ಟಿವಿ.ಲಿ ಹುಡುಗಿನ ನೋಡಿ ರಾಜ್‌ಕುಮಾರ್‌ ಮಾಡಿದ್ದೇನು’

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 64ಕಲೆ ಏನೇನು ಕೊಟ್ಟಿದೆ ಎಂದು ಯೋಚನೆ ಮಾಡಿದ್ರೆ ಆಶ್ಚರ್ಯ ಆಗುತ್ತದೆ. ಟಿ.ವಿ ಕಲಾವಿದರೆಂದರೆ ಸುಲಭದ ಮಾತಲ್ಲ. ಒಂದು ಕಾಲದಲ್ಲಿ ನಾಟಕದವರನ್ನು ಊರಾಚೆ ಇರಿಸುತ್ತಿದ್ರು. ಅದೇ ಈಗ ಟಿ.ವಿಯನ್ನು ಹಾಲ್‌ನಲ್ಲಿ, ದೇವರ ಕೋಣೆಯ ಪಕ್ಕ.. ಹೀಗೆ ಉತ್ತಮ ಸ್ಥಾನದಲ್ಲಿ ಇರಿಸುತ್ತಾರೆ. ಅಂದರೆ ಈ ಮೂಲಕ ಕಲಾವಿದನಿಗೂ ಗೌರವ ಕೊಟ್ಟಂತೆ ಅಲ್ಲವೇ. ಹೀಗಿರುವಾಗ ಪರದೆಯ ಮೇಲೆ ಕೆಟ್ಟ ಕೆಟ್ಟ ಮಾತನಾಡುವುದು, ಕಾಲ ಮೇಲೆ ಕಾಲು ಹಾಕಿಕೊಳ್ಳುವುದು. ಚೋಟುದದ್ದ ಬಟ್ಟೆ ಹಾಕಿಕೊಳ್ಳುವುದು ಎಷ್ಟು ಸರಿ.


ನಾನ್ನೊಮ್ಮೆ ರಾಜ್‌ಕುಮಾರ್‌ ಅವರ ಮನೆಗೆ ಏನೋ ಕೆಲಸಕ್ಕೆ ಹೋಗಿದ್ದೆ. ಆಗ ರಾಜ್‌ಕುಮಾರ್‌ ಅವರ ಮನೆಯಲ್ಲಿ ಟಿ.ವಿ ಆನ್‌ ಇತ್ತು. ಅದರಲ್ಲಿ ಹುಡುಗಿಯೊಬ್ಬಳು ಕಾಲ ಮೇಲೆ ಕಾಲು ಹಾಕಿಕೊಂಡು ಕೂತು ಮಾತನಾಡುತ್ತಿದ್ದಳು. ರಾಜ್‌ಕುಮಾರ್‌ ಅವರು ಟಿವಿಯನ್ನು ಸ್ವಲ್ಪ ಆಫ್‌ ಮಾಡಿ ಎಂದು ಮನೆಯವರಿಗೆ ಹೇಳಿದ್ರು. ನಾನು ರಾಜ್‌ಕುಮಾರ್‌ ಅವರನ್ನು ನೋಡಿದೆ. ಆಗವರು ‘ಪಾಪ, ಅವರಿಗೇನು ಗೊತ್ತು. ಎಲ್ಲೆಲ್ಲಿ ಯಾರ‍್ಯಾರು ಕೂತಿರುತ್ತಾರೆ. ನೀವೆಲ್ಲ ಇಲ್ಲಿ ಕೂತು ನೋಡುತ್ತಿದ್ದೀರಿ’ ಎಂದು ಹೇಳಿದ್ರು.


ಹೀಗೆ ಮಾಡುವುದು ಸರಿ ಇಲ್ಲ ಎಂದ್ರೆ, ಅಮೆರಿಕದಲೆಲ್ಲ ಮಾಡಲ್ವಾ ಎಂತಾರೆ. ಪ್ರಪಂಚದಲ್ಲಿ ಮಾಡ್ಲಿ. ಆದರೆ, ನಾವ್ಯಾಕೆ ಮಾಡಬೇಕು. ಅವರೇ ಗೌರವದಿಂದ ಎದ್ದು ನಿಂತು ಮಾತನಾಡುವುದನ್ನು ಕಲಿತಿದ್ದಾರೆ. ಅವರು ಬದಲಾಗುತ್ತಿದ್ದಾರೆ. ನಮ್ಮ ಮುಂದೆ ಕ್ಯಾಮೆರಾಮೆನ್‌ ಕ್ಯಾಮೆರಾ ಅಷ್ಟೇ ಇರುವುದು ಎಂದುಕೊಂಡಿರುತ್ತೇವೆ. ಆದ್ರೆ, ಕರ್ನಾಟಕದ ಏಳು ಕೋಟಿ ಜನರ ಪ್ರತಿಬಿಂಬ ಅವರು. ಎಷ್ಟೊಂದು ಹಿರಿಯರು ಟಿ.ವಿ ನೋಡುತ್ತಿರುತ್ತಾರೆ. ವಿದೇಶಿಯರನ್ನು ನಾವ್ಯಾಕೆ ಅನುಕರಿಸಬೇಕು. ಪ್ರಪಂಚದಲ್ಲಿ ಹಳೆಯ ಪರಂಪರೆಯನ್ನು ಅನುಸರಿಸುತ್ತಿರುವವರಲ್ಲಿ ನಾವು ಪ್ರಮುಖರು. ನಿಜ ಹೇಳಬೇಕೆಂದರೆ, ನಮ್ಮನ್ನು ಅವರು ಅನುಕರಿಸಬೇಕು.ಮುಂದುವರೆಯುವುದು...

41 views