ಗುರುಕಿರಣ್‌ ಅವರ ಹಿನ್ನೆಲೆ!!! ಹುಟ್ಟುತ್ತಲೇ ಬಂಗಾರದ ಸ್ಪೂನ್

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 29ಗುರುಕಿರಣ್‌ ಕೂಡ ತುಂಬಾ ಒಳ್ಳೆಯ ಮನುಷ್ಯ. ಅವರು ಹುಟ್ಟುತ್ತಲೇ ಬಂಗಾರದ ಚಮಚ ಕಂಡವರು. ನನ್ನನ್ನು ಮಂಗಳೂರಿಗೆ ಶೋಗಳಿಗೆ ಕರೆದುಕೊಂಡು ಹೋಗುತ್ತಿದ್ರು. ಬಸ್‌ ಸ್ಟ್ಯಾಂಡ್‌ನಲ್ಲಿ ಕಾದು ನನ್ನನ್ನು ಕರೆದುಕೊಂಡು ಹೋಗುತ್ತಿದ್ರು. ಅವರದು ದೊಡ್ಡ, ದೊಡ್ಡ ಹೋಟೆಲ್‌ಗಳಿವೆ. ಮನೆಯ ಡೈನಿಂಗ್‌ ಟೇಬಲ್‌ ಮೇಲೆ 16 ಜನ ಕೂರಬಹುದು. ಕಾಲೇಜು ದಿನಗಳಿಂದಲೂ ರಾಜ ಇದ್ದ ಹಾಗೆ ಅವರು. ಅವರು ಅಣ್ಣ, ತಮ್ಮಂದಿರು ಬರುತ್ತಿದ್ದರೆ, ಶ್ರೀಮಂತ ರೌಡಿ ಗ್ಯಾಂಗ್‌ ಬಂದ ಹಾಗಿರುತ್ತದೆ. ಆದರೂ, ಗುರುಕಿರಣ್‌ ಅವರು ಬಹಳ ಶ್ರಮ ಪಟ್ಟು ಬೆಳೆದರು. ಅವರ ಸ್ವಂತ ಹೋಟೆಲ್‌ನಲ್ಲಿ ಅವರೇ ಗಿಟಾರ್‌ ಹಿಡಿದು ಹಾಡುತ್ತಿದ್ರು. ಜನ 10ರೂ ಟಿಪ್ಸ್‌ ಕೊಟ್ಟು ಹೋಗುತ್ತಿದ್ರು. ಹಾಗೆಯೇ ಅವರನ್ನು ಉಪೇಂದ್ರ ಅವರು ನೋಡಿ ಕರೆದದ್ದು, ಮ್ಯೂಸಿಕ್‌ ಡೈರೆಕ್ಟರನ್ನಾಗಿಯೂ ಮಾಡಿದ್ರು.


ಹುಡುಗಾಟದಿಂದ ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಆರ್ಕೆಸ್ಟ್ರಾ ಶೋಗಳಲ್ಲಿ ಆ ಕಾಲದಲ್ಲಿಯೇ ವೇದಿಕೆ ಮೇಲೆ ಅವರ ಹೆಸರು ಕರೆಯುತ್ತಿದ್ದಂತೆ ಆಕಾಶದಿಂದ ಬುಟ್ಟಿಯ ಮೇಲಿಂದ ಗಿಟಾರ್‌ ಹಿಡಿದು ಇಳಿಯುತ್ತಿದ್ದರು. ರವಿಚಂದ್ರನ್‌ ಸಿನಿಮಾಗಳಲ್ಲಿ ಮಾಡಿದ್ದನ್ನು ಅವರು ರಿಯಲ್ ಲೈಫ್‌ನಲ್ಲಿ ಮಾಡುತ್ತಿದ್ರು. ಆಗೇನು ಅವರು ಜನಪ್ರಿಯರಾಗಿರಲಿಲ್ಲ. ಜನಪ್ರಿಯರಾಗುವ ಸಲುವಾಗಿ ಹಾಗೆ ಮಾಡುತ್ತಿದ್ರು. ಅತ್ಯುತ್ತಮವಾಗಿ ಗಿಟಾರ್‌ ನುಡಿಸುವವರು ಮತ್ತು ಮಿಮಿಕ್ರಿ ಮಾಡುವವರು ಅವರಿಗೆ ಬೇಕಿತ್ತು. ಅತ್ಯುತ್ತಮವಾದುದ್ದನ್ನೇ ಆರಿಸಿ ಬೆಳೆಯುತ್ತಿದ್ರು. ಓಂ ಪುರಿ, ಸುನೀಲ್‌ ಶೆಟ್ಟಿ ಅವರನ್ನೆಲ್ಲ ಶೋಗಳಿಗೆ ಕರೆಸುತ್ತಿದ್ರು. ಕಲಾವಿದರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ರು.
ಮುಂದುವರೆಯುವುದು...


33 views