ಜೇಸುದಾಸ್‌ ಅವರನ್ನ ನೋಡಿ ಮನೆ ಕೊಡಲು ನಿರಾಕರಿಸಿದ್ದರು ಮನೆ ಮಾಲೀಕರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 129


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಜೇಸುದಾಸ್‌ ಅವರಿಗೂ ನಾನು ನೆರವು ನೀಡಿದ್ದೇನೆ. ಮಲಯಾಳದಲ್ಲಿ ಅವರು ಹೆಸರು ವಾಸಿಯಾಗಿದ್ದರು. ಅವರಿಗೆ ಮದ್ರಾಸ್‌ನಲ್ಲಿ ಬಂದು ಇರಬೇಕೆಂಬ ಆಸೆಯಾಯಿತು. ಅಲ್ಲಿ ಮನೆ ಹುಡುಕುತ್ತಿದ್ರು. ಎಲ್ಲೂ ಮನೆ ಸಿಕ್ಕಿರಲಿಲ್ಲ. ಎಆರ್‌ಕೆ ಐಯ್ಯರ್‌ ಕಾಲೊನಿಯಲ್ಲಿ ನಮ್ಮ ಕಚೇರಿ ಇತ್ತು. ಅಲ್ಲೊಂದು ಎಂಟು ಮನೆ ಇತ್ತು. 1,500 ಬಾಡಿಗೆ ಹೇಳುತ್ತಿದ್ದರು. ಅವರಿಗೆ ಯಾರೋ ಬ್ರೋಕರ್‌ ಇಲ್ಲೊಂದು ಮನೆ ಇದೆ ಎಂದು ಹೇಳಿದ್ದರಂತೆ. ಅವರು ಬಂದು ಮನೆ ನೋಡಿದ್ರು. ಅವರಿಗೆ ಮನೆ ಇಷ್ಟ ಆಯಿತು. ಮನೆ ಮಾಲೀಕನ ಬಳಿ ಹೋಗಿ ಮಾತನಾಡಿದ್ರೆ, ಸಿನಿಮಾದವರಿಗೆ ಮನೆ ಕೊಡುವುದಿಲ್ಲ. ಅದರಲ್ಲೂ ನೀವು ಒಂಟಿಯಾಗಿದ್ದೀರಾ ನಿಮಗೆ ಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿ ಕಳುಹಿಸಿದ್ದರು. ಮನೆ ತುಂಬಾ ಚೆನ್ನಾಗಿದೆ ಬೇಕು ಎಂದು ಅವರು ಮತ್ತೆ ಮಾಲೀಕರ ಮನವೊಲಿಸಲು ಪ್ರಯತ್ನಿಸಿದ್ದರು. ಆಗ ಮನೆಯ ಮಾಲೀಕರು ಇಲ್ಲಿ ಅನುಪಮ್‌ ಮೂವೀಸ್‌ ಎಂದಿದೆ. ಅದರಲ್ಲಿ ಭಗವಾನ್‌ ಎಂದಿದ್ದಾರೆ. ಅವರು ಬಂದು ಹೇಳಿದರೆ ಕೊಡುತ್ತೇವೆ ಎಂದರು.


ಜೇಸುದಾಸ್‌ ಸೀದಾ ಬಂದು ನನ್ನ ಹತ್ತಿರ ಕೇಳಿದರು. ನಾನು ಹೋಗಿ, ಅವರು ನೀವು ಅಂದುಕೊಂಡ ಹಾಗೆ ಚಿಕ್ಕ ಮನುಷ್ಯ ಅಲ್ಲ. ಹೆಸರುವಾಸಿ. ನೀವು ತಮಿಳುನಾಡಿನಲ್ಲಿ ಇರುವುದರಿಂದ ಅವರ ಹೆಸರು ನೀವು ಜಾಸ್ತಿ ಕೇಳಿಲ್ಲ ಅನಿಸುತ್ತದೆ. ದಯವಿಟ್ಟು ಅವರಿಗೆ ಮನೆ ಕೊಡಿ ಎಂದೆ. ಆಗ ಅವರು, ನೀವು ಹೇಳಿದ ಮೇಲೆ ಕೊಡುತ್ತೇವೆ ಎಂದರು. ಚಿತ್ರರಂಗದಲ್ಲಿ ನನಗೆ ಈ ರೀತಿ ಹಲವರ ಪುಟ್ಟ, ಚಿಕ್ಕ ಸಂಬಂಧಗಳಿವೆ.ಮುಂದುವರೆಯುವುದು...

21 views