“ಟ್ರೈನ್‌ ಇಲ್ದೆ ಟ್ರೈನ್‌ ಶಾಟ್‌ ತೆಗಿತಿದ್ವಿ”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 32

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ರಮೇಶ್ ಭಟ್: ಟ್ರೈನ್ ಒಳಗಡೆ ಶೂಟ್ ಮಾಡೋದಕ್ಕೆ ಬೋಗಿ ಕೊಡಲ್ಲ. ಯಾಕಂದ್ರೆ ಟ್ರೈನ್ ಬಂದು ನಿಲ್ಲುತ್ತೆ, ಐದುವರೆಗೆ ಅಲ್ಲಿಂದ ಹೊರಡುತ್ತೆ. ತಿರ್ಗ ಅಲ್ಲಿ ಟ್ರೈನ್ ಇರಲ್ಲ. ನಮಗೆ ಟ್ರೈನ್ ಒಳಗಡೆ ಹಾಗೂ ಹೊರಗಡೆ ಶೂಟ್ ಮಾಡೋದಿದೆ. ಟ್ರೈನ್ ಒಳಗಡೆದು ಹೇಗೆ ಶೂಟ್ ಮಾಡೋದು? ಒಳಗಡೆನೂ ಮಾಡಿದ್ವಿ. ನಮ್ಮ ಯೂನಿಟ್ ವ್ಯಾನಲ್ಲೇನೇ. ಟ್ರೈನ್ದು ಫೋಟೋ ತಗ್ಸಿ, ಅದರ ಕಲರ್ ಮ್ಯಾಚ್ ಆಗುವ ಹಾಗೆ ಜಾನ್ ದೇವರಾಜ್ ಕೈಯಲ್ಲಿ ಪೇಂಟ್ ಮಾಡ್ಸಿ, ಆ ಕಿಟಕಿಗೆ ಬಾರ್ ಹಾಕ್ಸಿ ನಮ್ಮ ಜನರೇಟರ್ ವ್ಯಾನಲ್ಲೇ ಟ್ರೈನ್ ಒಳಗಡೆ ಹುಡುಗ ಕೂತಿರೋ ಶಾಟ್ ಶೂಟ್ ಮಾಡಿದ್ವಿ. ಹೀಗೆಲ್ಲಾ ಸರ್ಕಸ್ ಮಾಡಿಬಿಟ್ವಿ.


ಪರಮ್: ಇದ್ಯಾವುದೂ ಪ್ರೇಕ್ಷಕರಿಗೆ ಗೊತ್ತೇ ಆಗ್ಲಿಲ್ಲ ಅಲ್ವಾ?


ರಮೇಶ್ ಭಟ್: ಗೊತ್ತಾಗೋದಿಲ್ಲ. ಅಂದ್ರೆ ಕ್ರಿಯೇಟಿವಿಟಿ ಹಾಗಿದೆ. ನಮ್ಮ ಬಡ್ಜೆಟ್ ಏನಿದೆ ಅದಕ್ಕೆಲ್ಲಾ ಹೊಂದ್ಕೊಂಡು ಮಾಡುವಂತಹ ಕೆಲ್ಸಗಳು.ಮುಂದುವರೆಯುವುದು…

14 views