ಜೇಬು ತುಂಬಾ ದುಡ್ಡಿರ್ತಿತ್ತು ಹೊಟ್ಟೆ ಮಾತ್ರ ಖಾಲಿ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 1
ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ನಾಲ್ಕು ಸಲ ಬಿದ್ದಿದ್ದೇನೆ. ಏಳು ವರ್ಷ ಕುಂಟುತ್ತಲೇ ನಡೆದಿದ್ದೇನೆ. ಯಾರಾದ್ರೂ ಕೇಳಿದ್ರೆ, ಸ್ವಲ್ಪ ಕಾಲು ನೋವು. ನಾಳೆ ಸರಿ ಹೋಗುತ್ತದೆ ಎನ್ನುತ್ತಿದ್ದೆ. ‘ಸೂಪರ್‌’ ಸಿನಿಮಾದ ಕಾರ್ಯಕ್ರಮದಲ್ಲಿ ನನ್ನ ಪ್ರದರ್ಶನ ಮುಗಿದು ಕೆಳಗೆ ಬರಬೇಕಾದರೆ ಮೆಟ್ಟಿಲು ತೆಗೆದುಬಿಟ್ಟಿದ್ರು. ಲೈಟ್‌ ಆಫ್‌ ಆಗಿತ್ತು. ನಾನು ಕೆಳಗೆ ಬಿದ್ದು. ಡಿಸ್ಕ್‌ಗೆ ಪೆಟ್ಟು ಬಿದ್ದಿತ್ತು.


ಎಂಟು ವರ್ಷ ಕಾಲು ನೋವಿನಿಂದ ಸಂಕಟ ಅನುಭವಿಸಿದ್ದೇನೆ. ಜಾಸ್ಥಿ ಹೊತ್ತು ಕೂರಲು ಆಗುತ್ತಿರಲಿಲ್ಲ. ಮಲಗಲು, ನಿಂತುಕೊಳ್ಳಲು ಆಗುತ್ತಿರಲಿಲ್ಲ. ವಿಮಾನದಲ್ಲಿ ದುಬೈವರೆಗೂ ನಿಂತಿದ್ದೆ. ಶೋಗೆ ಹೋಗಬೇಕಾದರೆ ರಾತ್ರಿಯಿಡೀ ಬಸ್‌ನಲ್ಲಿ ನಿಂತೇ ಹೋಗಿದ್ದೇನೆ. ಮತ್ತೆ ಅಲ್ಲಿ ಹೋಗಿ ಪ್ರದರ್ಶನ ಕೊಡಬೇಕಿತ್ತು. ದಿವಸಕ್ಕೆ ಮೂರರಿಂದ, ನಾಲ್ಕು ಶೋ ಮಾಡುತ್ತಿದ್ದೆ. ಎಲ್ಲಾ ಪ್ರದರ್ಶನ ಮುಗಿಸಿ ಬರುವಾಗ ರಾತ್ರಿ 12 ಗಂಟೆ ಆಗುತ್ತಿತ್ತು. ಜೇಬು ತುಂಬಾ ದುಡ್ಡಿದ್ದರೂ, ಊಟ ಮಾಡಲು ಹೋಟೆಲ್‌ ಮುಚ್ಚಿರುತ್ತಿತ್ತು. ಎಷ್ಟೋ ಸಲ ಹೊಟ್ಟೆ ಹಸಿದುಕೊಂಡು ಮಲಗಿದ್ದೇನೆ. ನಾನು ಮಾಡುವ ಜೋಕ್‌ಗಳ ಹಿಂದೆ ಬಹಳಷ್ಟು ನೋವಿನ ಕಥೆಯಿದೆ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಸಿನಿಮಾಗಳಲ್ಲೆಲ್ಲ ಮಾಡಿದ್ದೇನೆ. ನಂತರದಲ್ಲಿ ನಾನೇ ಸಿನಿಮಾ ಕಡಿಮೆ ಮಾಡಿದೆ.ಮುಂದುವರೆಯುವುದು...

22 views