ಕೇಳದೆ ಸಹಾಯ ಮಾಡುವ ಗುಣ ಶಂಕರ್ ಗೆ ಇತ್ತು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 78

( ಶಂಕರ್‌ನಾಗ್‌ ಕುರಿತಂತೆ ನಟ ಅವಿನಾಶ ಅವರ ನೆನಪುಗಳು)ನಮ್ಮ ಸ್ಪಂದನದಲ್ಲಿ ಒಬ್ಬ ‘ರಂಗ’ ಅಂತಹುಡುಗ ಇದ್ದ. ಅವ್ನು ನಾರ್ಥ್ ಕರ್ನಾಟಕದಿಂದ ಬಂದಿದ್ದ, ಅವ್ನು ತುಂಬಾ ತೊಂದರೆಯಲ್ಲಿದ್ದ. ಬಟ್ ನಾಟಕ ಅಂದ್ರೆ ತುಂಬಾ ಹುಚ್ಚು ಇತ್ತು ಅವ್ನಿಗೆ. ಪಾಪ ದಿನಾ ರಿಹರ್ಸಲ್ ಗೆ ನಡ್ಕೊಂಡು ಬರವವ್ನು, ನಾವೆಲ್ಲಾ ಜೊತೆಯಲ್ಲೇ ಇದ್ವಿ, ನಮಿಗೆ ಯಾರಿಗೂ ತಲೆಗೇ ಹೊಳ್ದಿರ್ಲಿಲ್ಲ. ಬಟ್ ಶಂಕರ್ ನಾಗ್ ಮೂರುದಿನ ಆದ್ಮೇಲೆ “ನೀನು ಹೇಗೆ ಬರ್ತಿಯೋ ದಿನಾ ರಿಹರ್ಸಲ್ಗೆ?” ಅಂತ ಕೇಳಿದ್ರು. “ಅಣ್ಣ ನಡ್ಕೊಂಡು ಬರ್ತೀನಣ್ಣ ನಾನು” ಅಂದ “ಯಾಕೆ ಬಸ್ಸಲ್ಲಿ ಬರಕ್ಕಾಗಲ್ವಾ?” ಅಂತ ಕೇಳಿದ್ರು. “ ದುಡ್ಡು ಇದ್ದಾಗ ಬಸ್ಸಲ್ಲೇ ಬರ್ತೀನಿ, ಇಲ್ಲದಾಗ ನಡ್ಕೊಂಡೇ ಬರ್ತೀನಿ” ಅಂತಹೇಳ್ದ. “ಹೌದಾ ಸರಿ” ಅಂದ್ರು. ಎರಡನೇ ದಿನ ಅವ್ನು ಬರ್ತಿರ್ಬೇಕಾದ್ರೆ ಅವ್ನಿಗೆ ಒಂದು ಹೊಸ ಸೈಕಲ್ ತಂದಿಟ್ಬಿಟ್ಟಿದ್ರು ಅಲ್ಲಿ.ಮುಂದುವರೆಯುವುದು…

10 views