ಡಾ.ರಾಜ್‌ ಅವರು ಬಾಲಕೃಷ್ಣ ಇಲ್ಲದೆ ಸಿನಿಮಾ ಮಾಡುತ್ತಿರಲಿಲ್ಲವಂತೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 60


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಬಾಲಕೃಷ್ಣ ಅವರು ನಾಟಕದಿಂದ ಸಿನಿಮಾಕ್ಕೆ ಬಂದರು. ಎಂ.ವಿ ರಾಜಮ್ಮ ಅವರ ‘ರಾಧಾ ರಮಣ’ ಸಿನಿಮಾದಲ್ಲಿ ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್‌ ಅವರನ್ನು ಪರಿಚಿಯಿಸಿದರು. ಆ ಚಿತ್ರದಿಂದ ಅವರಿಗೆ ಸ್ಥಾನ ಸಿಕ್ಕಿತು. ರಾಜ್‌ಕುಮಾರ್‌ ಅವರಿಗೆ ಬಾಲಕೃಷ್ಣ ಅವರು ಇಲ್ಲದೇ ಸಿನಿಮಾವನ್ನೇ ಮಾಡಬಾರದು ಎಂಬ ಭಾವನೆ ಬಂದಿತ್ತು.


ಜೀವನ ಚೈತ್ರದಲ್ಲಿ ಬಾಲಕೃಷ್ಣ ಅವರಿಗೆ ಪಾತ್ರವೇ ಇರಲಿಲ್ಲ. ಅವರಿಗೊಂದು ಪಾತ್ರ ಸೃಷ್ಟಿಸಿ ಭಗವಾನ್‌ ಎಂದು ರಾಜ್‌ಕುಮಾರ್‌ ಕೇಳಿದ್ರು. ಹಾಗಾಗಿ, ಬಾಲಕೃಷ್ಣ ಅವರಿಗಾಗಿ ಹಳ್ಳಿಯ ಮುಖ್ಯಸ್ಥನ ಪಾತ್ರವನ್ನು ಸೃಷ್ಟಿ ಮಾಡಿದೆ. ಆ ಸಿನಿಮಾದ ಪ್ರೊಡ್ಯೂಸರ್‌ ಪಾರ್ವತಮ್ಮ ಅವರು. ಒಂದೇ ದಿನದ ಚಿತ್ರೀಕರಣದ ಆ ಒಂದು ದೃಶ್ಯಕ್ಕೆ ಬಾಲಕೃಷ್ಣ ಅವರಿಗೆ 25 ಸಾವಿರ ಕೊಟ್ಟರು. ಬಾಲಕೃಷ್ಣ ಎಂದ್ರೆ ಅಷ್ಟು ಪ್ರೀತಿ ಅವರಿಗೆ.


ಬಾಲಕೃಷ್ಣ ಅವರಿಗೆ ಕೇಳಿಸದೇ ಹೋದರು, ಎದುರುಗಡೆಯವರು ಏನು ಮಾತಾಡುತ್ತಾರೆ ಎಂಬುದನ್ನು ತುಟಿ ಚಲನೆಯಿಂದಲೇ ತಿಳಿಯುತ್ತಿದ್ರು. ಒಂದೇ ಟೇಕ್‌ನಲ್ಲಿ ಮುಗಿಸುತ್ತಿದ್ರು. ರಾಜ್‌ಕುಮಾರ್‌, ನರಸಿಂಹರಾಜು, ಬಾಲಕೃಷ್ಣ, ಜಿ.ವಿ.ಅಯ್ಯರ್‌ ಅವರು ಎರಡನೇ ಟೇಕ್‌ ತೆಗೆದುಕೊಂಡಿದ್ದೇ ಇಲ್ಲ. ನಾಟಕಗಳಲ್ಲಿ ಎರಡನೇ ಟೇಕ್‌ ಇರುವುದೇ ಇಲ್ವಲ್ಲಾ, ಅಲ್ಲಿಯ ಅನುಭಗಳಿಂದಲೇ ಅವರು ಪರಿಣತರಾಗಿದ್ದರು.. ಅವರೆಲ್ಲ ನುರಿತ ಕಲಾವಿದರು.ಮುಂದುವರಿಯುವುದು...

27 views