ಕ್ರಿಯೇಟಿವಿಟಿ ಹುಟ್ಟೋದು ಯಾವಾಗ ಗೊತ್ತಾ?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 64

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಸೋ ನಾನು ಮ್ಯೂಸಿಕ್, ಡಾನ್ಸ್ ಎಲ್ಲವನ್ನೂ ಪ್ರಾಕ್ಟೀಸ್ ಮಾಡ್ತೀನಿ. ಇದನ್ನೆಲ್ಲ ಎಕ್ಸಪ್ರೆಸ್ ಮಾಡೊದು ಅಂದ್ರೆ ಸಿನಿಮಾನೇ. ಆ ಸಿನಿಮಾದಲ್ಲಿ ಹೇಗೆ ಬಳಸ್ಕೊಬೇಕು? ಸೋ ಯು ಹ್ಯಾವ್ ಟು ಅಂಡರ್ಸ್ಟಾಂಡ್ ದ ಹೋಲ್ ಮೀಡಿಯಾ. ಅದಾದ್ಮೇಲೆ ಸುಮಾರು ಸಿನಿಮಾ ನಾನೇ ಮಾಡ್ದೆ. ಆಸ್ ಅನ್ ಆಕ್ಟರ್. ಇಷ್ಟೆಲ್ಲಾ ಮಾಡಿದ್ವಿ ಅಂದ್ರೆ ವಿ ಆಲ್ ಹೆಲ್ಪಿಂಗ್ ಈಚ್ ಅದರ್. ರಾಮು ಆಲ್ಸೋ ಗೈಡಡ್ ಮಿ, “ನೀನು ಇಷ್ಟೆಲ್ಲಾ ಮಾಡೊದು ಬೇಕಾಗಿಲ್ಲ ಮಾರಾಯ, ನಾನು 45 ಅಥವಾ 70 ಲೆನ್ಸ್ ಹಾಕ್ತಿದ್ರೆ, ನೀನು ಯಾಕೆ ಅಲ್ಲೆಲ್ಲಾ ಒದ್ದಾಡ್ತಾ ಇದ್ದೀಯ? ಫ್ರೇಮ್ ಗೆ ಎಷ್ಟು ಕಾಣುತ್ತೆ ಅಷ್ಟು ಮಾಡಿದ್ರೆ ಸಾಕು. ಡು ವಾಟ್ ಈಸ್ ನೆಸಸರಿ” ಅಂತ. ನನಗೆ ರಾಮು ಯಾವಾಗ್ಲೂ ರೇಗಿಸ್ತಾ ಇದ್ರು, ನನಗೆ ಬಹಳ ಸಿಟ್ಟು ಬರೋದು, ಎಲ್ಲಾ “ಮಾಡು, ಮಾಡು”ಅಂತ ಹೇಳಿ, ಮಾಡ್ಸಿ ಆಮೇಲೆ “ಸ್ವಾರಿ ಜಾನ್ ಐ ಕಾಂಟ್ ಇನಕ್ಲೂಡ್ ಆಲ್ ದಿಸ್ ಇನ್ ದ ಫ್ರೇಮ್”ಅಂತ ಹೇಳ್ಬಿಡೋದು. “ಮೊದ್ಲೇ ಹೇಳ್ಬಾರ್ದಾ ರಾಮು? ನನಗೆ ಯಾಕೆ ಇಷ್ಟು ಹಿಂಸೆ ಕೊಟ್ಬಿಟ್ಟೆ”ಅಂತಿದ್ದೆ, ಸೋ ಈ ರೀತಿ.


ಆಮೇಲೆ ‘ಕ್ಯಾಟ್ ವಿದಿನ್’ಅಂತ ಒಂದು ಎಕ್ಸಪೆರಿಮೆಂಟ್, ಅದ್ರಲ್ಲಿ ನೀವು ನೋಡಿರ್ಬಹುದು, ಸಿ.ಆರ್.ಸಿಂಹ ಆಕ್ಟರ್. ಅದೊಂದು ಬಾಲ್ ಜಂಪಾಗುತ್ತೆ ನೋಡಿ, ಅದ್ರಲ್ಲಿ ಬಾಲ್ ಕೆಳಗೆ ಬಿದ್ರೆ ಜಂಪ್ ಆಗ್ಬೇಕು. ಆಗ ನಮಗೆ ಸ್ಪೆಷಲ್ ಅಫೆಕ್ಟ್ಸ್ ಏನೂ ಇಲ್ವಲ್ಲ. ಎಲ್ಲಾ ನಾವೇ ಮಾಡ್ಬೇಕು. ಬೆಕ್ಕು ಒಳಗೆ ಹೋಗಿರುತ್ತೆ, ಭೂತ ಬಂದು ಜಂಪಾಗ್ತಾ ಇರುತ್ತೆ. ಸೋ ಹೇಗೆ ಕ್ರಿಯೇಟ್ ಮಾಡ್ಲೀ ಅಂತ ಥಿಂಕ್ ಮಾಡ್ತಾ ಇದ್ದೆ, ಸಿಂಪಲ್ ಐಡಿಯಾ ಹೊಳೀತು. ಒಂದು ಬಾಸ್ಕೆಟ್ ಬಾಲ್ ಬ್ಲಾಡೆರ್ ಮಾತ್ರ ತಗೊಂಡೆ, ಎರಡು ಮಡಿಕೆ ಗಳು ತಗೊಂಡು ಒಂದನ್ನ ಅರ್ಧ ಕಟ್ ಮಾಡಿ, ಬಾಸ್ಕೆಟ್ ಬಾಲ್ ಗೆ ಏರ್ ಹೊಡ್ದು ಹಂಗೇ ಪೇಂಟ್ ಮಾಡಿದ್ದೀನಿ. ಆಗ ಬಾಸ್ಕೆಟ್ ಬಾಲ್ ತರನೇ ಜಂಪ್ ಆಗುತ್ತೆ ಅದು. ಬಹಳ ಇಂಟ್ರಸ್ಟಿಂಗ್ ಕಾನ್ಸೆಪ್ಟ್. ನನಗೆ ಪರ್ಸನಲ್ ಆಗಿ, ಒಬ್ಬ ಆರ್ಟ್ ಡೈರೆಕ್ಟರ್ ಆಗಿ ಕ್ರಿಯೇಟಿವಿಟಿ ಹೇಗೆ ಬರುತ್ತೆ? ಅಂದ್ರೆ, ನನ್ನ ಮೇಲೆ ಪ್ರಷರ್ ಇದ್ದಾಗ ಮಾತ್ರ.ಮುಂದುವರೆಯುವುದು…

23 views