ಜಿಮ್ಮಿ ಡ್ರೋನ್ ಇಲ್ದಿರೋಕಾಲದಲ್ಲಿ ಶಂಕರ್‌ ಐಡಿಯಾ ಹೇಗಿರ್ತಿತ್ತು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 33

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಇನ್ನೊಂದು ಬಹಳ ಸ್ವಾರಸ್ಯಕರವಾದ ವಿಷಯ ಏನಂದ್ರೆ, ಸ್ವಾಮಿ ಬಗ್ಗೆ ಸ್ಕೂಲಲ್ಲಿ ಒಂದು ಕಂಪ್ಲೇಂಟ್ ಕೊಡ್ತಾರೆ ಪ್ರಿನ್ಸಿಪಲ್. ಅದು ತಗೊಂಡು ಮನೆಗೆ ಬರ್ತಾನೆ ಅವ್ನು. ಮನೆಗೆ ಬರುವಾಗ ಲೆಟರಲ್ಲೇನಿದೆ? ಅದು ವಾಯ್ಸ್ ಓವರಲ್ಲಿ ಪೋಸ್ಟ್ ಮಾಡ್ಕೊಂಡು ಬರ್ತೀವಿ. ಸ್ವಾಮಿ ತಂದೆ ಥರ್ಡ್ ಫ್ಲೋರಲ್ಲಿದ್ದಾರೆ, ಅಜ್ಜಿ ಮತ್ತೆ ಅವ್ನು ಟ್ರಾಲಿ ಶಾಟಲ್ಲಿ ಬರ್ತಾ ಇದ್ದಾರೆ. ಬಂದು ಫಸ್ಟ್ ಫ್ಲೋರ್, ಸೆಕೆಂಡ್ ಫ್ಲೋರ್, ಥರ್ಡ್ ಫ್ಲೋರ್ ಗೆ ಹೋಗಿ, ಅಟ್ಟದ ಮೇಲೆ ಸ್ವಾಮಿ ಅವನ ಅಪ್ಪನ ಮೀಟ್ ಮಾಡ್ಬೇಕು. ಅಜ್ಜಿಗೆ ಸ್ವಾಮಿಯಷ್ಟು ಫಾಸ್ಟಾಗಿ ಹತ್ತಕ್ಕಾಗಲ್ಲ. ನಾವು ಅಡಿಕೆ ಮರದಲ್ಲಿ ಮಾಡಿದ, ಒಂದು ತೊಟ್ಲಲ್ಲಿ ಕ್ಯಾಮೆರಾಮ್ಯಾನ್ ನ ಕೂರ್ಸಿ, ನಿಧಾನವಾಗಿ ಮೇಲಕ್ಕೆ ಎಳೀತೀವಿ.


40 ಅಡಿ ಕ್ರೇನ್ ಇರ್ಲಿಲ್ಲ ನಮಗೆ ಅವಾಗ. ಯಾವುದೋ ಒಂದು ಶಾಟ್ ಗೆ ಇಲ್ಲಿಂದ ತಗೊಂಡು ಹೋಗೋದು, ವರ್ಕೌಟ್ ಆಗಲ್ಲ ನಮಗೆ, ಸೋ ತೊಟ್ಲಿಗೆ ಹಗ್ಗ ಕಟ್ಟಿ, ಮೇಲ್ಗಡೆ ರಾಟೆ ಹಾಕ್ಬಿಟ್ಟು, ಕ್ಯಾಮರಾ ಮ್ಯಾನ್ ನ ತೊಟ್ಲಲ್ಲಿ ಕೂರ್ಸಿ, ಮೇಲಕ್ಕೆ ಎಳಿತಾ ಇದ್ವಿ. ಇಲ್ಲಿ ಅಜ್ಜಿ ಹೋಗ್ತಾ ಇದ್ದಾಳೆ, ಫಸ್ಟ್ ಫ್ಲೋರಲ್ಲಿ ಇನ್ನೊಬ್ಬಳು ಡೂಪ್ ಅಜ್ಜಿ, ಸಕೆಂಡ್ ಹಾಗೂ ಥರ್ಡ್ ಫ್ಲೋರಲ್ಲೂ ಒಂದು ಡೂಪ್ ಅಜ್ಜಿ. ಆ ಮನೆ ಹೇಗಿದೆ ಅಂದ್ರೆ, ಗ್ರೌಂಡ್ ಫ್ಲೋರಲ್ಲೂ ಕಿಟಕಿ ಇದೆ. ಫಸ್ಟ್ ಫ್ಲೋರಲ್ಲೂ ಕಿಟಕಿ ಇದೆ. ಥರ್ಡ್ ಫ್ಲೋರಲ್ಲೂ ಕಿಟಕಿ ಇದೆ. ಹಾಗೆ ಮೂರು ಕಿಟಕಿಗಳ ಪಕ್ಕನೂ ಒಂದೊಂದು ಅಜ್ಜಿಯರನ್ನ ನಿಲ್ಸಿ, ಸ್ವಾಮಿ ಕರ್ಕೊಂಡು ಹೋಗ್ತಿದ್ದ. ಸೊ ಇದು ಟೆಕ್ನಿಕ್.

ಈಗೆಲ್ಲಾ ಬೇಕಾದಷ್ಟು ಎಕ್ಯುಪ್ಮೆಂಟ್ ಬಂದಿದೆ. ಗೋಪ್ರೊ ಅಂತ ಕ್ಯಾಮರಾ ಬಂದಿದೆ, ಜಿಮ್ಮಿ ಇದೆ, ಡ್ರೋನ್ ಇದೆ. ಅದೇನೂ ಇಲ್ದಿದ್ದಾಗ ಕೂಡ ಅದೇ ತರ ಶಾಟ್ಸ್ ಗಳನ್ನ, ಅಲ್ಲಿ ಸಿಗುವಂತಹ ವಸ್ತುಗಳನ್ನು ಉಪಯೋಗ್ಸಿ ಮಾಡ್ದವ್ನು.ಮುಂದುವರೆಯುವುದು…

20 views