ಗೋವಿಂದರಾಜ್‌ ಅವರನ್ನೂ ಕಿಡ್ನ್ಯಾಪ್‌ ಮಾಡಿದ್ದ ವೀರಪ್ಪನ್ ಮರಳಿ ಕಳಿಸಿದ್ಯ್ದಾಕೆ


ಗೋವಿಂದರಾಜ್‌ ಅವರನ್ನು ವೀರಪ್ಪನ್‌ ಕಾಡಿಗೆ ಕರೆದುಕೊಂಡು ಹೋಗಿದ್ದ. ಅವರಿಗೆ ಮೈ ಹುಷಾರಿಲ್ಲ ಹೃದಯಾಘಾತವಾಗುತ್ತದೆ ಎಂದು ವಾಪಸ್‌ ಕಳುಹಿಸಿಬಿಟ್ಟ. ರಾಜ್‌ಕುಮಾರ್‌ ಅವರು ಗೋವಿಂದರಾಜ್‌ ಅವರನ್ನು ಕಳುಹಿಸುವಂತೆ ಮನವಿ ಮಾಡಿಕೊಂಡಿದ್ರು. ನಾಗಪ್ಪ ಓಡಿಬಂದುಬಿಟ್ಟ. ಅವನು ಸಿಕ್ಕಿದ್ರೆ ಶೂಟ್‌ ಮಾಡಿಬಿಡುತ್ತಿದ್ದ.


ರಾಜ್‌ಕುಮಾರ್‌ ಅವರನ್ನು ಕೊನೆಗೆ ಬಿಟ್ಟು ಕಳುಹಿಸಿದ. ಹೇಗೆ? ಯಾಕೆ? ಎಂಬುದು ಈಗ ಬೇಡದಿರುವ ವಿಷಯ.


ಗೋವಿಂದು ಬಂದು ಅಲ್ಲಿಯ ಕಥೆ ಹೇಳಿದಾಗ, ರಾಜ್‌ಕುಮಾರ್‌ ಅವರು ಇಷ್ಟೆಲ್ಲ ಕಷ್ಟಪಡುತ್ತಿದ್ದಾರೆ ಎಂಬುದು ತಿಳಿದು ಸಂಕಟವಾಯ್ತು. ವಿಮಾನದಿಂದ ಬಂದ ತಕ್ಷಣ ಮಣ್ಣಿಗೆ ನಮಸ್ಕಾರ ಮಾಡಿದ್ರು. ಕನ್ನಡದ ನೆಲವನ್ನು ಮುಟ್ಟುತ್ತಿದ್ದೇನೆ ಎಂಬ ಖುಷಿ ಅವರಿಗೆ. ತಮ್ಮ ಮಣ್ಣಿನ ಬಗ್ಗೆ ಅಷ್ಟು ಅಭಿಮಾನ ಅವರಿಗಿತ್ತು.ಮುಂದುವರೆಯುವುದು...

18 views