ಚಳುವಳಿಗಳಲ್ಲಿ ಭಾಗವಹಿಸದ ಈಗಿನ ನಟರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 101


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)‌
ಈಗ ಯಾವ ಚಳುವಳಿಗೂ ಯಾವ ಕಲಾವಿದರು ಬರುತ್ತಿಲ್ಲ ಏಕೆ ಎಂಬುದು ನನಗೆ ಗೊತ್ತಿಲ್ಲ. ಇವರೆಲ್ಲ ಸೇರಿಕೊಂಡು ಬಂದರೆ, ಯಾವ ಸಾಧನೆಯನ್ನು ಮಾಡಬಹುದು. ಸುದೀಪ್‌, ದರ್ಶನ್‌, ಯಶ್‌, ಪುನೀತ್‌, ರಾಘಣ್ಣ, ಶಿವಣ್ಣ... ಇವರೆಲ್ಲ ಸೇರಿ ಬರುತ್ತಾರೆ ಎಂದಾದರೆ, ಇಡೀ ಕರ್ನಾಟಕದಲ್ಲಿ ಕ್ರಾಂತಿ ಎಬ್ಬಿಸಬಹುದು. ಇವರಿಗೆಲ್ಲ ಅಷ್ಟು ಶಕ್ತಿ ಇದೆ. ಜನರ ಮೇಲೆ ಅಷ್ಟೊಂದು ಹಿಡಿತ ಇದೆ.


ರಾಜ್‌ಕುಮಾರ್‌ ಅವರಿಗೆ ಹೆಚ್ಚು ಅಭಿಮಾನಿಗಳ ಸಂಘ ಇದೆ. ಕರ್ನಾಟಕದಲ್ಲಿ ಸುಮಾರು 1700 ಅಭಿಮಾನಿಗಳ ಸಂಘವಿದೆ ಎಂಬ ವರದಿ ಓದಿದ್ದೆ. ಈಗಿನ ನಟರಿಗೆ ಇದು ಯಾವ ಮಹಾ ಕಷ್ಟ. ಅವರಿಗೆ ಇಚ್ಛಾಶಕ್ತಿ ಬೇಕು ಅಷ್ಟೆ. ಕರ್ನಾಟಕದಲ್ಲಿ ನಾಡು, ನುಡಿ, ಜಲದ ಸಮಸ್ಯೆ ಇದ್ದಾಗ ಕಲಾವಿದರೆಲ್ಲ ಕೈಗೂಡಿಸಿದರೆ ಯಾವುದೇ ಕ್ರಾಂತಿಯನ್ನಾದರೂ ಸುಲಭವಾಗಿ ಯಶಸ್ಸಿಗೆ ತರಬಹುದು ಎಂಬುದು ನನ್ನ ವೈಯಕ್ತಿಕ ಭಾವನೆ.ಮುಂದುವರಿಯುವುದು...

24 views