಾಥ್: ಸರ್ ಅನ್ಫಾರ್ಚ್ಯುನೇಟ್ಲಿ ಅದೇ ಟೈಮಲ್ಲಿ, ನಾನು ನಾಗಾಭರಣ ಸರ್ ಜೊತೆ ಒಂದು ಟೀಮ್ ‘ಸ್ಟೋನ್ ಬಾಯ್’ಶೂಟಿಂಗಿಗೆ ಮೌರೀಷಿಯಸ್ ನಲ್ಲಿದ್ವಿ. ಅದು ಹನ್ನೆರಡು ಸಾವಿರ ಕಿಲೋ ಮೀಟರ್ದೂರದಲ್ಲಿದೆ. ಆ ಕಾಲದಲ್ಲಿ ಎವ್ರಿ ಡೇ ಫ್ಲೈಟ್ಸ್ ಏನೂ ಇರ್ತಿರ್ಲಿಲ್ಲ. ವಾರಕ್ಕೊಂದೇ ಫ್ಲೈಟ್ ಇದ್ದದ್ದು. ಇಲ್ಲಾಂದ್ರೆ ಶಿಪ್ ಅಲ್ಲಿ ಬರ್ಬೇಕು. ಅಂದ್ರೆ ಮೂರೂ ವರೆ ತಿಂಗ್ಳಾಗೋದು. ನಮಗೆ ವಿಷಯ ಗೊತ್ತಾದಾಗ ಫ್ಲೈಟ್ಸ್ ಇರ್ಲಿಲ್ಲ. ಬರಕ್ಕೆ ಯಾವ ದಾರಿನೂ ಇರ್ಲಿಲ್ಲ. ನೆಕ್ಸ್ಟ್ ಫ್ಲೈಟ್ ಬರೋದಕ್ಕೆ ಐದು ದಿನ ಆಯ್ತು. ನಾವು ಫೋನ್ ಮಾಡಿ ಕಾಂಟ್ಯಾಕ್ಟ್ ಮಾಡಿದ್ವಿ. ನೆಕ್ಸ್ಟ್ ಡೇ ಇವ್ನಿಂಗ್ ಆರುಂಧತಿ ಅವ್ರಿಂದ ಮೆಸೇಜ್ ಬಂತು. “ನೀವು ಯಾವುದೇ ಕಾರಣಕ್ಕೂ ವಾಪಸ್ ಬರ್ಬೇಡಿ. ಶಂಕರ್ ಇದ್ದಿದ್ರೆ, ಅವ್ರಿಗೆ ಇಷ್ಟ ಆಗ್ತಿರ್ಲಿಲ್ಲ. ಕೋಪ ಬರ್ತಿತ್ತು. ಹೋದ ಕೆಲಸ ಮುಗಿಸಿ ಬನ್ನಿ” ಅಂದ್ರು. ಆ ದಿನ ಯಾರಿಗೂ ಮೈಂಡ್ ಇರ್ಲಿಲ್ಲ. ನಾವು ಐದು ದಿನ ಬಿಟ್ಟು ಹೋದ್ರುನೂ, ‘ಅರು’ ಆಂಟಿನ ನೋಡ್ಬೇಕು, ಕಾವ್ಯನ ನೋಡ್ಬೇಕು. ಆದ್ರೆ ಅವರು ಹೇಳ್ದಂಗೆ ಯಾವುದೇ ಕಾರಣಕ್ಕೂ ಕೆಲಸ ನಿಲ್ಬಾರ್ದು. ಅವರ ಅದೊಂದು ಫಿಲಾಸಫಿ ಇತ್ತು. ಹಾಗಾಗಿ ಕೆಲಸ ಮುಗಿಸ್ಕೊಂಡೇ ಬಂದ್ವಿ.


1991 ಅಲ್ಲೇ ಶಂಕರ್‌ ಯೋಚಿಸದ್ದ ಆ ಟಿಕ್ನಾಲಜಿ

ಬಟ್ ನನಗೆ ಬೇಜಾರು ಏನಂದ್ರೆ, “ನಾನು ಅವರನ್ನ ಕೊನೆದಾಗಿ ನೋಡಕ್ಕೆ ಆಗ್ಲಿಲ್ಲ” ಖುಷಿ ಏನಂದ್ರೆ, ನಾನು ಅವರನ್ನ ಆ ಸ್ಥಿತಿಯಲ್ಲಿ ನೋಡದೇ ಇದ್ದಿದ್ರಿಂದ “ಅವರು ಎಲ್ಲೋ ಇದ್ದಾರೆ, ನಾನು ಎಲ್ಲೋ ಇದ್ದೀನಿ” ಅಂತ ಅನ್ಸುತ್ತೆ. ಈಗಿನ ತರ ಫೋನ್ ಮಾಡೊದು, ಫೇಸ್ ಬುಕ್ನಲ್ಲಿ ಚಾಟ್ ಮಾಡೊದು ಏನೂ ಇರ್ತಿರ್ಲಿಲ್ಲ. ಅವಾಗ ಏನಾದ್ರು ಕೆಲ್ಸ ಇದ್ರೆ, ಲ್ಯಾಂಡ್ ಲೈನಲ್ಲಿ ಕಾಲ್ ಮಾಡಿ, ಹೋಗಿ ಮೀಟ್ ಮಾಡ್ತಿದ್ವಿ. ಮನೆಗೆ ಹೋಗ್ತಿದ್ವಿ, ಇಲ್ಲಾ ಕಲಾಕ್ಷೇತ್ರದಲ್ಲಿ ಸಿಗ್ತಾ ಇದ್ವಿ. ಆದ್ರೂ 24 ಹವರ್ ಕಾಂಟ್ಯಾಕ್ಟಲ್ಲಿ ಇರ್ತಾ ಇರ್ಲಿಲ್ಲ.


ಸೋ ಒಂದು ರೀತಿಯಲ್ಲಿ ಅವ್ರು ಹೇಳ್ಕೊಟ್ಟಂತಹ ವಿಚಾರಗಳು, ಮತ್ತೆ ಅವ್ರ ಜೊತೆ ಇದ್ದಂತಹ ನೆನಪುಗಳು ಏನಿದೆ, ಆ ನೆನಪುಗಳನ್ನ ನೆನಪಿಸಿಕೊಂಡು, ಆ ಯೋಚನೆಗಳನ್ನ ಬದುಕಿಸಿಕೊಂಡು ಬರ್ತಾ ಇದ್ದೀವಿ. ಅಟ್ ದ ಸೇಮ್ ಟೈಮ್, ಇದೆಲ್ಲ ಆಗ್ಹೋಗಿದೆ. ಪ್ರಾಕ್ಟಿಕಲ್ ಆಗಿ ಹೇಗೆ ತಗೊಂಡು ಮುಂದೆ ಹೋಗ್ಬೇಕು ಹೋಗ್ತಾ ಇದ್ದೀವಿ. ದೇರ್ ಈಸ್ ನೋ ರಿಗ್ರೇಟ್, ಅದ್ರಲ್ಲೂನು. ಏನೂ, ಚೇಂಜ್ ಮಾಡೋಕ್ಕಂತೂ ಆಗೊದಿಲ್ಲ. ಅಫ್ಕೋರ್ಸ್ ತುಂಬನೇ ಬೇಜಾರು ಆಗುತ್ತೆ. ಯಾಕಂದ್ರೆ ಅವ್ರು ಇದ್ದಿದ್ರೆ, ನಮ್ಮ ಇಂಡಸ್ಟ್ರೀ ಹೀಗಂತೂ ಇರ್ತಾ ಇರ್ಲಿಲ್ಲ. ಅಂದ್ರೆ ನಾನು ಇಂಡಸ್ಟ್ರೀನ ಕೆಟ್ಟದಾಗಿ ನೋಡ್ತಿದ್ದೀನಿಂತಲ್ಲ. ಇದಕ್ಕಿಂತ ತುಂಬಾನೆ, ಮುಂದೆ ತಗೊಂಡು ಹೋಗ್ತಿದ್ರು.


ನೀವು ನಂಬ್ತೀರೋ, ಬಿಡ್ತೀರೋ ಅವ್ರು 1991 ರಲ್ಲೇ ಲಂಡನ್ ಗೆ ಹೋಗಿ, ಡಿಜಿಟಲ್ ಸ್ಪೆಷಲ್ ಎಫೆಕ್ಟ್ ಸಾಫ್ಟವೇರನ್ನ ಅವ್ರ ಹತ್ರ ತಗೊಂಡು, ನಮ್ಮ ‘ಸಂಕೇತ್’ ಸ್ಟುಡಿಯೋದಲ್ಲಿ ಶುರು ಮಾಡ್ಬೇಕೂಂತ ಯೋಚ್ನೆ ಮಾಡ್ತಿದ್ರು. ಕೊನೆಗೆ ಡಿಜಿಟಲ್ ಎಫೆಕ್ಟ್ಸ್ ನಮ್ಮಲ್ಲಿಗೆ ಬಂದದ್ದು 2007 ರಲ್ಲಿ. ‘ಗೋಸ್ಟ್’ ಅಂತ ಒಂದು ಸಿನಿಮಾ ಬಂದಿತ್ತು ಅದರಲ್ಲಿ ಒಂದಷ್ಟು ಸ್ಪೆಷಲ್ ಎಫೆಕ್ಟ್ ಮಾಡಿದ್ರು. ಅದು ಯಾರು ಮಾಡಿದ್ದು ಅಂತ ತಿಳ್ಕೊಂಡು, ಸ್ವಂತ ಖರ್ಚಲ್ಲಿ ಲಂಡನ್ ಗೆ ಹೋಗಿ ಅವ್ರ ಹತ್ರ ಮಾತಾಡಿ, “ಅದನ್ನ ನಮಗೆ ಶೇರ್ ಮಾಡಿ” ಅಂತ ಕೇಳ್ಕೊಂಡ್ರು. ಯಾಕಂದ್ರೆ ಅವರಿಗೆ ಅದನ್ನ ‘ನಾಗಮಂಡಲ’ ಸಿನಿಮಾದಲ್ಲಿ ಯೂಸ್ ಮಾಡ್ಬೇಕೂಂತ ತುಂಬಾ ಆಸೆ ಇತ್ತು. ಹಾಗೇ ಒಬ್ಬ ವ್ಯಕ್ತಿ ಹಾವು ಆಗೋದು, ಹಾವು ವ್ಯಕ್ತಿ ಆಗೋದು, ಅದು ತುಂಬಾ ಆಸೆ ಇತ್ತು. ಆ ತರ ಮುಂದಾಲೋಚನೆ ಇತ್ತು ಅವ್ರಿಗೆ. 1991 ರಲ್ಲಿ ಆ ತರ ಟೆಕ್ನಾಲಜಿ ಬಂದಿದ್ದಿದ್ರೆ, ಇಷ್ಟು ಹೊತ್ತಿಗೆ, ಯಾವುದೋ ಒಂದು ಮಟ್ಟದಲ್ಲಿರ್ತಾ ಇದ್ವಿ. ಎನಿವೇ ಈಗ್ಲೂ ಏನೂ ಕಡಿಮೆ ಇಲ್ಲ. ವಲ್ಡಲ್ಲಿರೋ ಎಲ್ಲಾ ಸ್ಪೆಷಲ್ ಎಫೆಕ್ಟ್ ಗಳೂ ಶೇಕಡಾ 70 ರಿಂದ 80 ಪರ್ಸೆಂಟ್ ಇಂಡಿಯಾದಿಂದನೇ ಹೋಗ್ತಿರೋದು.
ಸಂದರ್ಶನ-ಕೆ.ಎಸ್ ಪರಮೇಶ್ವರ.


(ಸ್ವಾಮಿ ಆಂಡ್ ಫ್ರಂಡ್ಸ್ ನ ಸ್ವಾಮಿ, ಅಥವಾ ಮಾಸ್ಟರ್ ಮಂಜುನಾಥ್ ಅವರ ನೆನಪುಗಳು, ಇಲ್ಲಿಗೆ ಮುಕ್ತಾಯವಾಯಿತು. ಮಾಲ್ಗುಡಿ ಡೇಸ್ ಮೇಕಿಂಗ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು ಮುಂದಿನ ಸಂಚಿಕೆಯಲ್ಲಿ)

10 views