ಜಾನ್‌ ದೇವ್ರಾಜ್ ಗೆ ವಿಷ್ಣುವರ್ಧನ್‌ ಕೊಟ್ಟ ಮನಿಶ್ಮೆಂಟ್?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 65

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಸೋ ಸಬ್ಸೀಕ್ವೆಂಟ್ಲೀ ಐ ವುಡ್ ಲೈಕ್ ಟು ಶೇರ್ ಆನ್ ಅದರ್ ಐಡಿಯಾ ವಿತ್ ಯು, ಫ್ರಮ್ ಡಿಫ್ರೆಂಟ್ ಫಿಲ್ಮ್ ನಾಟ್ ಫ್ರಮ್ ಮಾಲ್ಗುಡಿ.ಆಕ್ಚುಲಿ ವಿ ವರ್ಕಡ್ ಇನ್ ಅ ಸಿನಿಮಾ, ಅಲ್ಲಿ ನಾವೇ ತಟ್ಟೆಗಳೆಲ್ಲಾ ತೊಳಿಬೇಕಾಗಿತ್ತು, ಒಂದು ಸಲ ‘ವಿಷ್ಣುವರ್ಧನ್ ಬಂದಿದ್ರು, “ಸಾರ್ ನೀವೇ ತಟ್ಟೆ ತೊಳಿಬೇಕೂಂತ” ಹೇಳ್ಬಿಟ್ಟೆ ನಾನು. ರಮೇಶ್ ಭಟ್ “ಏನು ಜಾನ್, ಅಣ್ಣನಿಗೆ ಹಂಗೆಲ್ಲಾ ಹೇಳ್ಬಿಟ್ಟೆ ನೀನು?” ಅಂದ್ರು. ಸೋ ಹೀ ಆಕ್ಚುಲಿ ವಾಶ್ಡ್ ಹಿಸ್ ಪ್ಲೇಟ್ ಫ್ರಮ್ ದ ಲೆಫ್ಟ್ ಹ್ಯಾಂಡ್. ಇಟ್ ವಾಸ್ ಅ ಬ್ಯೂಟಿಫುಲ್ ಎಕ್ಸಪೀರಿಯನ್ಸ್ ಫಾರ್ ಮಿ.


ಪರಮ್: ವಿಷ್ಣುವರ್ಧನ್ ಅವ್ರೂ ತಟ್ಟೆ ತೊಳ್ಕೊತಿದ್ರು?


ಜಾನ್ ದೇವರಾಜ್: ಹೌದು ತೊಳ್ದಿದ್ದಾರೆ. ಆರು ತಿಂಗಳು ಆದ್ಮೇಲೆ ವಿಷ್ಣು ಕರ್ದಿದ್ರು ಅವಾಗ, “ ಸೋ ಯು ಮೇಡ್ ಮಿ ವಾಷ್ ಮೈ ಪ್ಲೇಟ್ಸ್. ಸೋ ಪನಿಷ್ಮೆಂಟ್ ಫಾರ್ ಯು” ಅಂದ್ರು. “ಏನು ಪನಿಶ್ಮೆಂಟ್ ಕೊಡ್ತೀರ ಕೊಡಿ ಅಣ್ಣ” ಅಂದೆ. “ಯು ಆರ್ ಅ ವೆರಿಗುಡ್ ಆರ್ಟ್ ಡೈರೆಕ್ಟರ್, ನನ್ನ ಮೊದಲನೇ ಸಿನಿಮಾಗೆ ನೀನೇ ಆರ್ಟ್ ಡೈರೆಕ್ಟರ್ ಅಂದ್ರು.” ‘ಪೋಲೀಸ್ ಮತ್ತು ದಾದಾ’ಗೆ ಮಾಡ್ದೆ. ‘ಪೋಲೀಸ್ ಮತ್ತು ದಾದಾ’ ಗೆ ಯಾಕೆ ಬಂದೆ ಅಂದ್ರೆ? ಒಂದು ಚಾಂಡಲ್ಯಿಯರ್ ಮಾಡ್ಬೇಕಾಗಿತ್ತು, ಒಂದು ಚಾಂಡಲ್ಯಿಯರ್ ಮೂವತ್ತು ಸಾವಿರ ರೂಪಾಯಿ. ಹ್ಯಾಂಗ್ ಮಾಡಿರ್ತಾರೆ ಅದನ್ನ ಶೂಟ್ ಮಾಡಿದ ತಕ್ಷಣ ಅದು ಕೆಳಗೆ ಬಿದ್ದು ಹೊಡ್ದೋಗ್ಬಿಡುತ್ತೆ. ಸೋ ಎರಡು ಬೇಕು, ಒಂದು ಹಿಂದಿಗೆ, ಇನ್ನೊಂದು ಕನ್ನಡಕ್ಕೆ. ನಾನು ಯಾಕೆ ಇಷ್ಟೆಲ್ಲ ಡಿಸ್ಟ್ರಾಯ್ ಮಾಡ್ಬೇಕೂಂತ ಹೇಳ್ಬಿಟ್ಟು, ವಿಷ್ಣುಗೆ ಹೇಳ್ದೆ “ ವಿಷ್ಣು ಕ್ಯಾನ್ ಯು ಗೆಟ್ ಮಿ 300 ಬಿಯರ್ ಬಾಟಲ್ಸ್”ಅಂದೆ. ಒಂದ್ರೂಪಾಯಿ ಒಂದು ಬಿಯರ್ ಬಾಟಲ್ ಅಂದ್ರೆ, ಮುನ್ನೂರು ರೂಪಾಯಿ ಆಯ್ತು. ಸೋ ಐ ಸೇವ್ಡ್ ಇನ್ ಒನ್ ಶಾಟ್, ಫಿಫ್ಟೀನೈನ್ ಥವ್ಸಂಡ್ ರುಪೀಸ್. ಸೋ ಹೀ ಸೆಡ್ “ಕ್ಯಾನ್ ಯು ಮೇಕ್ ಒನ್ ಮೋರ್ ಫಾರ್ ಮೀ? ನಮ್ಮ ಮನೆಗೆ ಈ ತರ ಚಾಂಡಲ್ಯಿಯರ್ ಮಾಡೋಣಂತ”.ಮುಂದುವರೆಯುವುದು…

20 views