“ಕಾಸಿಗೆ ಕೇರ್ ಮಾಡ್ತಿರ್ಲಿಲ್ಲ ಶಂಕರ್ ನಾಗ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 26

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)
ಪರಮ್: ಶಂಕರ್ ಗೆ ಹಣದ ಬಗ್ಗೆ ಯಾವ ನಿಲುವು ಇತ್ತು ಸರ್?


ರಮೇಶ್ ಭಟ್: ದುಡ್ಡಿಗೆ ವರಿ ಮಾಡ್ದವನೇ ಅಲ್ಲ ಅವ್ನು. ಅವನ ನೇಚರ್ ಹೇಗೆ ಅಂತ, ನನ್ನದು ಒಂದು ಸಣ್ಣ ಉದಾಹರಣೆ. ಈಗ ಒಂದು ಮನೆ ಶೂಟ್ ಮಾಡ್ತಾ ಇದ್ದವಿ. “ಒಂದು ದೀಪಾವಳಿ ಸೀನ್ ಮಾಡ್ಬಿಡೋಣ ಅದಿಕ್ಕೂ ಮುಂಚೆ” ಅಂತ ಯಾರೋ ಹೇಳಿದ್ರು. ತಕ್ಷಣ “ಹೋ ಮಾಡೋಣ ಚೆನ್ನಾಗಿರುತ್ತೆ” ಅಂತ. ಪಟಾಕಿ ಎಲ್ಲಿಂದ ತರೋದು? ಇವಾಗ ಬೇಕು ಅಂತಾರೆ! ಇವಾಗ ಐದು ಗಂಟೆ, ಕತ್ತಲಾದ ತಕ್ಷಣ ದೀಪಾವಳಿ. “ಪಟಾಕಿ ಎಲ್ಲಿಂದ ತರ್ತೀರ? ಜಗ್ಗ “ಇಲ್ಲಿ ಯಾರಾದ್ರೂ ಪಟಾಕಿ ಮಾಡೋರು ಇರ್ತಾರೆ, ಹೋಗಿ ಒಂದು ಹನ್ನೆರಡು ಪಾಟ್, ಹನ್ನೆರಡು ಸಾಕೇನೋ ರಮೇಶ? ಟುಸ್ ಆಗ್ಬಿಟ್ರೆ? ಒಂದು ಇಪ್ಪತ್ತು ಪಾಟ್ ತೆಗೊಂಡ್ಬನ್ನಿ, ಮತ್ತೆ ಕಡ್ಡಿ ಗಿಡ್ಡಿ ಏನು ಸಿಗುತ್ತೆ ಎಲ್ಲಾ ಎತ್ಕೊಂಡ್ಬನ್ನಿ” ಅಂದ್ರು. “ದುಡ್ಡು ಇಲ್ಲ” ಅಂದ್ರೆ, “ದುಡ್ಡು ಇಲ್ಲ, ಭದ್ರಿ ಬಂದಿಲ್ಲ. ನಿನ್ನ ಜೇಬಲ್ಲಿ ಎಷ್ಟಿದೆ, ಅವ್ನ ಜೇಬಲ್ಲಿ ಎಷ್ಟಿದೆ, ಲೈಟ್ ಬಾಯ್ ಜೇಬಲ್ಲಿ ಎಷ್ಟಿದೆ ಎಲ್ಲಾ ಕಲೆಕ್ಟ್ ಮಾಡಿ, ಆರು ಸಾವಿರ ಕಲೆಕ್ಟ್ ಮಾಡಿ ಕೊಟ್ಬಿಡ್ತಾನೆ”. ಇದು ಪ್ರೊಡ್ಯೂಸರ್ ಕೊಡ್ತಾರೋ? ಇಲ್ವೋ? ಯಾವುದೂ ಯೋಚನೆನೇ ಇಲ್ಲ. “ಯಾರ್ಯಾರ್ದು ಎಷ್ಟು? ಬರ್ದಿಟ್ಕೋ ಪುಟ್ಟಿ” ಅಂತ ಯಾವುದೋ ಹುಡುಗಿಗೆ ಹೇಳ್ತಾನೆ. ಅವ್ಳು “ರಮೇಶ್ ಭಟ್ 850 ರೂ, ಜಗ್ಗ 600ರೂ, ವೆಂಕಿ 430ರೂ, ಲೈಟ್ ಈರಣ್ಣ 2000ರೂ”. ಅವ್ನ ಜೇಬಲ್ಲಿ 2000ರೂ ಇರುತ್ತೆ. ಅದನ್ನೆಲ್ಲಾ ಕಲೆಕ್ಟ್ ಮಾಡಿ 6000 ಕೊಟ್ಟು ಕಳಿಸ್ಬಿಡ್ತಾನೆ.


ಅವ್ನು ತೀರ್ಥಳ್ಳಿಗೆ ಹೋಗಿ ಅಲ್ಲಿ ಪಟಾಕಿ ಮಾಡುವವ್ರು ಸಾಬ್ರು ಅಥವಾ ಪಟಾಣ್ ರು ಯಾರಿದ್ದಾರೆ? ಅಂತ ಹುಡುಕಿ ಅವ್ರ ಹತ್ರ ಪಟಾಕಿ ಮಾಡ್ಸಿ, ಓಲ್ಡ್ ಸ್ಟಾಕ್ ಏನಾದ್ರೂ ಇದ್ರೆ ಸ್ಪಾಟ್ಗೇ ತರ್ಸಿ, ಅಲ್ಲೇ ರಡಿ ಮಾಡ್ಸಿ, ಪಟಾಕಿ ಹೊಡ್ದು ಹಬ್ಬ ಮಾಡ್ಬಿಡ್ತಾರೆ. ಇದು ಶಂಕರ್ ಗೆ ಸಾಧ್ಯ. “ಕೆಲ್ಸ ಆಗ್ಬೇಕಷ್ಟೆ ದುಡ್ಡು ಆಮೇಲೆ ನೋಡೋಣ?” ಹಾಗೆ, ಆತರ ನೇಚರ್ ಅವ್ರದ್ದು. “ನನಗೆ ಇಷ್ಟು ಕೊಟ್ರೆ ಮಾಡ್ತೀನಿ. ಹಳೆ ಬಾಕಿ ಬಂದಿಲ್ಲ” ಯಾವುದೊಂದು ನಖರಾ ಚರಿತ್ರೆಯಲ್ಲಿ ಇರ್ಲೇ ಇಲ್ಲ. ಕೇಳಿದ್ದೀವಾ ಎಲ್ಲಾದ್ರೂ?ಮುಂದುವರೆಯುವುದು…

14 views