ಗಿರಿಜಾ ಲೋಕೇಶ ಅವರ ಕಾಣದ ಮುಖ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 59


ಗಿರಿಜಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಚರಿತ್ರೆಯ ಕಡಲು. ಅವರಲ್ಲಿ ಬಹಳಷ್ಟು ವಿಷಯಗಳಿವೆ. ಗಿರಿಜಮ್ಮ ಅವರಿಗೆ ಸಿಗುವ ಸಂಭಾವನೆಯನ್ನು ಇನ್ನೊಂದು ಕವರಿಗೆ ಹಾಕಿ ಅದರಲ್ಲಿ ಹೆಸರು ಬರೆಯದೇ ಕಲಾವಿದರಿಗೆ ಗಿಫ್ಟ್‌ ಕೊಟ್ಟು ಬರುತ್ತಾರೆ. ಯಾರೊ ವಿಮೆ ಮಾಡಿಸಲು ಹೇಳಿದ್ರೆ, ಅದರ ಕಮಿಷನ್‌ ಇನ್ನೊಬ್ಬ ಕಲಾವಿದರ ಹೆಸರು ಹೇಳಿ ಅವರಿಗೆ ಕೊಡಬೇಕು ಎಂದು ಹೇಳಿದಂಥವರು ಅವರು. ತಾವು ಮಾಡುವ ದಾನವನ್ನು ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಈ ನಡುವೆ ಅವರು ಸಂಪಾದನೆ ಮಾಡಿದಷ್ಟನ್ನು ಅವರು ದಾನ ನೀಡುತ್ತಿದ್ದಾರೆ.


ಇತಿಹಾಸವನ್ನು ಮೆಲುಕು ಹಾಕುವುದರಲ್ಲಿ ಕಲಾಮಾಧ್ಯಮ ದೊಡ್ಡ ಕ್ರಾಂತಿ ಮಾಡಿದೆ. ಕಲಾಮಾಧ್ಯಮದ ಒಳಗೊಂದು ಚಿಂತನೆಯಿದೆ. ಕನ್ನಡ ಕಲಾವಿದರು, ಸಾಧಕರ ಚರಿತ್ರೆಯನ್ನು ಬೆಳೆಸಿದಾಗ, ಮಕ್ಕಳಿಗೆ ತೋರಿಸಿದಾಗ ಇದೊಂದು ಮನೆಮಾತಾಗುತ್ತದೆ. ಕಲಾವಿದರ ನೋವು, ಸಂಕಟ ಗೊತ್ತಾದರೆ, ಮಕ್ಕಳು ಬೆಳೆಯಲು ಬಹಳ ಸುಲಭವಾಗುತ್ತದೆ. ಕಲಾವಿದರ ಅನುಭವಗಳು ಒಂದೊಂದು ಏಟಿದ್ದಂತೆ, ಅದರಿಂದ ಮಕ್ಕಳು ಒಳ್ಳೆಯ ಶಿಲೆಯಾಗಿ ಬೆಳೆಯುತ್ತಾರೆ.ಮುಂದುವರಿಯುವುದು...

32 views