ಕೆಳಗೆ ಬಿದ್ದ ಕರ್ಚೀಫ್‌ ಎತ್ತುವಷ್ಟರಲ್ಲಿ ನನ್ನ ಪಾತ್ರ ಮುಗಿದುಬಿಡುತ್ತಿತ್ತು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 13ಅಣ್ಣಾವ್ರ ಸಿನಿಮಾಗಳಲ್ಲಿ ಮಾಡಿದ ನಂತರ ನನಗೆ ಅವಕಾಶಗಳು ಸಿಗಲು ಆರಂಭವಾಯಿತು. ದಿನಕ್ಕೆ ನಾಲ್ಕು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಇದೆ. ಎಲ್ಲದ್ದಕ್ಕೂ ನನ್ನ ಸ್ವಂತ ಉಡುಗೆಯನ್ನೇ ಹಾಕಿಕೊಳ್ಳುತ್ತಿದ್ದೆ. ರಾಜ್‌ಕುಮಾರ್ ಅವರ ಸಿನಿಮಾದಲ್ಲಿ ನಟಿಸಿದ ಮೇಲೆ ಸೈಕಲ್‌ನಲ್ಲಿ ಹೋಗುತ್ತೀಯಾ? ಅದನ್ನು ಮಾರಿಬಿಡು ಎಂದು ನನ್ನ ಗೆಳೆಯರು ಬೇರೆಯವರಿಗೆ ಕೊಡಿಸಿಬಿಟ್ರು. ನಂತರದಲ್ಲಿ ಸೈಕಲ್‌ ಕೂಡ ಇಲ್ಲದೇ ಬಸ್ಸಲ್ಲಿ ನಿಂತು ಕೊಂಡು ಹೋಗುವ ಪರಿಸ್ಥಿತಿ ಬಂತು. ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರೂ, ಯಾರು ನನ್ನನ್ನು ಗುರುತು ಹಿಡಿಯುತ್ತಿರಲಿಲ್ಲ. ಯಾಕಂದ್ರೆ ಕೆಳಗೆ ಬಿದ್ದ ಕರ್ಚೀಫನ್ನು ಬಗ್ಗಿ ಎತ್ತುವಷ್ಟರಲ್ಲಿ ನನ್ನ ಪಾತ್ರ ಮುಗಿದುಬಿಡುತ್ತಿತ್ತು. ಸಿನಿಮಾ ಹುಚ್ಚು ಎಂದು ನಾನು ನಟಿಸುತ್ತಿದ್ದೆ.ಮುಂದುವರೆಯುವುದು...

17 views